ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲಾಕ್ ಕಾಂಗ್ರೆಸ್ ಮುಖಂಡನ ಮಗ NIA ಅಧಿಕಾರಿಗಳ ವಶ: ಫೋಟೋ ರಿಲೀಸ್ ಮಾಡಿದ ಬಿಜೆಪಿ ಶಾಸಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 7: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಮುಂದುವರಿಸಿದೆ. ಶಂಕಿತ ಉಗ್ರರಾದ ಮಾಝ್ ಮುನೀರ್, ಶಾರೀಕ್‌ನ ರೂಮ್‌ಮೇಟ್ ಆಗಿದ್ದ. ರೆಶಾನ್ ಶೇಖ್‌ನನ್ನು ಎನ್ ಐಎ ವಶಕ್ಕೆ ಪಡೆದುಕೊಂಡಿದೆ.

ಉಡುಪಿ ಮೂಲದ ರೆಶಾನ್, ಮಂಗಳೂರಿನ ಪಿಎ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಧಿಕಾರಿಗಳು ಕಾಲೇಜಿಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯ ಮೀನ ಅನ್ಮೋಲ್ ಅಪಾರ್ಟ್ ಮೆಂಟ್‌ನಲ್ಲಿ ರೆಶಾನ್ ಕುಟುಂಬ ಸಮೇತ ವಾಸವಿದ್ದು, ರೆಶಾನ್ ಮನೆಯಿಂದ ಎನ್‌ಐಎ ಅಧಿಕಾರಿಗಳು ಹಲವಾರು ದಾಖಲೆ ಪಡೆದಿದ್ದಾರೆ ಎನ್ನಲಾಗಿದೆ. ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್‌ ಬ್ಯಾಂಕ್ ಮಾಹಿತಿ, ಪಾಸ್ ಪೋರ್ಟ್, ವಿಳಾಸಗಳ ದಾಖಲೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೆಶಾನ್ ಶೇಖ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಶೇಖ್ ಮಗನಾಗಿದ್ದು, ಕಾಂಗ್ರೆಸ್ ಮುಖಂಡನ ಮಗನಿಗೆ ಶಂಕಿತ ಉಗ್ರರ ಸಂಪರ್ಕ ಹೊಂದಿರುವ ವಿಚಾರವನ್ನು ಬಿಜೆಪಿ ಟೀಕಿಸಿದೆ. ತಾಜಾವುದ್ದೀನ್ ಶೇಖ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆ ಉತ್ತಮ ಬಾಂಧವ್ಯವಿದ್ದು, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.

MLA Raghupathi Bhat Reaction About Congress Leaders Son Arrested By NIA

ಶಂಕಿತ ಉಗ್ರ ರಿಶಾನ್ ತಂದೆ ತಾಜುದ್ದೀನ್ ಹಾಗೂ ಕಾಂಗ್ರೆಸ್ ನಾಯಕರ ಬಾಂಧವ್ಯದ ಹಿನ್ನಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ತಾಜಾವುದ್ದೀನ್ ಅವರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಹಾಗೂ ಖಾದರ್ ಜೊತೆಗಿನ ಫೋಟೋ ರಿಲೀಸ್ ಮಾಡಿದ್ದಾರೆ.

ಈ ಬಗ್ಗೆ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, "ಬ್ಲಾಕ್ ಕಾಂಗ್ರೆಸ್‌ನಲ್ಲಿ ರಿಶಾನ್ ತಂದೆ ತಾಜುದ್ದೀನ್ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌, ಯುಟಿ ಖಾದರ್ ಪರಮಾಪ್ತ ಕೂಡಾ ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ..? ಎಂದು ಪ್ರಶ್ನಿಸಿದ್ದಾರೆ.

MLA Raghupathi Bhat Reaction About Congress Leaders Son Arrested By NIA

ಇನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡ್ತಾತ್ತಾರಾ. ಕಾಂಗ್ರೆಸ್ ನಾಯಕರ ಜೊತೆಗಿರುವ ಫೋಟೋವನ್ನು ಬಿಡುಗಡೆ ಮಾಡಿದ್ದೇನೆ. ರೆಶಾನ್ ಕುಟುಂಬದ ಬಗ್ಗೆ ಕೂಡಾ ತನಿಖೆ ಮಾಡಬೇಕು. ರೆಶಾನ್‌ ತಾಯಿ ಸರ್ಕಾರಿ ಕಾಲೇಜಿನ ಉಪನ್ಯಾಸಕಿ. ಆಕೆಯ ಮೇಲೆ ಲಿಖಿತ ದೂರನ್ನು ಶಿಕ್ಷಣ ಸಚಿವ ನಾಗೇಶ್‌ಗೆ ನೀಡಲಾಗಿದೆ. ರಾಷ್ಟ್ರೀಯತೆ, ಪ್ರಧಾನಿ ಮೋದಿ ವಿರುದ್ಧ ಅವರು ಕೆಲಸ ಮಾಡುತ್ತಿದ್ದರು. ಕಾಲೇಜು ವಿರುದ್ಧವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನು ಸಚಿವರಿಗೆ ಕೊಡಲಾಗಿದೆ. ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು. ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.r

English summary
Congress leader's son arrested by NIA. MLA Raghupathi Bhat release Tajuddin Shaikh photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X