ಮಂಗ್ಳೂರು: ಟಿಪ್ಪುವಿವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ
ಮಂಗಳೂರು, ನವೆಂಬರ್, 16 : ಟಿಪ್ಪು ಸುಲ್ತಾನ್ ವಿವಾದದ ಹಿನ್ನೆಲೆಯಲ್ಲಿ ನಿರ್ಮಾಣವಾದ ಉದ್ರಿಕ್ತ ವಾತಾವರಣ ಸಂಪೂರ್ಣ ಸಹಜ ಸ್ಥಿತಿಗೆ ಮರಳುವವರೆಗೆ ಬಹಿರಂಗ ಸಭೆ, ಜಾಥಾ, ಪ್ರತಿಭಟನೆ, ರೋಡ್ ಶೋ, ಧರಣಿ ನಡೆಸುವುದನ್ನು ನವೆಂಬರ್ 20ರ ಶುಕ್ರವಾರದವರೆಗೆ ನಿಷೇಧಿಸಲಾಗಿದೆ
ಜಿಲ್ಲೆಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಭಾನುವಾರ ರಾತ್ರಿ ಅಂತ್ಯಗೊಂಡಿದ್ದು, ಆದರೂ ಕೆಲವೊಂದು ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ಇದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅನಿವಾರ್ಯ, ತುರ್ತು ಸಂದರ್ಭಗಳಲ್ಲಿ ಕಾರ್ಯಕ್ರಮ ನಡೆಸುವವರು ಜಿಲ್ಲಾಧಿಕಾರಿ ಬಳಿ ಅನುಮತಿಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.[ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

ಮಂಗಳೂರಲ್ಲಿ ಹೇಗಿದೆ ಭದ್ರತೆ ವ್ಯವಸ್ಥೆ?
ಜಿಲ್ಲೆಗೆ ಮತ್ತಷ್ಟು ಪೊಲೀಸ್ ಭದ್ರತೆ ಒದಗಿಸಲು ಹೊರಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯೂ ಹಾಗೂ ಅರೆ ಮೀಸಲು ಪಡೆಯೂ ಜಿಲ್ಲೆಗೆ ಆಗಮಿಸಿದೆ. ಮಂಗಳೂರು ನಗರಕ್ಕೆ 10 ಕೆಎಸ್‌ಆರ್‌ಪಿ ಪ್ಲಟೂನ್ ಗಸ್ತನ್ನು ಒದಗಿಸಲಾಗಿದೆ. ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭದ್ರತೆ ಕುರಿತು ಮಾಹಿತಿ ನೀಡಿದರು.[ಟಿಪ್ಪು ಜಯಂತಿ ಗಲಭೆಯ ಹಿಂದೆ ಸರಕಾರದ ಒಳ ರಾಜಕಾರಣ: ಕಟೀಲ್]
ರಾತ್ರಿ ವೇಳೆಯಲ್ಲಿಯೇ ಅನೇಕ ಅಹಿತಕರ ಘಟನೆಗಳು ನಡೆದಿರುವುದರಿಂದ ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲಿ ವಿಶೇಷ ನಾಕಾಬಂಧಿ ಹಾಕಲಾಗಿದೆ, ವಾಹನಗಳ ತಪಾಸಣೆಗೆ ವಿಶೇಷ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದ್ದಾರೆ
ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ :
ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ ಇಬ್ರಾಹಿಂ, 'ಸೂಕ್ಷ್ಮ ಸಂದರ್ಭಗಳಲ್ಲಿ ಕತ್ತಲಾದ ನಂತರ ಸಾರ್ವಜನಿಕರು ಸಾಧ್ಯವಾದಷ್ಟು ಸಂಚಾರ ಕಡಿಮೆಗೊಳಿಸಬೇಕು.[ಬ್ರಿಟಿಷರ ಕಾಲದಲ್ಲಿ ಕೆಂಪೇಗೌಡ್ರು ಇದ್ದಿದ್ದರೆ ಟಿಪ್ಪು ಆಗುತ್ತಿದ್ದರು, ಎಚ್ಡಿಕೆ]
ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಮೂಡಲು ಜಿಲ್ಲಾಡಳಿತದೊಂದಿಗೆ ಮುಂದೆಯೂ ಸಹಕರಿಸಬೇಕು. ಅಹಿತಕರ ಘಟನೆಗೆ ಒಳಗಾದ ಗಾಯಾಳುಗಳ ವೈದ್ಯಕೀಯ ವೆಚ್ವವನ್ನು ಜಿಲ್ಲಾಡಳಿತ ಭರಿಸಲಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಕಾಪಾಡಲು ಸಹಕರಿಸುತ್ತಿರುವ ಜನತೆಗೆ ಅಭಿನಂದನೆ' ತಿಳಿಸಿದರು.












Click it and Unblock the Notifications