'ರಾಜಕೀಯ ಸನ್ಯಾಸ ನನಗೆಂತಾ ಮರ್ಲಾ'

ಮಂಗಳೂರು, ಏ.4: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮನದ ಗಡಿಬಿಡಿಯಲ್ಲಿದ್ದ ಸ್ಥಳೀಯ ನಾಯಕ ರಮಾನಾಥ್ ರೈ ಅವರ ಮುಂದೆ ಸ್ಸಾರ್ ನೀವು ರಿಟೈರ್ ಆಗ್ತೀರಂತೆ ಹೌದೆ? ಎಂದು ಬಿಜೆಪಿ ನಾಯಕ ಅನಂತ್ ಕೇಳಿದ ಪ್ರಶ್ನೆ ಎಸೆದರೆ, ರೈಗಳು ನನಗೆಂತಾ ಮರ್ಲಾ ರಾಜಕೀಯದಿಂದ ಸನ್ಯಾಸ ಪಡೆಯುವುದಕ್ಕೆ ಎಂದು ಉತ್ತರಿಸಿದರು.

ಬಿಜೆಪಿ ಸಚಿವರಿಗಿಂತ ನಾನು ಮಾಡಿರುವ ಸಾಧನೆ ಉತ್ತಮವಾಗಿದೆ. ಅವರ ಹಾಗೆ ನಾನು ಅಸೆಂಬ್ಲಿಯಲ್ಲಿ ಬ್ಲೂ ಫಿಲಂ ನೋಡಿಲ್ಲ. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಈಗ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ನಳೀನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಅವರು ನನ್ನ ಸನ್ಯಾಸ ದೀಕ್ಷೆ ಬಗ್ಗೆ ಮಾತನಾಡದೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲಿ ಎಂದು ರಮಾನಾಥ್ ರೈ ಗುಡುಗಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಳೀನ್ ಕುಮಾರ್ ಅವರ ಸಾಧನೆ, ಸಂಸತ್ ಅನುಭವದ ಬಗ್ಗೆ ನಾನು ಪ್ರಶ್ನಿಸಿದ್ದು ನಿಜ. ಇದಕ್ಕೆ ಉತ್ತರಿಸಲಾಗದೆ ಏನೇನೋ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ರೈ ಹೇಳಿದರು. [ಮಂಗಳೂರಿನಲ್ಲಿ ರಾಹುಲ್ ಗಾಂಧಿ ಸಮಾವೇಶ]

ಸುಳ್ಳು ಪ್ರಚಾರ ಬಿಜೆಪಿಗೆ ಕರಗತವಾಗಿದೆ. ಸಮೀಕ್ಷಾ ವರದಿಗಳನ್ನು ಮುಂದಿಟ್ಟುಕೊಂಡು ಏನು ಸಾಧಿಸಲು ಸಾಧ್ಯವಿಲ್ಲ. ಜನರಿಗೂ ಸಮೀಕ್ಷಾ ವರದಿಗಳ ಬಂಡವಾಳ ಗೊತ್ತುಂಟು. ಬಿಜೆಪಿ ಪ್ರಚಾರ ಯಾವ ಮಟ್ಟ ಮುಟ್ಟಿದೆ ಎಂಬುದಕ್ಕೆ ಇತ್ತೀಚಿನ ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮವೇ ಸಾಕ್ಷಿ (ಪ್ರತಿಭಾ ಕುಳಾಯಿ ಪ್ರಕರಣ) ಕಾಂಗ್ರೆಸ್ಸಿಗೆ ಅಪಮಾನ ಮಾಡುವುದು ಬಿಜೆಪಿ ಉದ್ದೇಶವಾಗಿದೆ. ಇದಕ್ಕೆ ತಂತ್ರಜ್ಞಾನದ ದುರ್ಬಳಕೆ ಬೇರೆ ಮಾಡಿಕೊಳ್ಳುತ್ತಿದ್ದಾರೆ ಎಂದರು. [ಚಿತ್ರಗಳು: ಐಸಾಕ್ ರಿಚರ್ಡ್]

ಜನಾರ್ದನ ಪೂಜಾರಿ ಸಮರ್ಥ ಅಭ್ಯರ್ಥಿ

ಜನಾರ್ದನ ಪೂಜಾರಿ ಸಮರ್ಥ ಅಭ್ಯರ್ಥಿ

ಜನಾರ್ದನ ಪೂಜಾರಿ ಸಮರ್ಥ ಅಭ್ಯರ್ಥಿಯಾಗಿದ್ದು, ಆಂತರಿಕ ಚುನಾವಣೆ ಮುಗಿದ ಅಧ್ಯಾಯ ಕಾರ್ಯಕರ್ತರು ಒಗ್ಗಟ್ಟಾಗಿ ಪೂಜಾರಿ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರಲ್ಲಿ ಪೂಜಾರಿ ಗೆಲುವಿನ ಬಗ್ಗೆ ಆಶಯ ಮೂಡಿದೆ ಎಂದರು.

ಮಂಗಳೂರಿನಲ್ಲಿ ರಾಹುಲ್ ಅಲೆ ಇದೆ

ಮಂಗಳೂರಿನಲ್ಲಿ ರಾಹುಲ್ ಅಲೆ ಇದೆ

ಮಂಗಳೂರಿನಲ್ಲಿ ರಾಹುಲ್ ಅಲೆ ಇದೆ ಎಲ್ಲರೂ ಮೋದಿ ಅಲೆ ಬಗ್ಗೆ ಮಾತನಾಡುತ್ತಾರೆ. ಮಂಗಳೂರಿನ ಯುವಕರಲ್ಲಿ ಯುವ ನಾಯಕ ರಾಹುಲ್ ಬಗ್ಗೆ ಅಪಾರ ಅಭಿಮಾನವಿದೆ ಎಂದರು.

ರೈ ಜತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಯಾರಿದ್ದರು

ರೈ ಜತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಯಾರಿದ್ದರು

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ಜತೆ ಶಾಸಕ ಮೊಯಿದ್ದೀನ್ ಬಾವಾ, ಜಿಲ್ಲಾ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷ ಇಬ್ರಾಹಿಂ ಕೊಡಿಯಾಲ್, ಮೇಯರ್ ಮಹಬಲಾ ಮರ್ಲಾ, ವಕ್ತಾರ ಐವಾನ್ ಡಿಸೋಜ, ಕೆ ತಾರನಾಥ್ ಶೆಟ್ಟಿ ಇನ್ನಿತರರು ಇದ್ದರು.

ಪ್ರತಿಭಾ ಕುಳಾಯಿ ಪ್ರಕರಣದ ಬಿಸಿ

ಪ್ರತಿಭಾ ಕುಳಾಯಿ ಪ್ರಕರಣದ ಬಿಸಿ

ಸುದ್ದಿಗೋಷ್ಠಿಯಲ್ಲಿ ಪ್ರತಿಭಾ ಕುಳಾಯಿ ಪ್ರಕರಣದ ಬಗ್ಗೆ ಬಂದ ಪ್ರಶ್ನೆಗಳನ್ನು ತಳ್ಳಿಹಾಕಿದ ರೈಗಳು ಸುರತ್ಕಲ್ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಕಾಂಗ್ರೆಸ್ ಮಹಿಳಾ ಸಂರಕ್ಷಣೆಗೆ ಬದ್ಧವಾಗಿದೆ. ಪ್ರತಿಭಾ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+