ಕೈಕಾಲು ಮುರಿಸುತ್ತೇನೆ : ಪತ್ರಕರ್ತನಿಗೆ ಸಚಿವ ಬೆದರಿಕೆ
ಮೂಡುಬಿದಿರೆ, ಮೇ 3 : "ಕಾಂಗ್ರೆಸ್ ಕಾರ್ಯಕರ್ತರ ಕೈಕಾಲು ಗಟ್ಟಿಯಿದೆ. ಅವರಿಂದ ನಿಮ್ಮ ಕೈಕಾಲು ಮುರಿಸುತ್ತೇನೆ. ಮತ್ತೆ ನೀವು ಭಿಕ್ಷೆ ಬೇಡಿ ಬದುಕಬೇಕು. ಹಾಗೆ ಮಾಡುತ್ತೇನೆ..."
ಇದ್ಯಾವುದೋ ರೌಡಿ ಕರೆಯಲ್ಲ ಸ್ವಾಮೀ... ರಾಜ್ಯ ಮೀನುಗಾರಿಕೆ, ಕ್ರೀಡೆ ಮತ್ತು ಯುವಜನ ಸೇವೆ ಸಚಿವ, ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ವಿಜಯವಾಣಿ ಮೂಡುಬಿದಿರೆ ಭಾಗದ ವರದಿಗಾರ ಯಶೋಧರ ವಿ. ಬಂಗೇರ ಅವರಿಗೆ ನೀಡಿದ ಧಮ್ಕಿ. ನಿರ್ಭಿಡೆಯಿಂದ ವರದಿ ಮಾಡುವ ಪತ್ರಕರ್ತರಿಗೆ ಅಭಯಹಸ್ತ ನೀಡಬೇಕಾದ ಸಚಿವರೇ ಬೆದರಿಕೆ ಒಡ್ಡಿದರೆ ಹೇಗೆ?
ಪತ್ರಕರ್ತ ಯಶೋಧರ ವಿ. ಬಂಗೇರ ಅವರು ಕಳೆದ ಮೂರು ದಿನಗಳಿಂದ ವಿವಿಧ ಪತ್ರಿಕೆಗಳಿಗೆ ಹಾಗೂ ಅರೆಕಾಲಿಕ ವರದಿ ಮಾಡುವ ಇತರ ವೆಬ್‌ಸೈಟ್‌ಗಳಿಗೆ ಮಾಹಿತಿ ಹಕ್ಕಿನ ಆಧಾರದಲ್ಲಿ 'ನಿಡ್ಡೋಡಿ' ಕುರಿತ ವರದಿಯನ್ನು ನೀಡುತ್ತಿದ್ದರು. ವಿಶ್ವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪತ್ರಕರ್ತನಿಗೆ ಬೆದರಿಕೆ ಒಡ್ಡಿರುವುದು ನಿಜಕ್ಕೂ ಬೇಸರದ ಸಂಗತಿ.

ಅದರಂತೆಯೇ ಗುರುವಾರ ಸಂಜೆ 6.30ರ ವೇಳೆಗೆ ಸಚಿವ ಅಭಯಚಂದ್ರ ಜೈನ್ ಅವರಿಗೆ ಕರೆ ಮಾಡಿ ನಿಡ್ಡೋಡಿ ಸ್ಥಾವರ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುವಂತೆ ಯಶೋಧರ ಅವರು ಕರೆ ಮಾಡಿದರು. ಕರೆ ಸ್ವೀಕರಿಸಿ ಮಾತನಾಡಿದ ಜೈನ್, ಪ್ರತಿಕ್ರಿಯೆ ನೀಡುವ ಬದಲು ಬಂಗೇರ ಅವರಿಗೆ ಧಮ್ಕಿ ಹಾಕತೊಡಗಿದರು.
ನಿಡ್ಡೋಡಿ ಹೋರಾಟದ ಪರ ನಿಲ್ಲಬೇಕಾದ ಜವಾಬ್ದಾರಿಯುತ ಸಚಿವ ಅಭಯಚಂದ್ರ ಜೈನ್ ಬಾಲಿಶವಾಗಿ ಹೀಗೆ ಬೆದರಿಕೆ ಒಡ್ಡುತ್ತಿರುವ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎನ್ನುವುದು ಮೂಡುಬಿದಿರೆಯ ಬಹುತೇಕ ನಾಗರಿಕರ ಅಭಿಪ್ರಾಯ. [ನಳಿನ್ ವಿರುದ್ಧ ನಡೆದ ಸಂಚು]
ಸುಳ್ಯ ದಂಪತಿ ಸಾವು : ಇಲ್ಲಿನ ವಳಲಂಬೆ ಗ್ರಾಮದಲ್ಲಿ ದಂಪತಿಗಳಿಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಸಾವನ್ನಪ್ಪಿದವರನ್ನು ಹರಿರಾಜ್ ಭಟ್ (65) ಮತ್ತು ಸುಲೋಚನಾ ಭಟ್ (55). ಹರಿರಾಜ್ ಭಟ್ ಅವರ ಶವ ನೇಣು ಬಿಗದ ಸ್ಥಿತಿಯಲ್ಲಿ ಪತ್ತೆಯಾದರೆ, ಸುಲೋಚನಾ ಅವರ ಶವ ರಾಡ್‌ನಿಂದ ತಲೆಗೆ ಹೊಡೆದು ಕೊಲೆಗೈದಂತೆ ತೋರಿಬಂದಿದೆ.
ಹಣದಾಸೆಗಾಗಿ ಈ ಕೊಲೆ ನಡೆದಿದೆಯೇ ಅಥವಾ ಹರಿರಾಜ್ ಭಟ್ ಅವರೆ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡರೆ ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿದ್ದು, ತನಿಖೆ ಜಾರಿಯಲ್ಲಿದೆ. ಪ್ರಕರಣ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications