ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.21ರಿಂದ ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು

|
Google Oneindia Kannada News

ಮಂಗಳೂರು, ಫೆಬ್ರವರಿ 13 : ಮಂಗಳೂರು-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರದ ದಿನಾಂಕ ನಿಗದಿಯಾಗಿದೆ. ಫೆ.21ರಂದು ನೂತನ ರೈಲಿನ ಸಂಚಾರಕ್ಕೆ ಚಾಲನೆ ಸಿಕ್ಕಿದೆ.

ನೈಋತ್ಯ ರೈಲ್ವೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಫೆ.21ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ.

ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲುಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು

ಬೆಂಗಳೂರಿನಿಂದ ಹೊರಡುವ ರೈಲು ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

 train

ವೇಳಾಪಟ್ಟಿ : ಮಂಗಳವಾರ, ಶುಕ್ರವಾರ, ಭಾನುವಾರ ಮಧ್ಯಾಹ್ನ 4.30 ಬೆಂಗಳೂರಿನಿಂದ ಹೊರಡುವ ರೈಲು 8 ಗಂಟೆಗೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳುಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳು

ಮಂಗಳೂರಿನಿಂದ ಸೋಮವಾರ, ಬುಧವಾರ, ಶನಿವಾರ ಸಂಜೆ 7ಗಂಟೆಗೆ ಹೊರಡುವ ರೈಲು, ತಡರಾತ್ರಿ 1.30ಕ್ಕೆ ಹಾಸನ ತಲುಪಲಿದೆ. ಮುಂಜಾನೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬರಲಿದೆ.

ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ

ನಿಲ್ದಾಣಗಳು : ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

English summary
Mangaluru and Bengaluru new train will run from February 21, 2019. Railway department approved for the South Western Railway's proposal to run new express train between two city's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X