ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಟ್ಟೆ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಉನ್ನತ ಕೇಂದ್ರ

By Mahesh
|
Google Oneindia Kannada News

ನಿಟ್ಟೆ, ಫೆ.4: ನಿಟ್ಟೆ ಇಂಜಿನಿಯರಿಂಗ್ ಕಾಲೇಜು- ಎನ್ ಎಂಎ ಎಂಐಟಿ ನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಇನ್ನೋವೇಶನ್ ಸೆಂಟರ್ ಸ್ಥಾಪಿಸಿದೆ. ಈ ಕೇಂದ್ರದ ಉದ್ಘಾಟನೆ ಫೆ.13ರಂದು ನಡೆಯಲಿದೆ ಎಂದು ನಿಟ್ಟೆ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಆರಂಭಿಸಲಾದ ವಿಶಿಷ್ಟ ಕೇಂದ್ರ ಇದಾಗಿದ್ದು, ಇಲ್ಲಿ ಇತ್ತೀಚಿನ ಮೈಕ್ರೋಸಾಫ್ಟ್ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಸಂಸ್ಥೆ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ತರಬೇತಿ ವ್ಯವಸ್ಥೆಗೊಳಿಸಿ, ಪರೀಕ್ಷೆ ನಡೆಸಲಿದ್ದು, ಈಗಾಗಲೇ 10 ಮಂದಿ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಉದ್ಯೋಗ ಒದಗಿಸಿದೆ ಎಂದು ವಿನಯ್ ಹೆಗ್ಡೆ ಹೇಳಿದರು.

ಎನ್ ಎಂಐಎಂಐಟಿ ತಾಂತ್ರಿಕ ಶಿಕ್ಷಣದಲ್ಲಿ ಕಳೆದ 27 ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ, ಉದ್ಯೋಗ ನೇಮಕಾತಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಕ್ರೀಡೆ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ ಮುಂತಾದ ವಿಷಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ವಿನಯ್ ಸುದ್ದಿಗೋಷ್ಥಿಯಲ್ಲಿ ವಿವರಿಸಿದರು.

Microsoft Innovation Centers ( MICs ), NMAM Institute of Technology

ನಿಟ್ಟೆ ಕಾಲೇಜಿನಲ್ಲಿ 3,000 ಮಂದಿ ಸಾಮರ್ಥ್ಯದ ಸಭಾಭವನ ನಿರ್ಮಾಣಗೊಂಡಿದೆ. 400ಮೀ. ಟ್ರಾಕ್‌ನ ಮೈದಾನ, ಫಿಟ್‌ನೆಸ್ ಸೆಂಟರ್, ವಿವಿಧೋದ್ದೇಶ ಜಿಮಾಶಿಯಂ ಸಹ ಕ್ಯಾಂಪಸ್ ನಲ್ಲಿ ನಿರ್ಮಾಣಗೊಂಡಿದೆ. ಪೆನ್ಸಿಲ್ವೇನಿಯಾ ವಿವಿ, ಜಪಾನಿ ವಿವಿ ಹಾಗೂ ಸಿಂಗಾಪುರದ ನ್ಯಾಷನಲ್ ವಿವಿಯೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ಇದರಿಂದ ಪರಸ್ಪರ ವಿನಿಮಯಕ್ಕೆ ಅವಕಾಶವಾಗಿದೆ ಎಂದು ಹೆಗ್ಡೆ ತಿಳಿಸಿದರು.

ಮೈಕ್ರೋಸಾಫ್ಟ್ ಇನ್ನೋವೇಶನ್ ಸೆಂಟರ್ (MICs) ವಿಶ್ವದೆಲ್ಲೆಡೆ ತನ್ನ ಕೇಂದ್ರಗಳನ್ನು ಹೊಂದಿದ್ದು, ಉನ್ನತ ತಂತ್ರಜ್ಞಾನ, ಸಂಶೋಧನೆ ಹಾಗೂ ಸಾಫ್ಟ್ ವೇರ್ ಸಲ್ಯೂಷನ್ ವಿಭಾಗದ ಅಭಿವೃದ್ಧಿಗಾಗಿ ಸರ್ಕಾರದ ಸಹಯೋಗದಿಂದ ರೂಪುಗೊಂಡ ವಿಶಿಷ್ಟ ಯೋಜನೆಯಾಗಿದೆ. ಹೆಚ್ಚಿನ ಮಾಹಿತಿಗೆ ಮೈಕ್ರೋಸಾಫ್ಟ್ ವೆಬ್ ತಾಣ ವೀಕ್ಷಿಸಿ

English summary
Microsoft Innovation Centers ( MICs ) NMAM Institute of Technology, Nitte inauguration on Feb 13. Microsoft Innovation Centers ( MICs ) are state of art technology facilities for collaboration on innovative research, technology or software solutions, involving a combination of government, academic and industry participants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X