ಕರಾವಳಿಯಲ್ಲಿ ಸಿಕ್ತು ರಾಜೀವ್ ಅಪರೂಪದ ಚಿತ್ರ

ಮಂಗಳೂರು, ಏ.9: ಇತ್ತೀಚೆಗಷ್ಟೇ ವಾಟ್ಸ್ಯಾಪ್ ಬಳಸಿ ಮತಯಾಚನೆ ಮಾಡಿ ಆಯೋಗದಿಂದ ನೋಟಿಸ್ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರು ಈಗ ವೆಬ್ ತಾಣಕ್ಕೆ ಲಗ್ಗೆ ಇಟ್ಟಿದ್ದಾರೆ. ಮಂಗಳವಾರ ಲೋಕಾರ್ಪಣೆಗೊಂಡ ದಕ್ಷಿಣ ಕನ್ನಡ ಕಾಂಗ್ರೆಸ್ ವೆಬ್ ತಾಣದಲ್ಲಿ ಪೂಜಾರಿ ಅವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರೊಂದಿಗಿನ ಒಡನಾಟದ ಚಿತ್ರಗಳೂ ಸೇರಿವೆ.

ಮಂಗಳೂರಿನ ಬಲ್ಮಠದ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರು ದಕ್ಷಿಣ ಕನ್ನಡ ಕಾಂಗ್ರೆಸ್ ಸಮಿತಿ ವೆಬ್ ತಾಣವನ್ನು ಲೋಕಾರ್ಪಣೆ ಮಾಡಿದರು. ಸಾಮಾಜಿಕ ಜಾಲ ತಾಣಗಳ ಮೂಲಕ ಜನರ ಗಮನ ಸೆಳೆಯಲು ವೆಬ್ ತಾಣಗಳು ಸಹಾಯಕವಾಗಿವೆ ಎಂದು ಇದೇ ಸಂದರ್ಭದಲ್ಲಿ ರೈಗಳು ಹೇಳಿದರು.

ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಣಾಳಿಕೆ, ಸ್ಥಳೀಯ ಅಭ್ಯರ್ಥಿ ಪರ ಪ್ರಚಾರಕ್ಕೆ ವೆಬ್ ತಾಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗಿದೆ. ಸಾರ್ವಜನಿಕರಿಗೆ ಮತದಾನದ ಹಕ್ಕು ಬಗ್ಗೆ ತಿಳಿ ಹೇಳಲಾಗುವುದು. ಪಕ್ಷದ ಚಿಂತನೆ, ಪ್ರಣಾಳಿಕೆ, ಕಾರ್ಯ ಚಟುವಟಿಕೆಗಳ ಬಗ್ಗೆ ಅಪ್ಡೇಡ್ ಸಿಗಲಿದೆ.ಯೂಟ್ಯೂಬ್, ಫೇಸ್ ಬುಕ್, ಲಿಂಕ್ಡ್ ಇನ್, ಟ್ವಿಟ್ಟರ್ ಗೆ ವೆಬ್ ತಾಣದಿಂದ ಸಂಪರ್ಕ ಒದಗಿಸಲಾಗಿದೆ ಎಂದಿದ್ದಾರೆ.

ಎಐಸಿಸಿ ಸದಸ್ಯರಾದ ಪಿ.ವಿ ಮೋಹನ್, ಕಲ್ಲಿಗೆ ತಾರಾನಾಥ್ ಶೆಟ್ಟಿ, ಶಾಹುಲ್ ಹಮೀದ್ ಕೆಕೆ, ಹರಿಕೃಷ್ಣ ಬಂಟ್ವಾಳ, ಎಸಿ ಭಂಡಾರಿ, ಮಿಥುನ್ ರೈ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಪೂಜಾರಿ ಅವರ ಪರ ಪ್ರಚಾರಕ್ಕೊಂದು ಸಾಧನ

ಪೂಜಾರಿ ಅವರ ಪರ ಪ್ರಚಾರಕ್ಕೊಂದು ಸಾಧನ

ದಕ್ಷಿಣ ಕನ್ನಡ ಕಾಂಗ್ರೆಸ್ ವೆಬ್ ತಾಣದಲ್ಲಿ ಪೂಜಾರಿ ಅವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರೊಂದಿಗಿನ ಒಡನಾಟದ ಚಿತ್ರಗಳೂ ಸೇರಿವೆ.

ಬಲ್ಮಠದ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭ

ಬಲ್ಮಠದ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭ

ಮಂಗಳೂರಿನ ಬಲ್ಮಠದ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರು ದಕ್ಷಿಣ ಕನ್ನಡ ಕಾಂಗ್ರೆಸ್ ಸಮಿತಿ ವೆಬ್ ತಾಣವನ್ನು ಲೋಕಾರ್ಪಣೆ ಮಾಡಿದರು.

