ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರನ್ನು ನಡುಗಿಸಿದ ಮಹಾಮಳೆ, ಕರಾವಳಿಯಲ್ಲಿ ಆತಂಕ

|
Google Oneindia Kannada News

Recommended Video

ಮಂಗಳೂರಿನಲ್ಲಿ ಮಹಾ ಮಳೆ | ಜನ ಜೀವನ ಅಸ್ತವ್ಯಸ್ತ | ಟ್ವಿಟ್ಟರ್ ನಲ್ಲಿ ಮಹಾಮಳೆ ಟ್ರೆಂಡಿಂಗ್ | Oneindia Kannada

ಮಂಗಳೂರು, ಮೇ 30: ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಸುಂದರ ಕರಾವಳಿ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದೆ. 5 ಗಂಟೆಗಳ ಕಾಲ ಬಿಡುವಿಲ್ಲದೆ ಸುರಿದ ಮಳೆಗೆ ಈಗಾಗಲೇ ಇಬ್ಬರು ಬಲಿಯಾಗಿದ್ದು, ಕರಾವಳಿಯ ಜನ ಕಂಗಾಲಾಗಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮುಂಗಾರು ಮಳೆಯಷ್ಟೇ. ಇದು ಮೆಕುನು ಎಂಬ ಸೈಕ್ಲೋನ್ ನಿಂದ ಉಂಟಾದ ಮಳೆಯಲ್ಲ ಎಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಉಡುಪಿ- ಮಂಗಳೂರಿನ ಮಹಾಮಳೆ : ಸಾರ್ವಜನಿಕರಿಗೆ ಸಹಾಯವಾಣಿಗಳುಉಡುಪಿ- ಮಂಗಳೂರಿನ ಮಹಾಮಳೆ : ಸಾರ್ವಜನಿಕರಿಗೆ ಸಹಾಯವಾಣಿಗಳು

ಮಳೆಗೆ ಸಿಲುಕಿ ಪರಿತಪಿಸುತ್ತಿರುವ ಯಾರೇ ಆದರೂ 1077 ಸಂಖ್ಯೆಯ ಸಹಾಯವಾಣಿಗೆ ಕರೆಮಾಡುವಂತೆ ಈಗಾಗಲೇ ಕೋರಲಾಗಿದೆ. ಹಲವು ಸಂಘಸಂಸ್ಥೆಗಳು ಸ್ವಇಚ್ಛೆಯಿಂದ ರಕ್ಷಣಾ ಕಾರ್ಯಕ್ಕೆ ಧಾವಿಸಿವೆ. ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಮುನ್ನೆಚ್ಚರಿಕೆಯ ಸಲುವಾಗಿ ಶಾಲೆ-ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ

ಟ್ವಿಟ್ಟರ್ ನಲ್ಲಿ ಮಂಗಳೂರು ಮಹಾಮಳೆಯೇ ಟಾಪ್ ಟ್ರೆಂಡಿಂಗ್ ಆಗಿ ಸದ್ದು ಮಾಡುತ್ತಿದೆ.

ಹಲವು ದಶಕದ ನಂತರ ದಾಖಲೆಯ ಮಳೆ

ಹಲವು ದಶಕಗಳ ನಂತರ ಮಂಗಳೂರಿನಲ್ಲಿ ಸುರಿದ ಭಾರೀ ಮಳೆ ಇದಾಗಿದೆ. ಕಳೆದ ಹಲವು ದಶಕಗಳಿಂದ ಒಂದು ದಿನಕ್ಕೆ 100 ಮಿಮೀಗಿಂತ ಹೆಚ್ಚು ಮಳೆ ಎಂದಿಗೂ ಸುರಿದಿರಲಿಲ್ಲ.

ಪ್ರವಾಸ ಮುಂದೂಡಿ

ಮಳೆಯ ಆಕ್ರೋಶಕ್ಕೆ ಮಂಗಳೂರು ಸಾಕ್ಷಿಯಾಗಿದೆ. ರಸ್ತೆಗಳು ಮುಳುಗಿವೆ, ಮನೆಗಳು ಜಲಾವೃತವಾಗಿವೆ. ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ಬರಲು ಯೋಜನೆ ಹಾಕಿಕೊಂಡಿದ್ದ ಜನರು ದಯವಿಟ್ಟು ಪ್ರವಾಸವನ್ನು ಮುಂದೂಡಿ ಎಮದು ಕೋರುತ್ತೇನೆ ಎಂದಿದ್ದಾರೆ ನಂದನ್ ಮಲ್ಯ ಉಳ್ಳಾಲ್.

ಮಾಧ್ಯಮಗಳೇ ಕ್ಯಾಮೆರಾ ಇತ್ತ ತಿರುಗಿಸಿ

ಮಾಧ್ಯಮಗಳೇ, ನಿಮ್ಮ ಕ್ಯಾಮೆರಾವನ್ನು ಮಂಗಳೂರಿನತ್ತ ತಿರುಗಿಸಲು ಸಕಾಲ ಇದು. ದಯವಿಟ್ಟು ಅವಕಾಶವಾದಿಗಳ ಕೊಳಕು ರಾಜಕೀಯದಿಂದ ಹೊರಬಂದು ಇಲ್ಲಿನ ಜನರಿಗೆ ಸಹಾಯಮಾಡಿ.

ಮೆಕುನು ಚಂಡಮಾರುತ ಮಂಗಳೂರಿನಲ್ಲಿ ಹಾವಳಿ ಎಬ್ಬಿಸಿಸದೆ ಎಂದಿದ್ದಾರೆ ಗಿರೀಶ್ ಆಳ್ವಾ.

ಸಹಾಯಕ್ಕೆ ಬಂದ ಆರೆಸ್ಸೆಸ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಮಧಿಯವರ ಸಂದೇಶಕ್ಕಾಗಿ ಕಾಯುತ್ತಿದ್ದರೆ, ಆರೆಸ್ಸೆಸ್ ಕಾರ್ಯಕರ್ತರು ಈಗಾಗಲೇ ಮಂಗಳೂರಿಗರ ಸಹಾಯಕ್ಕೆ ಧಾವಿಸಿದ್ದಾರೆ. ಮಳೆ ಬಿದ್ದ ಜಾಗಗಳಲ್ಲಿ ಅವಿಶ್ರಾಂತವಾಗಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದಿದ್ದಾರೆ ರೋಸಿ.

English summary
Mangaluru rains and Mekunu cyclone: Mangaluru taluk records a MASSIVE 344.5mm rain. This perhaps the highest rainfall recorded in the past few decades in a single day. Here are twitter comments
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X