ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

|
Google Oneindia Kannada News

ಮಂಗಳೂರು, ನ.1 : Mangalore ಮಂಗಳೂರು Mangaluru ಆಗಿ ಬದಲಾವಣೆಯಾಗಿದೆ. ಈ ಸಂಭ್ರಮವನ್ನು ವರ್ಣರಂಜಿತ ಬಲೂನ್‍ಗಳನ್ನು ಹಾರಿಸುವ ಮೂಲಕ ಶನಿವಾರ 59ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.

ನಗರದ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಪೊಲೀಸ್ ಇಲಾಖೆಯ ಗೌರವರಕ್ಷೆಯನ್ನು ಸ್ವೀಕರಿಸಿ, ಧ್ವಜರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿರ ರಮಾನಾಥ ರೈ, ಕನ್ನಡ ಬಳಕೆಗೆ ಸರ್ಕಾರ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದೆ. ಆದರೆ, ಇದರ ನಿಜವಾದ ಯಶಸ್ಸು ದೊರೆಯುವುದು ನಾಡಿನ ಜನತೆ ನೂರಕ್ಕೆ ನೂರರಷ್ಟು ಅದನ್ನು ಜಾರಿಗೊಳಿಸಿದಾಗ ಮಾತ್ರ ಎಂದರು. [ಕನ್ನಡ ರಾಜ್ಯೋತ್ಸವ, ಸಿಎಂ ಭಾಷಣದ ಮುಖ್ಯಾಂಶಗಳು]

ಭಾಷಾ ಶ್ರೀಮಂತಿಕೆಯಲ್ಲಿ ಕರಾವಳಿ ಜಿಲ್ಲೆ ವೈವಿಧ್ಯತೆಯನ್ನು ಮೆರೆದಿದೆ. ಬಹುಭಾಷೆ, ಧರ್ಮ ಮತ್ತು ಸಂಸ್ಕೃತಿಗಳ ವೈವಿಧ್ಯತೆಯಲ್ಲಿಯೇ ಏಕತೆಯನ್ನು ಕಂಡುಕೊಂಡ ಹೆಮ್ಮೆಯ ಪರಂಪರೆಯ ವಾರಸುದಾರರು ನಾವು. ಈ ಸಂಬಂಧ ಮುರಿದುಬೀಳಲು ಅವಕಾಶ ನೀಡಬಾರದು ಎಂದು ಸಚಿವರು ಕರೆ ನೀಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಪದಾಧಿಕಾರಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. [12 ನಗರಗಳಿಗೆ ಇಂದಿನಿಂದ ಹೊಸ ಹೆಸರು]

59ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉಡುಪಿ ವರದಿ : ಉಡುಪಿಯ ಎಮ್‌ಜಿಎಂ ಕ್ರೀಡಾಂಗಣದಲ್ಲಿ ಏರ್ಡಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಮಾರ್‌ ಸೊರಕೆಯವರು ಧ್ವಜಾರೋಹಣ ನೆರವೇರಿಸಿದರು.

ಉಡುಪಿಯಲ್ಲಿ ಸಕಾ೯ರಿ ವೈದ್ಯಕೀಯ ಕಾಲೇಜಿನ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ಉಪ್ಪೂರಿನಲ್ಲಿ ಸಕಾ೯ರಿ ಜಾಗವನ್ನು ಗುರುತಿಸಲಾಗಿದೆ. ಶೀಘ್ರವೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

Dakshina Kannada

ಚಿತ್ರಗಳು : ಐಸಾಕ್ ರಿರ್ಚಡ್ ಮಂಗಳೂರು

English summary
'From today onwards let us call this city as 'Mangaluru' instead of Mangalore said Dakshina Kannada district in charge minister B.Ramanath Rai at Nehru Maidan on celebration of 59th Kannada Rajyotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X