ಅಭ್ಯರ್ಥಿ ಪರ ಪ್ರಚಾರಕ್ಕೆ ವೆಬ್ ತಾಣ

ಅಭ್ಯರ್ಥಿ ಪರ ಪ್ರಚಾರಕ್ಕೆ ವೆಬ್ ತಾಣ

ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಣಾಳಿಕೆ, ಸ್ಥಳೀಯ ಅಭ್ಯರ್ಥಿ ಪರ ಪ್ರಚಾರಕ್ಕೆ ವೆಬ್ ತಾಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗಿದೆ.

ಸಾರ್ವಜನಿಕರಿಗೆ ಮತದಾನದ ಹಕ್ಕು ಬಗ್ಗೆ

ಸಾರ್ವಜನಿಕರಿಗೆ ಮತದಾನದ ಹಕ್ಕು ಬಗ್ಗೆ

ಸಾರ್ವಜನಿಕರಿಗೆ ಮತದಾನದ ಹಕ್ಕು ಬಗ್ಗೆ ತಿಳಿ ಹೇಳಲಾಗುವುದು. ಪಕ್ಷದ ಚಿಂತನೆ, ಪ್ರಣಾಳಿಕೆ, ಕಾರ್ಯ ಚಟುವಟಿಕೆಗಳ ಬಗ್ಗೆ ಅಪ್ಡೇಡ್ ಸಿಗಲಿದೆ ಎಂದಿದ್ದಾರೆ.

ಕರಾವಳಿಗೆ ಬಂದಿದ್ದ ರಾಜೀವ್ ಗಾಂಧಿ

ಕರಾವಳಿಗೆ ಬಂದಿದ್ದ ರಾಜೀವ್ ಗಾಂಧಿ

ಕರಾವಳಿಗೆ ಬಂದಿದ್ದ ರಾಜೀವ್ ಗಾಂಧಿ ಜತೆ ಸ್ಥಳೀಯ ನಾಯಕರು ಇರುವ ಚಿತ್ರಗಳು ಇಲ್ಲಿ ಸಿಗುತ್ತದೆ

 ಪಕ್ಷದ ಚಿಂತನೆ, ಪ್ರಣಾಳಿಕೆ, ಕಾರ್ಯ ಚಟುವಟಿಕೆಗಳ ಬಗ್ಗೆ

ಪಕ್ಷದ ಚಿಂತನೆ, ಪ್ರಣಾಳಿಕೆ, ಕಾರ್ಯ ಚಟುವಟಿಕೆಗಳ ಬಗ್ಗೆ

ಪಕ್ಷದ ಚಿಂತನೆ, ಪ್ರಣಾಳಿಕೆ, ಕಾರ್ಯ ಚಟುವಟಿಕೆಗಳ ಬಗ್ಗೆ ಅಪ್ಡೇಡ್ ಜತೆಗೆ ಸ್ಥಳೀಯ ನಾಯಕರ ಬಗ್ಗೆ ಮಾಹಿತಿ ಸಿಗಲಿದೆ

ಸಾಮಾಜಿಕ ಜಾಲ ತಾಣಗಳು ಸಹಾಯಕವಾಗಿವೆ

ಸಾಮಾಜಿಕ ಜಾಲ ತಾಣಗಳು ಸಹಾಯಕವಾಗಿವೆ

ಸಾಮಾಜಿಕ ಜಾಲ ತಾಣಗಳು ಸಹಾಯಕವಾಗಿವೆ ಎಂದು ಇದೇ ಸಂದರ್ಭದಲ್ಲಿ ರೈಗಳು ಹೇಳಿದರು.

ಕಾರ್ಯಕ್ರಮದಲ್ಲಿದ್ದ ಅತಿಥಿಗಳು

ಕಾರ್ಯಕ್ರಮದಲ್ಲಿದ್ದ ಅತಿಥಿಗಳು

ಎಐಸಿಸಿ ಸದಸ್ಯರಾದ ಪಿ.ವಿ ಮೋಹನ್, ಕಲ್ಲಿಗೆ ತಾರಾನಾಥ್ ಶೆಟ್ಟಿ, ಶಾಹುಲ್ ಹಮೀದ್ ಕೆಕೆ, ಹರಿಕೃಷ್ಣ ಬಂಟ್ವಾಳ, ಎಸಿ ಭಂಡಾರಿ, ಮಿಥುನ್ ರೈ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಕಾಂಗ್ರೆಸ್ ವೆಬ್ ತಾಣದ ಸಂಪರ್ಕ

ದಕ್ಷಿಣ ಕನ್ನಡ ಕಾಂಗ್ರೆಸ್ ವೆಬ್ ತಾಣದ ಸಂಪರ್ಕ

ಜಿಲ್ಲಾ ಕಾಂಗ್ರೆಸ್ ಸಮತಿ, 2ನೇ ಮಹಡಿ
ಜೆವಿ ಸನ್ಸ್ ಬಿಲ್ಡಿಂಗ್
ಸರ್ಕಾರಿ ಕಾಲೇಜಿನ ಎದುರು, ಹಂಪನಕಟ್ಟ
ಮಂಗಳೂರು
ವೆಬ್ ತಾಣದ ವಿಳಾಸ: www.dkcongresscommittee.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+