ಮಂಗಳೂರು ದಸರಾಕ್ಕೆ ಸೆಪ್ಟೆಂಬರ್ 21ರಂದು ಚಾಲನೆ
ಮಂಗಳೂರು,
ಸೆಪ್ಟೆಂಬರ್ 18: 'ಮಂಗಳೂರು ದಸರಾ' ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಇದೇ ಸೆಪ್ಟೆಂಬರ್ 21ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ . id="toptextpromo"> id='are-slot-1' class='oiad oi-axt oiadv'>ಶಾರದಾ
ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. id='are-slot-2' class='oiad oi-axt oiadv'>
1990ರಿಂದ ದಸರಾ ಮಹೋತ್ಸವ
"1990 ರಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಅದ್ಧೂರಿ ನವರಾತ್ರಿ ಉತ್ಸವ ನಡೆದು ಬಂದಿದೆ. ಶ್ರೀಕ್ಷೇತ್ರದ ದಸರಾ ಹಬ್ಬವೆಂದರೆ ಮಂಗಳೂರು ದಸರಾ ಎಂದೇ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಭರ್ಜರಿ ಮೆರವಣಿಗೆ
"ಈ ಬಾರಿಯ ದಸರಾ ಸಿದ್ಧತೆ ಕುದ್ರೋಳಿಯಲ್ಲಿ ಭರದಿಂದ ಸಾಗಿದೆ. ರಾಷ್ಟ್ರಮಟ್ಟದಲ್ಲಿ ಎದ್ದು ಕಾಣುವಂತೆ ಈ ಬಾರಿ ದಸರಾ ಮೆರವಣಿಗೆ ಮಾಡಲಾಗುವುದು," ಎಂದು ಜನಾರ್ದನ ಪೂಜಾರಿ ತಿಳಿಸಿದರು.

ರಾಜ್ಯ ಸರಕಾರದ ಸಚಿವರಿಂದ ಚಾಲನೆ
ಇದೇ ಬರುವ ಸೆಪ್ಟೆಂಬರ್ 21 ರಂದು ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಬಾರಿ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಸಚಿವರೊಬ್ಬರು ಚಾಲನೆ ನೀಡಲಿದ್ದಾರೆ ಎಂದು ಹೇಳಿದ ಅವರು ಸಚಿವರ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು .

ಸೆಪ್ಟೆಂಬರ್ 30ರಂದು ಮೆರವಣಿಗೆ
ಸೆಪ್ಟೆಂಬರ್ 30 ರಂದು ಸಂಜೆ ಶ್ರೀ ಕ್ಷೇತ್ರದಿಂದ ಮಂಗಳೂರು ದಸರಾ ಮೆರವಣಿಗೆ ಹೊರಡಲಿದ್ದು ಶಾರದಾ ಮಾತೆ , ಮಹಾಗಣಪತಿ , ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ವಿವಿಧ ಭಾಗಳಿಂದ ಬರುವ 75 ಕ್ಕೂ ಅಧಿಕ ಕಲಾ ಪ್ರಕಾರಗಳು ಹಾಗೂ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದು ಅವರು ಹೇಳಿದರು .












Click it and Unblock the Notifications