'ಮಂಗಳೂರು ಚಲೋ' ಬೈಕ್ ಜಾಥಾ ನಿಷೇಧಿಸಿ : ಎಸ್.ಡಿ.ಪಿ.ಐ ಒತ್ತಾಯ

ಮಂಗಳೂರು, ಸೆಪ್ಟೆಂಬರ್ 3: ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಬೈಕ್ ಜಾಥಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಯುವ ಮೋರ್ಚಾದ ಕಾರ್ಯಕ್ರಮವನ್ನು ವಿಫಲಗೊಳಿಸಿವುದಾಗಿ ಎಸ್.ಡಿ.ಪಿ.ಐ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಣಾಜೆ ತಿಳಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, "

ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಯುವ ಮೋರ್ಚಾದ ಬೈಕ್ ಜಾಥಾವನ್ನು ನಿಷೇಧಿಸಿ," ಎಂದು ಆಗ್ರಹಿಸಿದರು.

'Mangaluru Chalo to disturb peace in district, should be stopped – SDPI

ಸೆಪ್ಟಂಬರ್ 7 ರಂದು ಬಿಜೆಪಿ ಯುವ ಮೋರ್ಚಾ ನಡೆಸಲುದ್ದೇಶಿಸಿರುವ 'ಮಂಗಳೂರು ಚಲೋ' ಬೈಕ್ ರ್ಯಾಲಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

"ಕಳೆದ ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ಚೂರಿ ಹಾಕಿದ ಘಟನೆಯಿಂದ ಹಿಡಿದು ಹಲವು ದುಷ್ಕೃತ್ಯಗಳ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುವ ಹುನ್ನಾರವನ್ನು ಸಂಘ ಪರಿವಾರ ಸಂಘಟನೆಗಳು ನಡೆಸುತ್ತಿವೆ," ಎಂದು ಅವರು ಆರೋಪಿಸಿದರು.

ಈ 'ಮಂಗಳೂರು ಚಲೋ' ಕಾರ್ಯಕ್ರಮದ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವ ತಂತ್ರಗಾರಿಕೆಯೂ ಅಡಗಿದೆ ಎಂದು ಅವರು ಆರೋಪಿಸಿದರು.

'Mangaluru Chalo to disturb peace in district, should be stopped – SDPI

ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಸುಳ್ಳು ಹೇಳಿಕೆಗಳನ್ನು ನೀಡಿ, ಪ್ರಚೋಧನಾತ್ಮಕ ಭಾಷಣಗಳನ್ನು ಮಾಡಿ ಜಿಲ್ಲೆಯ ಮತ್ತು ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+