ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಊರಿಗೆ ಬರುವ ಖುಷಿಯಲ್ಲಿದ್ದ ಮಂಗಳೂರಿನ ಯೋಧ ಹೃದಯಾಘಾತದಿಂದ ಸಾವು: ಮುಗಿಲು ಮುಟ್ಟಿದ್ದ ಆಕ್ರಂದನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ, 25: ಭೋಪಾಲ್‌ನಲ್ಲಿ‌ ಸಶಸ್ತ್ರ ಸೀಮಾ ಬಲ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮಲಗಿದ್ದಲ್ಲೇ ಮಂಗಳೂರಿನ ಶಕ್ತಿನಗರ ಮೂಲದ ಯೋಧ ಮುರಳಿಧರ್ ರೈ (37) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಇದೀಗ ಮುರಳೀಧರ ರೈ ಅವರ ಪಾರ್ಥಿವ ಶರೀರ ಹುಟ್ಟೂರು ಮಂಗಳೂರಿಗೆ ಆಗಮಿಸಿದೆ.

ಭೋಪಾಲ್‌ನಲ್ಲಿ‌ ಸಶಸ್ತ್ರ ಸೀಮಾ ಬಲ್‌ನಲ್ಲಿ ಕರ್ತವ್ಯದಲ್ಲಿದ್ದ ಯೋಧ ಮುರಳಿಧರ್ ರೈಯವರು ಸೋಮವಾರ (ಜನವರಿ 24) ಮುಂಜಾನೆ ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಂಗಳವಾರ ಅವರ ಪಾರ್ಥಿವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇಂದು ಅಂತ್ಯಕ್ರಿಯೆ ಮಾಡಲಾಗಿದೆ.

 ಭೋಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: ನಾಲ್ಕು ಮಕ್ಕಳು ಸಜೀವ ದಹನ ಭೋಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: ನಾಲ್ಕು ಮಕ್ಕಳು ಸಜೀವ ದಹನ

ಜಿಲ್ಲಾಡಳಿತದಿಂದ ಸರ್ಕಾರಿ ಗೌರವ

ಮಂಗಳವಾರ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೇರಿದಂತೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ. ಬಳಿಕ ಎ.ಜೆ ಆಸ್ಪತ್ರೆಯ ಶವಗಾರಕ್ಕೆ ಯೋಧ ಮುರಳೀಧರ ರೈಯವರ ಪಾರ್ಥಿವ ಶರೀರ ರವಾನೆಯಾಗಿತ್ತು. ಬುಧವಾರ ಶಕ್ತಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Mangaluru soldier death by heart attack in Bhopal

ಊರಿಗೆ ಬರಲು ಸಿದ್ಧನಾಗಿದ್ದ ಯೋಧ

2007 ರಲ್ಲಿ ಕಾನ್ಸ್‌ಟೇಬಲ್ ಆಗಿ ಸಶಸ್ತ್ರ ಸೀಮಾ ಬಲ್‌ಗೆ ಸೇರ್ಪಡೆಯಾಗಿದ್ದ ಮುರಳಿಧರ್ ರೈ ಯವರು, ಹವಾಲ್ದಾರ್ ಆಗಿ ಭೋಪಾಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಮಂಗಳವಾರ ಅವರು ರಜೆಯ ಮೇಲೆ ಊರಿಗೆ ಬರಬೇಕಾಗಿತ್ತು. ಆದರೆ ಅದಕ್ಕಿಂತ ಒಂದು ದಿನ ಮೊದಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ತಾಯಿಯ ವಾರ್ಷಿಕ ಕಾರ್ಯಕ್ಕೆ ಶವವಾಗಿ ಮರಳಿ ಬಂದಿದ್ದಾರೆ.

