Get Updates
Get notified of breaking news, exclusive insights, and must-see stories!

ಮಂಗಳೂರಿನ ಕಡಲ ತೀರದಲ್ಲಿ ಮತ್ತೆ ಬಂದಿದೆ ಸರ್ಫಿಂಗ್ ಉತ್ಸವ

ಮಂಗಳೂರು ಮೇ 18: ಮಂಗಳೂರು ಕಡಲ ತೀರದಲ್ಲಿ ಮತ್ತೆ ಸರ್ಫಿಂಗ್ ಕಲರವ ಕೇಳಿಬರಲಿದೆ. ಮಂಗಳೂರು ಸಮುದ್ರ ಕಿನಾರೆಯಲ್ಲಿ ಸತತ ಎರಡನೇ ಬಾರಿಗೆ ಸರ್ಫಿಂಗ್‌ ಉತ್ಸವ ಅಯೋಜಿಸಲಾಗಿದೆ. ಮಂಗಳೂರು ಹೊರವಲಯದ ಪಣಂಬೂರು ಕಡಲ ಕಿನಾರೆಯಲ್ಲಿ 'ಮಂತ್ರ ಗ್ರೋಮ್‌ ಸರ್ಚ್‌' ಎಂಬ ಮಕ್ಕಳ ಸರ್ಫಿಂಗ್‌ ಸ್ಪರ್ಧೆ ನೋಡುವ ಭಾಗ್ಯ ಪ್ರವಾಸಿಗರಿಗೆ ಒದಗಿ ಬಂದಿದೆ.

ಮೇ 19ರಂದು ಈ ಸ್ಪರ್ಧೆ ನಡೆಯಲಿದೆ. 7 ವರ್ಷದ ಮಕ್ಕಳಿಂದ ಹಿಡಿದು 15 ವರ್ಷದವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ತೆರೆಗಳು ಇರುವುದರಿಂದ ಈ ಅವಧಿಯೇ ಸರ್ಫಿಂಗ್‌ಗೆ ಸೂಕ್ತ ಸಮಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಮಾತ್ರ ಸ್ಪರ್ಧೆ ನಡೆಯಲಿದೆ.

Mangaluru to Host karnatakas second surfing festival

ಮಂಗಳೂರು ಪರಿಸರದ ಮುಲ್ಕಿ, ಪಣಂಬೂರು, ತಣ್ಣೀರುಬಾವಿ, ಬೆಂಗರೆ ಮುಂತಾದ ಕಡಲ ಕಿನಾರೆಗಳಲ್ಲಿ ಕಾರ್ಯಾಚರಿಸುತ್ತಿರುವ ಕ್ಲಬ್‌ಗಳಿಂದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಅಂದು ಕಡಲ ಅಲೆಗಳಲ್ಲಿ ಸಾಹಸ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಅನೇಕ ಮಕ್ಕಳು ಬಿಡುವಿಲ್ಲದೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

Mangaluru to Host karnatakas second surfing festival

ಪ್ರತಿಭಾನ್ವಿತ ಯುವ ಸರ್ಫರ್‌ಗಳನ್ನು ಹುಡುಕಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡನೇ ಬಾರಿಗೆ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌, ಮಂತ್ರ ಸರ್ಫ್‌ ಕ್ಲಬ್‌, ಅಡ್ವೆಂಚರ್‌ ವರ್ಕ್ಸ್‌, ಥಂಡರ್‌ ಮಂಕಿ, ಫೈಯರ್‌ವೈರ್‌ ಸರ್ಫ್‌ ಬೋರ್ಡ್‌ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಕಡಲ ಕಿನಾರೆಯ ಸಾಹಸಮಯ ಸ್ಪರ್ಧೆಯಲ್ಲಿ ಯುವ ಸರ್ಫರ್‌ಗಳು ಭಾಗವಹಿಸಿ ಪ್ರವಾಸಿಗರಿಗೆ ಹೊಸ ಥ್ರಿಲ್‌ ನೀಡಲಿದೆ.

Mangaluru to Host karnatakas second surfing festival

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌ ವತಿಯಿಂದ ಉಚಿತ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದು ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಹೊಸ ಅವಕಾಶ ತೆರೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+