ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ 'ಮಾಯಾ ಗ್ಯಾಂಗ್'; ಪೊಲೀಸರೇ ಇವರ ಟಾರ್ಗೆಟ್!

|
Google Oneindia Kannada News

ಮಂಗಳೂರು, ಜನವರಿ 19: ಒಂಟಿಯಾಗಿ ಸಿಕ್ಕ ಪೊಲೀಸರ ಮೇಲೆ ಹಲ್ಲೆ ಮಾಡಿ, ಅವರನ್ನು ಕೊಲ್ಲುವ ಗ್ಯಾಂಗ್ ಮಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದೆ. ಅಚ್ಚರಿಯ ಸಂಗತಿ ಎಂದರೆ 'ಮಾಯಾ ಗ್ಯಾಂಗ್' ಹೆಸರಿನ ಇದರಲ್ಲಿ ಇರುವುದು ಇನ್ನೂ ಮೀಸೆ ಮೂಡದ ಅಪ್ರಾಪ್ತರು.

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟವ ವೇಳೆ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದಾಗ ಇಬ್ಬರು ಮೃತಪಟ್ಟಿದ್ದರು.

ಮಂಗಳೂರು ಗೋಲಿಬಾರ್: ಕೇರಳದಿಂದ ಕಳವಳ ವ್ಯಕ್ತಪಡಿಸಿದ ದೇವೇಗೌಡಮಂಗಳೂರು ಗೋಲಿಬಾರ್: ಕೇರಳದಿಂದ ಕಳವಳ ವ್ಯಕ್ತಪಡಿಸಿದ ದೇವೇಗೌಡ

ಈ ಇಬ್ಬರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಗರದಲ್ಲಿ 'ಮಾಯಾ ಗ್ಯಾಂಗ್' ರಚನೆಯಾಗಿತ್ತು. ಪೊಲೀಸರ ಮೇಲೆ ದಾಳಿ ನಡೆಸಿ, ಅವರನ್ನು ಕೊಲ್ಲುವುದು ಗ್ಯಾಂಗ್ ಗುರಿ. ಮಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಗ್ಯಾಂಗ್‌ ಸದಸ್ಯರನ್ನು ಬಂಧಿಸಲಾಗಿದೆ.

ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ

 Maya Gang Target The Police 6 Arrested

ಗ್ಯಾಂಗ್‌ನ ಯೋಜನೆ; ಮಂಗಳೂರು ನಗರದಲ್ಲಿ ಡಿಸೆಂಬರ್ 19ರಂದು ಒಂಟಿಯಾಗಿ ಓಡಾಡುವ ಪೊಲೀಸರ ಮೇಲೆ ಹಲ್ಲೆ ಮಾಡಿ, ಅವರನ್ನು ಕೊಲ್ಲುವುದು ಗ್ಯಾಂಗ್‌ನ ಗುರಿಯಾಗಿತ್ತು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಗೋಲಿಬಾರ್ ಎಂದ ಸಿದ್ದರಾಮಯ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಗೋಲಿಬಾರ್ ಎಂದ ಸಿದ್ದರಾಮಯ್ಯ

ಆದರೆ, ಗೋಲಿಬಾರ್ ನಡೆದು ಒಂದು ವರ್ಷವಾಗಿದ್ದರಿಂದ ನಗರದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದರು. ಆದ್ದರಿಂದ, ಈ ಗ್ಯಾಂಗ್‌ನ ಯೋಜನೆ ಸಾಕಾರಗೊಳ್ಳಲಿಲ್ಲ. ಈಗ ಗ್ಯಾಂಗ್‌ನ ಸದಸ್ಯರು ಪೊಲೀಸರ ಅತಿಥಿಗಳಾಗಿದ್ದಾರೆ.

ದಾಳಿ ನಡೆದಿದೆ; ಮಂಗಳೂರಿನ ನ್ಯೂಚಿತ್ರ ಮಂದಿರ ಸರ್ಕಲ್ ಬಳಿ ಉತ್ತರ ಪೊಲೀಸ್ ಠಾಣೆ ಸಿಬ್ಬಂದಿ ಗಣೇಶ್ ಕಾಮತ್ ಮೇಲೆ ದಾಳಿ ನಡೆದಿತ್ತು. ತಣ್ಣೀರು ಬಾವಿ, ಪಣಂಬೂರು ಬಳಿ ಪೊಲೀಸರ ರೈಫಲ್ ಕಸಿಯಲಯ ಪ್ರಯತ್ನ ನಡೆಸಲಾಗಿತ್ತು. ಈ ಎಲ್ಲಾ ದಾಳಿಗಳ ಹಿಂದೆ ಇದೇ 'ಮಾಯಾ ಗ್ಯಾಂಗ್' ಇತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಆಗಮಿಸಿರುವ ಶಶಿಕುಮಾರ್ ಈ ಗ್ಯಾಂಗ್‌ನ ಜಾಲವನ್ನು ಪತ್ತೆ ಹಚ್ಚಿದ್ದಾರೆ. 'ಮಾಯಾ ಗ್ಯಾಂಗ್‌'ನ 6 ಸದಸ್ಯರನ್ನು ಬಂಧಿಸಿದ್ದಾರೆ. ಈ ಮೂಲಕ ನಡೆಯಬೇಕಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

ಪೊಲೀಸರ ಮೇಲಿನ ದಾಳಿಗೆ ಅಪ್ತಾಪ್ತರನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಅವರಿಗೆ ಬೇಗೆ ಜಾಮೀನು ಸಿಗಲಿದೆ, ಶಿಕ್ಷೆಯೂ ಕಡಿಮೆ ಎಂಬುದು ಇದರ ಹಿಂದಿರುವ ತಂತ್ರವಾಗಿದೆ. ಅಪ್ರಾಪ್ತರಿಗೆ ನಿಟ್ರಾವಿಟ್ ಎಂಬ ಮಾದಕ ವಸ್ತುವನ್ನು ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿರುವ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ.

English summary
Mangaluru police arrested 6 members of the Maya gang which target the police officials. Gang members planned to attack police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X