ಮಂಗಳೂರು ಟೌನ್‌ಹಾಲ್ ನವೀಕರಣ ಮುಗಿಯುವುದೆಂದು?
ಮಂಗಳೂರು, ನವೆಂಬರ್ 02 : ಮಂಗಳೂರು ಪುರಭವನದ ನವೀಕರಣ ಕಾರ್ಯ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನ.14ಕ್ಕೆ ಎಲ್ಲಾ ಕೆಲಸ ಮುಗಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ಕಾಮಗಾರಿ ನಡೆಯುತ್ತಿರುವ 'ವೇಗ' ನೋಡಿದರೆ ನವೆಂಬರ್ 30ಕ್ಕೂ ಕೆಲಸಗಳು ಮುಗಿಯುವುದು ಅನುಮಾನ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೇಯರ್ ಜೆಸಿಂತಾ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಂತಾದವರು ಹಲವು ಬಾರಿ ಪುರಭವನದ ನವೀಕರಣ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಬೇಗ ಮುಗಿಯುತ್ತದೆ ಎಂದು ಭರವಸೆ ನೀಡಿದ್ದಾರೆ. [ಮಂಗಳೂರು : ಪುರಭವನದ ನವೀಕರಣ ಮುಗಿಯುತ್ತಿಲ್ಲ]

ಸದ್ಯ, ನವೆಂಬರ್ 14ಕ್ಕೆ ನವೀಕರಣಗೊಂಡ ಪುರಭವನದ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದರು. ಆದರೆ, ಪುರಭವನದಲ್ಲಿ ಕುರ್ಚಿ ಜೋಡಿಸುವ ಕೆಲಸವೇ ಇನ್ನೂ ಮುಗಿದಿಲ್ಲ. 900 ಆಸನಗಳನ್ನು ಜೋಡಿಸಲು 15 ದಿನ ಸಾಲದು ಎನ್ನುತ್ತಾರೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವವರು. ಹಾಗಾದರೆ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪುರಭವನ ಉದ್ಘಾಟನೆಯಾಗಲಿದೆಯೇ? ಕಾದು ನೋಡಬೇಕು.
ಹೆಚ್ಚಳವಾಗಲಿದೆ ಟೌನ್‌ಹಾಲ್ ಬಾಡಿಗೆ : ನವೀಕರಣಗೊಂಡ ಟೌನ್‌ಹಾಲ್ ಬಾಡಿಗೆ ಹೆಚ್ಚಳವಾಗಲಿದೆ. ಬಾಡಿಗೆಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಕುರಿತು 2 ಸಭೆಗಳು ನಡೆದಿವೆ. ಆದರೆ, ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ನವೀಕರಣದ ಲೆಕ್ಕಾಚಾರ ನೋಡಿದಾಗ ಬಾಡಿಗೆ ಈಗಿರುವುದಕ್ಕಿಂತ 3 ರಿಂದ 4 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.[ನವೀಕರಣಗೊಂಡ ಬೆಂಗಳೂರು ಟೌನ್ ಹಾಲ್ ಚಿತ್ರಗಳು]
ಹಿಂದೆ ಟೌನ್‌ಹಾಲ್ ನವೀಕರಣಕ್ಕೆ 2 ಕೋಟಿ ಖರ್ಚಾಗಬಹುದು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಅದು 4.5 ಕೋಟಿಗೆ ತಲುಪಿದೆ. ಸಂಪೂರ್ಣ ಹವಾನಿಯಂತ್ರಿತವಾದ ಭವನದಲ್ಲಿ ನಾಟಕ , ಸಂಗೀತ ಕಾರ್ಯಕ್ರಮಗಳಿಗಾಗಿ ಮುಂಬೈ ಮಾದರಿಯ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಈ ಬದಲಾವಣೆಗಳಿಗೆ ತಕ್ಕಂತೆ ಬಾಡಿಗೆ ನಿಗದಿಪಡಿಸಿದರೆ ಪುರಭವನದಲ್ಲಿ ನಾಟಕಗಳೇ ನಡೆಯುವುದಿಲ್ಲ ಎನ್ನುತಾತೆ ಜನರು.
ಹಿಂದೆ ದೇವಣ್ಣ ಶೆಟ್ಟಿ ಅವರು ಮೇಯರ್ ಆಗಿದ್ದ ಕಾಲದಲ್ಲಿ ಪುರಭವನ ನವೀಕರಣಗೊಂಡಿತ್ತು. ಆಗಲು ಬಾಡಿಗೆ ಹೆಚಿಸಲಾಗಿತ್ತು. ಆಗಿನ ಬಾಡಿಗೆಯನ್ನು ವಿರೋಧಿಸಿ ಕಲಾವಿದರು ಹೋರಾಟ ನಡೆಸಿದ್ದರು. ಬಳಿಕ ಬಾಡಿಗೆ ಸ್ವಲ್ಪ ಇಳಿಕೆ ಮಾಡಲಾಗಿತ್ತು.
ಸದ್ಯ, ಬಾಡಿಗೆ ನಿಗದಿ ಕುರಿತು ಸಾಲು-ಸಾಲು ಸಭೆ ನಡೆಯುತ್ತಿರುವುದು ನೋಡಿದರೆ ಕಲಾವಿದರು ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಬೇಕೋ ಎಂದು ಅನ್ನಿಸುತ್ತಿದೆ. ಪುರಭವನ ಎಂದು ಬಾಗಿಲು ತೆರೆಯುತ್ತೇ? ಎಂದು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರು ಕಾದು ಕುಳಿತಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications