ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಪಂಪ್‌ವೆಲ್ ಬಸ್ ನಿಲ್ದಾಣ ಯೋಜನೆಗೆ ಮರುಜೀವ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.7 : ನಗರದ ಪಂಪ್‌ವೆಲ್ ಬಳಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಐದು ವರ್ಷಗಳ ಹಿಂದಿನ ಯೋಜನೆಗೆ ಮರುಜೀವ ಬಂದಿದೆ. ಒಟ್ಟು 4 ಅಂತಸ್ತುಗಳ ನಿಲ್ದಾಣವನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದ್ದು, 20 ದಿನಗಳಲ್ಲಿ ಈ ಕುರಿತು ನೀಲನಕ್ಷೆ ತಯಾರಿಸಲಾಗುತ್ತದೆ.

ಮಂಗಳವಾರ ಜನಪ್ರತಿನಿಧಿಗಳು ಪಂಪ್‌ವೆಲ್‌ ಬಳಿಯ ಬಸ್ ನಿಲ್ದಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು, ನಗರದಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಹಲವು ವರ್ಷಗಳ ಯೋಜನೆ ಎಂದರು. [ಮಂಗಳೂರು : ವಿಮಾನ ನಿಲ್ದಾಣಕ್ಕೆ ಎರಡು ಏರೋ ಬ್ರಿಡ್ಜ್]

Pumpwell

ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಈಗಾಗಲೇ 7.5 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಸ್ವಾಧೀನ ಮಾಡಿರುವ ಜಾಗದ ಪಕ್ಕದಲ್ಲಿರುವ 11.54 ಎಕರೆ ಭೂಮಿಯನ್ನು ಪುನಃ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಆತಂಕ ಬೇಡ ಎಂದು ಶಾಸಕರು ಹೇಳಿದರು. [ಶಿರಾಡಿ ಬಂದ್, ಚಾರ್ಮಾಡಿಯಲ್ಲಿ ಟ್ರಾಫಿಕ್ ಜಾಮ್]

5.5 ಎಕರೆ ಭೂಮಿ ಬಳಕೆ ಮತ್ತು ನಿಲ್ದಾಣಕ್ಕೆ ದಾರಿ ನಿರ್ಮಿಸುವ ಬಗ್ಗೆ ಯೋಜನೆ ಸಿದ್ಧಗೊಳ್ಳುತ್ತಿದೆ. ಒಟ್ಟು 4 ಅಂತಸ್ತುಗಳ ನಿಲ್ದಾಣ ನಿರ್ಮಾಣದ ಯೋಜನೆ ಇದ್ದು, ಮೂರು ಮಹಡಿಗಳನ್ನು ಹೆದ್ದಾರಿಗೆ ಸಂಪರ್ಕಿಸಿ ಒಂದರಲ್ಲಿ ಉಡುಪಿ, ಇನ್ನೊಂದರಲ್ಲಿ ಮೂಡುಬಿದಿರೆ ಮತ್ತು ಮತ್ತೊಂದರಲ್ಲಿ ಪುತ್ತೂರು- ಕಾಸರಗೋಡು ಕಡೆಯ ಬಸ್ಸುಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಸ್ಥಳಕ್ಕೆ ಆಗಮಿಸಿದ್ದ ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಅವರು, ಪ್ರಸ್ತಾವಿತ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತದೆ. ಸದ್ಯ ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಯೋಜನೆ ಇಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನೂ ಇಲ್ಲಿಗೆ ಸ್ಥಳಾಂತರ ಮಾಡುವುದಿಲ್ಲ ಎಂದು ಹೇಳಿದರು.

English summary
The concept plan of the private bus stand at Pumpwell will be ready in the next 20 days said Mangaluru South MLA J.R.Lobo. The bus stand would be built on a 7.23-acre area within two-and-a-half years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X