ದುಷ್ಕರ್ಮಿಗಳಿಂದ ತುಳುನಾಡ ರಕ್ಷಣಾ ವೇದಿಕೆ ಕಚೇರಿಯಲ್ಲಿ ದಾಂಧಲೆ
ಮಂಗಳೂರು, ಸೆಪ್ಟೆಂಬರ್ 18 : ಜಿಲ್ಲೆಯ ಕುತ್ತಾರು ಘಟಕದ ತುಳುನಾಡ ರಕ್ಷಣಾ ವೇದಿಕೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಕಚೇರಿಗೆ ನುಗ್ಗಿದ ಕಿಡಿಗೇಡಿಗಳು ಕಛೇರಿಯಲ್ಲಿ ಹಾಕಲಾಗಿದ್ದ ತು.ರ.ವೇ ಹೋರಾಟ ಮತ್ತು ಸಾಧನೆಗಳ ಸಾಕ್ಷಗಳುಲ್ಲ ಬೃಹತ್ ಕಟೌಟನ್ನು ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ.
ಕುತ್ತಾರು ಜಂಕ್ಷನ್ನಲ್ಲಿರುವ ವಾಣಿಜ್ಯ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ತು.ರ.ವೇ ಕಚೇರಿಗೆ ಭಾನುವಾರ ರಾತ್ರಿ ಕಿಡಿಗೇಡಿಗಳು ನುಗ್ಗಿ ಕಟೌಟನ್ನು ಹಾನಿಗೊಳಿಸಿದ್ದಾರೆ.
ಘಟನೆಯು ಸೋಮವಾರ ಸಂಜೆ ಬೆಳಕಿಗೆ ಬಂದಿದ್ದು, ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ತು.ರ.ವೇ ಕ್ಷೇತ್ರಾಧ್ಯಕ್ಷ ಸಿರಾಜ್ ಅಡ್ಕರೆ ಅವರು ತಕ್ಷಣ ಉಳ್ಳಾಲ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ.
ಸಂಘಟನೆಯ ಕಚೇರಿಗೆ ನುಗ್ಗಿ ಕಟೌಟನ್ನು ಹಾನಿಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ತು.ರ.ವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಉಳ್ಳಾಲ ಪೊಲೀಸರಿಗೆ ಒತ್ತಾಯಿಸಿದರು.












Click it and Unblock the Notifications