ಸದ್ಯ ಹೇಗಿದೆ ಶಬರಿಮಲೆ ಪರಿಸ್ಥಿತಿ: ಕರಾವಳಿಯ ಮಾಲಾಧಾರಿ ವಿಡಿಯೋದಲ್ಲಿ ಹೇಳಿದ್ದೇನು..?

ಮಂಗಳೂರು, ಡಿಸೆಂಬರ್‌ 19: ಕೇರಳ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಕಳೆದ ಹತ್ತು ದಿನಗಳಿಂದ ಭಕ್ತರ ಸಂಖ್ಯೆ ಏರಿಕೆಯಾಗಿ ನೂಕು ನುಗ್ಗಲು ಉಂಟಾಗಿತ್ತು. ಇದೀಗ ಭಕ್ತರ ಸಂಖ್ಯೆ ಇಳಿಕೆಯಾಗಿದೆಯೆಂದು ಕರಾವಳಿಯ ಅಯ್ಯಪ್ಪ ಮಾಲಾಧಾರಿಯೊಬ್ಬರು ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.

ಇಂದು ಶಬರಿಮಲೆಯಲ್ಲಿ ಎಂದಿಗಿಂತ ಅಯ್ಯಪ್ಪ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ನೂಕು ನುಗ್ಗಲಿನಿಂದ ಕೂಡಿದ್ದ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಶಬರಿಮಲೆಯಿಂದಲೇ ಕರಾವಳಿ ಭಾಗದ ಅಯ್ಯಪ್ಪ ಮಾಲಾಧಾರಿಯೊಬ್ಬರು ವೀಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.

Mangaluru Devotee Reaction About The Sabarimala Situation

ಟಿಕೆಟ್ ಮಾಡಿದವರು ಭಕ್ತರ ಸಂಖ್ಯೆ ಹೆಚ್ಚಿದೆಯೆಂದು ಕ್ಯಾನ್ಸಲ್ ಮಾಡಬೇಡಿ, ಆರಾಮವಾಗಿ ಬಂದು ಅಯ್ಯಪ್ಪನ ದರ್ಶನ ಮಾಡಬಹುದು. ಇಲ್ಲಿ ಯಾವುದೇ ನೂಕು ನುಗ್ಗಲು ಇಲ್ಲ. ಎಂದಿನಂತೆ ಶಬರಿಮಲೆಯ ಅಯ್ಯಪ್ಪ ದರ್ಶನ ಮಾಡಲು ಸಾಧ್ಯವಾಗುತ್ತದೆ‌. ಪಂಪಾದಿಂದ ಗಣೇಶ ಬೆಟ್ಟವಾಗಿ ಮಾಲಾಧಾರಿಗಳು ಶಬರಿಮಲೆ ಸನ್ನಿಧಾನಕ್ಕೆ ನಿರಂತರವಾಗಿ ಆರಾಮದಲ್ಲಿ ಹೋಗುತ್ತಿದ್ದಾರೆ ಯಾವುದೇ ನೂಕು ನುಗ್ಗಲು ಇಲ್ಲ ಇಂದು ಅಯ್ಯಪ್ಪ ಮಾಲಾಧಾರಿಯೊಬ್ಬರು ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಶಬರಿಮಲೆ ಅವ್ಯವಸ್ಥೆ: ಕೇರಳ ಸರ್ಕಾರಕ್ಕೆ ಕೇಂದ್ರ ಸಚಿವರ ಮನವಿ

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಇತ್ತೀಚೆಗೆ ನೂಕುನುಗ್ಗಲು ಸಂಭವಿಸಿ ಅವಘಡಗಳು ಸಂಭವಿಸಿತ್ತು. ಭಕ್ತರು ಶಬರಿಮಲೆಯ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ದಿನದಿಂದ ದಿನಕ್ಕೆ ದೂರಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕಿಶನ್‌ ರೆಡ್ಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.

Mangaluru Devotee Reaction About The Sabarimala Situation

ಈ ಸಮಯದಲ್ಲಿ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದಾರೆ. ವಿವಿಧ ರಾಜ್ಯಗಳಿಂದ ಅಯ್ಯಪ್ಪ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಸದ್ಯ ಯಾತ್ರಾರ್ಥಿಗಳು ಅಲ್ಲಿಗೆ ಹೋಗುವಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಇದನ್ನು ಪರಿಹರಿಸುವಂತೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಮನವಿ ಮಾಡಿದ್ದಾರೆ.

ದೇಗುಲದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು. ಇದರಿಂದ ಭಕ್ತರು ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಬಹುದು. ಇದಲ್ಲದೆ ಭಕ್ತರಿಗೆ ಆಹಾರ, ನೀರು, ಶುದ್ಧ ನೈರ್ಮಲ್ಯ ಪರಿಸರ ವ್ಯವಸ್ಥೆ, ವೈದ್ಯಕೀಯ ನೆರವು ಸಿಗುವಂತೆ ವ್ಯವಸ್ಥೆ ಮಾಡಿ. ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸುರಕ್ಷಿತ ಮಾರ್ಗಗಳನ್ನು ನಿರ್ಮಿಸಿ ಭಕ್ತರು ಸುರಕ್ಷಿತವಾಗಿ ತೆರಳುವಂತೆ ಮಾಡಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+