'ತುಳುವೆರ ಮಿನದನ' ಜಾನಪದ ಹಬ್ಬ, ಆಹಾರೋತ್ಸವ

ಮಂಗಳೂರು, ಅ. 14 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಪಡು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಮತ್ತು ನಾಗರಿಕರ ಸಹಕಾರದಲ್ಲಿ ಅಕ್ಟೋಬರ್‌ 19 ಭಾನುವಾರ 'ತುಳುವೆರ ಮಿನದನ' ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ.

ಪಡು ಬದನಡಿ ಸಮೀಪದ ಕೋರೆಟ್ಟುಗುತ್ತು ಗದ್ದೆಯಲ್ಲಿ ಅ.19ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.[ಎಲ್ಲ ಜಿಲ್ಲೆಗಳಲ್ಲೂ ಪ್ರಾದೇಶಿಕ ವಿಜ್ಞಾನ ಕೇಂದ್ರː ಸಿಎಂ]

Mangalore: Tuluvera Minadara programme in Padu

ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಪುರುಷ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಟೊಂಕ ಓಟ, ಅಡ್ಯೆಗಳ ಪ್ರದರ್ಶನ, ಎದುರುಕತೆ, ಜಿಗಿ, ಮೂಟೆ ಹೊತ್ತು ಓಟ, ಊಳುಮೆಯೊಂದಿಗೆ ಉರೋಲ್, ನೀರಿನ ಮಡಿಕೆ ಹೊತ್ತು ಈಟ, ಪಿರಮಿಡ್ ರಚಸಿ ನಿಧಿ ತೆಗೆಯುವ ಸ್ಪರ್ಧೆ ಆಯೋಜಿಸಲಾಗಿದೆ.

ಲಗೋರಿ, ಪಲ್ಲಿ, ಬೈತ್ ಬಲ್ ಬುಡ್ಪುನಿ, ಬುಟ್ಟಿ ನೆಯ್ತಿನಿ, ಮುಡಿ ಕಟ್ಟುನು ಮತ್ತಿತರ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಚೆಂಡಾಟ, ಮಡಲ್ ಮೊಡೆಪಿನಿ, ಪಾಡ್ದನ, ತಪ್ಪಂಗಾಯಿ ಸೇರಿದಂದರೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.[ರೈಲಿನ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿ ಸಾವು]

ಛಾಯಾಚಿತ್ರ ಸ್ಪರ್ಧೆ: ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ. ರಜತ ಮಹೋತ್ಸವದ ವೇಳೆ ವಿಜೇತರನ್ನು ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. 'ಗ್ರಾಮೊಡ್ ಗಮ್ಮತ್' ಎಂಬ ವಿಷಯದ ಆಧಾರದಲ್ಲಿ ಫೋಟೊ ಕಳುಹಿಸಿಕೊಡಬೇಕು. ಫೋಟೊಗಳು 'ತುಳುವೆರ ಮಿನದನ' ಕಾರ್ಯಕ್ರಮದಲ್ಲೇ ತೆಗೆದವಾಗಿರಬೇಕು.

ಆಹಾರೋತ್ಸವ: ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಆಹಾರೋತ್ಸವ. ತುಳಿನಾಡಿನ ವಿಶೇಷ ತಿಂಡಿಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಕೋಎಇ-ರೊಟ್ಟಿ, ಮೀನ್ ತವಾ ಪ್ರೈ, ಮರುವಾಯಿ ಪುಂಡಿ, ಇಡ್ಲಿ ಸಾಂಬಾರ್, ಸೆಮೆದಡ್ಯೆ ಕೊರಿಸಾರ್ ಮುಂತಾದ ವಿಶೇಷ ಬಗೆಯ ಖಾದ್ಯಗಳು ಲಭ್ಯವಾಗಲಿದೆ. ಅಲ್ಲದೇ ಆಹಾರೋತ್ಸವದಲ್ಲಿ ವಿಜೇತಯ ತಂಡಗಳಿಗೆ ಬಹುಮಾನವನ್ನು ನೀಡಲಾಗಿವುದು.

ಭಾಗವಹಿಸುವ ಪ್ರಮುಖರು: ಕಾರ್ಯಕ್ರಮದಲ್ಲಿ ಅಗ್ರಜ ಬಿಲ್ಡರ್ಸ್ ನ ಸಂದೇಶ್‌ ಕುಮಾರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಗಣೇಶ್‌ ರಾವ್‌, ಗಿರಿಧರ ಶೆಟ್ಟಿ, ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಪತ್ರಕರ್ತ ಹರೀಶ್ ರೈ, ಬದನಡಿ ಕ್ಷೇತ್ರದ ಮೊಕ್ತೇಸರರಾದ ಗೋಪಾಳಕೃಷ್ಣ ಭಂಢಾರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+