ಸುಳ್ಯ: ಗುರುವಿನ ಕಾಮ ಪುರಾಣವನ್ನು ಬಿಚ್ಚಿಟ್ಟ ವಿದ್ಯಾರ್ಥಿನಿ

ಮಂಗಳೂರು, ಜುಲೈ 30 : ಗುರು ಬ್ರಹ್ಮ ಗುರು ವಿಷ್ಣು ಗುರ ದೇವೋ ಮಹೇಶ್ವರಾ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಹ, ಎನ್ನುವ ಮಾತು ಗುರುವಿಗಿರುವ ಗೌರವವನ್ನು ಸೂಚಿಸುತ್ತದೆ. ಆದರೆ, ಈ ಗೌರವಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಗುರುಗಳೂ ಇದೀಗ ಸಮಾಜದಲ್ಲಿದ್ದು, ಇಂಥ ಗುರುಗಳ ವರ್ತನೆಯಿಂದ ಗುರುವಿನ ಮೇಲಿನ ಗೌರವವೇ ಕುಂದುವಂತೆ ಮಾಡಿದೆ.

ಹೌದು, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ಮಹಾವಿದ್ಯಾಲಯದ ಪುಷ್ಪರಾಜ್ ಎನ್ನುವ ಈ ಗುರು ಮಹಾಶಯ ತನ್ನ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುವ ಮೂಲಕ ತನ್ನ ಲಫಂಗತನ ಪ್ರದರ್ಶಿಸಿದ್ದಾನೆ.

Mangaluru: professor sending explicit message to student

ಫೇಸ್ಬುಕ್ ಮೆಸೆಂಜರ್ ನಲ್ಲಿ ವಿದ್ಯಾರ್ಥಿನಿಯ ಜತೆಗೆ ತರಗತಿಯ ವಿಚಾರವಾಗಿ ಮಾತುಕತೆ ಆರಂಭಿಸಿದ್ದ ಈತ ಬಳಿಕ ವಿದ್ಯಾರ್ಥಿನಿಯ ಜತೆ ಅಶ್ಲೀಲವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಇದರಿಂದ ನೊಂದ ವಿದ್ಯಾರ್ಥಿನಿ ತನ್ನ ಗುರುವಿನ ಕಾಮ ಪುರಾಣವನ್ನು ಬಯಲು ಮಾಡಿದ್ದಾಳೆ.

ತನ್ನ ಗುರ ಯಾವ ರೀತಿಯಾಗಿ ತನ್ನಲ್ಲಿ ವರ್ತಿಸುತ್ತಿದ್ದಾನೆ ಎನ್ನುವ ಮೆಸೇಜ್ ಗಳ ಸ್ಕ್ರೀನ್ ಶಾಟ್ ತೆಗೆದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ಇದರಿಂದ ಹೆದರಿದ ಪುಷ್ಪರಾಜ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗೆ ಕಿರುಕುಳ ನೀಡಿದ ಈ ಉಪನ್ಯಾಸಕನ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಳೆದ 10 ವರ್ಷಗಳಿಂದ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಪುಷ್ಪರಾಜ್ ಗೆ ವಿವಾಹವಾಗಿ ಎರಡು ಮಕ್ಕಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+