ಪೂಜಾರಿಗಾಗಿ ಆಟೋರಿಕ್ಷಾ ಏರಿ ರೈಗಳ ಸವಾರಿ
ಮಂಗಳೂರು,
ಏ.13: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಅವರ ಪರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವ ಬಿ. ರಮಾನಾಥ ರೈ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾರ್ಮಿಕರು, ಆಟೋರಿಕ್ಷಾ ಚಾಲಕರನ್ನು ಸೆಳೆಯರು ಸಚಿವರು ರಿಕ್ಷಾದಲ್ಲಿ ಸವಾರಿ ಮಾಡಿದರು. ಭಾನುವಾರ ಚಿತ್ರನಟಿ ಜಯಮಾಲಾ ಅವರು ಪೂಜಾರಿ ಅವರ ಪರ ಮತಯಾಚಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ನಗರದ
ಆರ್ ಟಿಒ ರಿಕ್ಷಾ ಪಾರ್ಕ್ ನಲ್ಲಿ ಶನಿವಾರ ಪೂಜಾರಿ ಅವರ ಪರ ಮತ ಯಾಚಿಸಿದರು. ಈ ಸಂದರ್ಭ ಪತ್ರಕರ್ತರ ಜತೆ ಮಾತನಾಡಿದ ರೈ, 'ಪೂಜಾರಿ ಈ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಚಾಲಕರಿಗೆ ಸ್ವಂತ ರಿಕ್ಷಾ ಖರೀದಿ ಗಾಗಿ ಬ್ಯಾಂಕ್ ನಿಂದ ಸಾಲ ಪಡೆ ಯುವ ಅವಕಾಶ ಕಲ್ಪಿಸಿಕೊಡುವ ಮೂಲಕ ರಿಕ್ಷಾ ಚಾಲಕರನ್ನು ಮಾಲಕರನ್ನಾಗಿಸಿದ್ದರು' ಎಂದರು. [ಚಿತ್ರಗಳು: ಐಸಾಕ್ ರಿಚರ್ಡ್] id='are-slot-2' class='oiad oi-axt oiadv'>
ರಿಕ್ಷಾ ಚಾಲಕರನ್ನು ಮಾಲಕರನ್ನಾಗಿಸಿದ್ದರು
ಪೂಜಾರಿ ಈ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಚಾಲಕರಿಗೆ ಸ್ವಂತ ರಿಕ್ಷಾ ಖರೀದಿ ಗಾಗಿ ಬ್ಯಾಂಕ್ ನಿಂದ ಸಾಲ ಪಡೆ ಯುವ ಅವಕಾಶ ಕಲ್ಪಿಸಿಕೊಡುವ ಮೂಲಕ ರಿಕ್ಷಾ ಚಾಲಕರನ್ನು ಮಾಲಕರನ್ನಾಗಿಸಿದ್ದರು' ಎಂದರು.

ಪೂಜಾರಿಯನ್ನು ಗೆಲ್ಲಿಸಬೇಕು ಎಂದು ರೈ ಮನವಿ
ಕಾರ್ಮಿಕರು ಮತ್ತು ಬಡವರ ಬಗ್ಗೆ ಪೂಜಾರಿ ವಿಶೇಷ ಕಾಳಜಿ ಹೊಂದಿದ್ದಾರೆ. ರಿಕ್ಷಾ ಚಾಲಕರ ಸಹಿತ ಸರ್ವರೂ ಪೂಜಾರಿಯನ್ನು ಗೆಲ್ಲಿಸಬೇಕು ಎಂದು ರೈ ಮನವಿ ಮಾಡಿದರು.

ರಿಕ್ಷಾ ನಿಲ್ದಾಣ ಗಳಿಗೆ ತೆರಳಿ ಮತ ಯಾಚಿಸಿದರು
ನಗರದ ಸ್ಟೇಟ್ ಬ್ಯಾಂಕ್, ರಾವ್ ಅಂಡ್ ರಾವ್, ಸೆಂಟ್ರಲ್ ಮಾರ್ಕೆಟ್, ವಿಶ್ವಭವನ, ರೈಲ್ವೆ ಸ್ಟೇಷನ್ ಸಹಿತ ವಿವಿಧ ರಿಕ್ಷಾ ನಿಲ್ದಾಣ ಗಳಿಗೆ ತೆರಳಿ ಮತ ಯಾಚಿಸಿದರು.

ಸಚಿವ ರೈಗಳ ಸ್ಥಳೀಯ ಮುಖಂಡರು
ಈ ವೇಳೆ ಶಾಸಕ ಜೆ.ಆರ್. ಲೋಬೊ, ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಖಾದರ್, ಟಿ.ಕೆ. ಸುಧೀರ್, ಸಂತೋಷ್ ಶೆಟ್ಟಿ, ಬಿ.ಕೆ.ಇದಿನಬ್ಬ, ಮುಹಮ್ಮದ್ ನವಾಝ್, ರಮಾನಂದ ಪೂಜಾರಿ, ದಿನೇಶ್ ಆಳ್ವ, ಕಮಲಾಕ್ಷ ಸಾಲ್ಯಾನ್, ಡಿ.ಎಂ.ಅಸ್ಲಂ, ದೀಪಕ್ ರಾವ್, ಬಿ.ಎನ್.ಸುರೇಶ್, ವಿಶ್ವಾಸ್ ಕುಮಾರ್ ದಾಸ್, ಸ್ಟಾನ್ಲಿ ಅಲ್ವಾರೀಸ್ ಮೊದಲಾದವರು ಉಪಸ್ಥಿತರಿದ್ದರು.


Click it and Unblock the Notifications