ತವರಿಗೆ ಮರಳಿದ ಯೋಧನ ಮೃತದೇಹ

ಬುಧವಾರ, ಮಂಗಳೂರು ಶಕ್ತಿನಗರದ ಸಂಜಯನಗರದಲ್ಲಿರುವ ಮನೆಗೆ ಮೃತ ಯೋಧ ಮುರಳೀಧರ್ ರೈ ಅವರ ಪಾರ್ಥಿವ ಶರೀರ ಬರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲುಮುಟ್ಟಿದೆ. ಮನೆಯಲ್ಲಿ ಕುಟಂಬಸ್ಥರಿಗೆ ಅಂತಿಮ ದರ್ಶನ ಸಲ್ಲಿಸಲು ವ್ಯವಸ್ಥೆ ಮಾಡಿದ ಬಳಿಕ ಸಾರ್ವಜನಿಕ ‌ದರ್ಶನಕ್ಕಾಗಿ ಮಂಗಳೂರಿನ ಸಂಜಯನಗರ ಆಂಜನೇಯ ಸಭಾಭವನದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್, ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸೇರಿದಂತೆ ಹಲವು ಪ್ರಮುಖರು ಮೃತ ಯೋಧನ ಅಂತಿಮ‌ ದರ್ಶನವನ್ನು ಪಡೆದಿದ್ದಾರೆ.

ಕುಶಾಲತೋಪು ಸಿಡಿಸಿ ಗೌರವ ಸಲ್ಲಿಕೆ

ಸ್ಥಳದಲ್ಲಿ ಸ್ಥಳೀಯರು ಮುರಳೀಧರ್ ಅಮರ್ ರಹೇ ಘೋಷಣೆ ಕೂಗಿದ್ದು, ಬಳಿಕ ಮೃತ ಯೋಧ ಮುರುಳೀಧರ್ ಪಾರ್ಥಿವ ಶರೀರಕ್ಕೆ ದ.ಕ ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆಯಾಗಿದೆ. ಪೊಲೀಸ್ ಇಲಾಖೆಯಿಂದ‌ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಗಿದೆ. ಎಸ್ಎಸ್‌ಬಿ ಕಡೆಯಿಂದ ರಾಷ್ಟ್ರಧ್ವಜ ಮತ್ತು ಮುರಳೀಧರ ಅವರ ಫೋಟೋವನ್ನು ಕುಟುಂಬಸ್ಥರಿಗೆ ನೀಡಿ ಗೌರವಿಸಲಾಗಿದೆ. ಗೌರವ ಸಲ್ಲಿಕೆ ಬಳಿಕ ಮಹಾಕಾಳಿ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಕಡುಬಡತನ ಕುಟುಂಬದ ಮುರಳೀಧರ ರೈ ಕಳೆದ 17 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಸ್ಥಳೀಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್‌ನ ಸಕ್ರೀಯ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ.

Mangaluru soldier death by heart attack in Bhopal

ತೀವ್ರ ಸಂಚಲನ ಸೃಷ್ಟಿಸಿದ "ಜಾಗಾಂ" ಕೇಸ್‌

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಮಂಗಳೂರು ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸರಿಯಾಗಿ ತನಿಖೆ ನಡೆಸದೆ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರನ್ನು ಬಂಧಿಸಿರುವ ಪೊಲೀಸ್ ಆಯುಕ್ತರ ವಿರುದ್ಧ ಫಾರೆನ್ಸಿಕ್ ತಜ್ಞ ಹಾಗೂ ವಕೀಲ ಸೇರಿ ಜಂಟಿಯಾಗಿ ಹೈಕೋರ್ಟ್ ಮೆಟ್ಟಿಲೇರುವ ನಿರ್ಧಾರ ಕೈಗೊಂಡಿದ್ದಾರೆ.

ನಗರದ ಖ್ಯಾತ ವಕೀಲ, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ಆರ್. ಹಾಗೂ ಫಾರೆನ್ಸಿಕ್ ತಜ್ಞ ಪ್ರೊ.ಡಾ. ಮಹಾಬಲ ಶೆಟ್ಟಿಯವರು ಪೊಲೀಸ್ ಇಲಾಖೆಯ ನಡೆಯನ್ನು ವಿರೋಧಿಸಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸದೆ ವೈದ್ಯರನ್ನು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಗಾಂಜಾ ಸೇವನೆ ಮಾಡುವವರನ್ನು ಗಾಂಜಾ ಪೆಡ್ಲರ್‌ಗಳೆಂದು ಬಿಂಬಿಸಿ, ಅವರ ಭವಿಷ್ಯಕ್ಕೇ ಕೊಳ್ಳಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ.

English summary
Mangaluru soldier Muralidhara Rai death by heart attack in Bhopal, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X