ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಮೇಲೆ ದಾಳಿ

|
Google Oneindia Kannada News

ಮಂಗಳೂರು, ಡಿಸೆಂಬರ್ 28: ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯ ಸಾಮಗ್ರಿಗಳ ಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್ ಗೆ ಪೊಲೀಸರು ದಾಳಿ ನಡೆಸಿ ಲಾರಿ ಹಾಗೂ ಬಿಸಿಯೂಟ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಬಳಿಯ ಗೋಡೌನ್ ಗೆ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಮರಳು ದಾಸ್ತಾನು ಬಚ್ಚಿಟ್ಟ ಆರೋಪ : 3 ಜನ ಪೊಲೀಸ್ ಸಸ್ಪೆಂಡ್ಅಕ್ರಮ ಮರಳು ದಾಸ್ತಾನು ಬಚ್ಚಿಟ್ಟ ಆರೋಪ : 3 ಜನ ಪೊಲೀಸ್ ಸಸ್ಪೆಂಡ್

ನಗರದ ದಂಬೇಲ್ ಗುರುಕೃಪಾ ಆಯಿಲ್ ಮಿಲ್ ನಲ್ಲಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಗಳ ಅನ್ವಯ ಒದಗಿಸಲಾಗುವ ಅಕ್ಕಿ, ತೊಗರಿಬೇಳೆ ಹಾಲಿನ ಹುಡಿ ಪ್ಯಾಕೆಟ್ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Mangaluru CCB police Raid on godowns mid-day meals materials seized, three arrested

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕುಸ್ಟಗಿ ನಿವಾಸಿ ಬಸವರಾಜು, ಮಂಗಳೂರು ಅಶೋಕ ನಗರ ನಿವಾಸಿ ಚಂದ್ರ ಕುಮಾರ್, ಚಿಲಿಂಬಿ ನಿವಾಸಿ ರಕ್ಷಿತ್ ಅವರನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯ ದಾಸ್ತಾನು, ಕಪಾಲಿ ಮೋಹನ್ ವಿರುದ್ಧ ಮತ್ತೊಂದು ಕೇಸ್ಅಕ್ರಮ ಮದ್ಯ ದಾಸ್ತಾನು, ಕಪಾಲಿ ಮೋಹನ್ ವಿರುದ್ಧ ಮತ್ತೊಂದು ಕೇಸ್

ಬಂಧಿತರಿಂದ 25 ಕೆಜಿ ನಂದಿನಿ ಹಾಲಿನ ಪುಡಿ, ಒಂದು ಕ್ವಿಂಟಾಲ್ ತೊಗರಿಬೇಳೆ, 2.5 ಕ್ವಿಂಟಾಲ್ ಅಕ್ಕಿ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 10.49 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

English summary
Mangaluru CCB police raided a godown where mid-day meals and Ksheera Bhagya scheme materials were illegally stored, at Dambel. connected to this case police team arrested three persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X