ಮಂಗಳೂರಿನ 'ಮೃತ್ಯುಂಜಯ' ನವಜಾತ ಶಿಶು ಮರಣ

ಮಂಗಳೂರು, ಆ.24: ಅವಧಿಗೂ ಮುನ್ನ ಜನಿಸಿದ ಮಗುವೊಂದು ಸತ್ತಿದೆ ಎಂದು ಭಾವಿಸಿ ಪೋಷಕರು ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಹಿಂದೂ ಪದ್ದತಿಯಂತೆ ಗುಂಡಿ ತೋಡಿ ಮಗುವಿನ ಬಾಯಿಗೆ ಹಾಲು ಹಾಕುವ ಸಮಯದಲ್ಲಿ ಮಗು ಕಣ್ ಬಿಟ್ಟು ಹಾಲನ್ನು ಚಪ್ಪರಿಸಿದೆ. ಹೀಗೊಂದು ವೈದ್ಯಕೀಯ ವಿಸ್ಮಯಕ್ಕೆ ಮಂಗಳೂರಿನ ಜನತೆ ಅಚ್ಚರಿ ಪಟ್ಟಿದ್ದಾರೆ.

ಇದೀಗ ಬಂದ ಸುದ್ದಿ: ಆದರೆ, ಈ ಅಚ್ಚರಿ, ಪೋಷಕರ ಸಂತಸ ಹೆಚ್ಚು ಕಾಲ ಇರಲಿಲ್ಲ. ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವ ಸುದ್ದಿ ಬಂದಿದೆ. ಎರಡು ಬಾರಿ ಸಾವಿನ ಸುದ್ದಿ ಕೇಳಿದ ತಾಯಿ ರೋದನ ಮುಗಿಲು ಮುಟ್ಟಿದೆ. ಮಂಗಳೂರಿನ ಮೃತ್ಯುಂಜಯ ಎನಿಸಿಕೊಂಡಿದ್ದ ನವಜಾತ ಶಿಶು ಸಾವನ್ನಪ್ಪುವುದಕ್ಕೂ ಮುನ್ನ ನಡೆದ ಘಟನಾವಳಿಗಳ ವಿವರ ಕೆಳಗಿನಂತಿದೆ....

ಈ ಘಟನೆ ನಂತರ ಗಲ್ಫ್ ನಲ್ಲಿ ಉದ್ಯೋಗದಲ್ಲಿರುವ ಪುಷ್ಪರಾಜ್ ಹಾಗೂ ಸೋಮೇಶ್ವರದ ಗೌರಿ ದಂಪತಿಗೆ ಪುತ್ರನಿಗೆ ಮೃತ್ಯುಂಜಯ ಎಂದು ಹೆಸರಿಡಲಾಗಿದೆ. ಆದರೆ, ಸಾವು ಗೆದ್ದ ಕಂದಮ್ಮ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿದ್ದು, ಬದುಕುಳಿಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ಪುಷ್ಪರಾಜ್ ಅವರೇ ಹೇಳಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವ (ಅ.15) ದಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗೌರಿ ಅವರು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಅವಧಿಗೆ ಮುನ್ನ (ಆರೂವರೆ ತಿಂಗಳಿಗೆ) ಮಗು ಜನಿಸಿದೆ. ಮಗುವಿನ ಬಗ್ಗೆ ಕಾಳಜಿ ತೆಗೆದುಕೊಂಡ ಯೆನೆಪೋಯ ಕಾಲೇಜಿನ ಆಸ್ಪತ್ರೆಯ ಡಾ. ಪ್ರಕಾಶ್ ಹಾಗೂ ಡಾ. ಮಿಥುನ್ ತಕ್ಷಣವೇ ಮಗುವನ್ನು ಇಂಕ್ಯೂಬೇಟರ್ ನಲ್ಲಿರಿಸಿದ್ದಾರೆ.

Mangalore: Premature baby proclaimed dead by doctors found alive

ವೈದ್ಯರು ಹೇಳಿದ್ದೇನು?: ಆ.23ರಂದು ಪುಷ್ಪರಾಜ್ ರನ್ನು ಕರೆದು ಮಗುವನ್ನು ಈಗ ವೆಂಟಿಲೇಟರ್ ಸಪೋರ್ಟ್ ನಲ್ಲಿರಿಸಲಾಗಿದೆ. ಅದನ್ನು ತೆಗೆದರೆ ಮಗು ಒಂದು ಗಂಟೆ, ಒಂದು ದಿನ ಹೀಗೆ ಎಷ್ಟು ಕಾಲ ಬದುಕಲಿದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಮಗುವಿಗೆ ಆಮ್ಲಜನಕ ಕೊರೆತೆ ಉಂಟಾಗಬಹುದು ಎಂದು ಪರಿಸ್ಥಿತಿ ವಿವರಿಸಿದ್ದಾರೆ. ಮಗುವನ್ನು ಕೊಂಡೊಯ್ಯುವುದಾಗಿ ಹೇಳಿ ಪುಷ್ಪರಾಜ್ ತೆರಳಿದ್ದಾರೆ.

ವೈದ್ಯರು ಮಗು ಸಾಯಲಿದೆ ಎಂದು ಹೇಳಿದ ಮೇಲೆ ಬಿಳಿ ಬಟ್ಟೆ ತಂದು ಮಗುವನ್ನು ಕಂಪುಗುಡ್ಡೆ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಅಣಿ ಮಾಡುವ ಮುನ್ನ ಹಿಂದೂ ಸಂಪ್ರದಾಯದಂತೆ ಮಗುವಿನ ಹಾಲು ಹಾಕಿದ್ದಾರೆ. ತುಟಿಯ ಮೇಲೆ ಹಾಲು ಬಿಡುತ್ತಿದ್ದಂತೆ ಮಗು ಕಣ್ಬಿಟ್ಟಿದೆ. ತಕ್ಷಣವೇ ಪೋಷಕರು ಮಗುವನ್ನು ಮಂಗಳೂರಿನ ಎಸ್ ಟಿಎಸ್ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮಗು ಇನ್ನೂ ವಿಷಮ ಪರಿಸ್ಥಿತಿಯಲ್ಲಿದ್ದು, ಚೇತರಿಕೆ ಕಂಡಿಲ್ಲ ಎಂದು ತಿಳಿದು ಬಂದಿದೆ.

ವೈದ್ಯರ ನಿರ್ಲಕ್ಷ್ಯವೇ?: ಯೆನೆಪೋಯಾ ಆಸ್ಪತ್ರೆಯಿಂದ ಮಗುವನ್ನು ಹೊರಕ್ಕೆ ಕರೆ ತಂದಾಗ ಮಗು ಉಸಿರಾಡುತ್ತಿರಲಿಲ್ಲ. ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದರು ಹೀಗಾಗಿ ನಾವು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡೆವು. 50-60 ಸಾವಿರ ರು ಬಿಲ್ ಮಾಡಿ ಮಗುವಿನ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಬದುಕಿರುವ ಮಗುವನ್ನು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ ಎಂದು ಪುಷ್ಪರಾಜ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೆನೆಪೋಯಾ ಆಸ್ಪತ್ರೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ರಘುರಾಮ್, ಇದೆಲ್ಲವೂ ಸುಳ್ಳು ಸುದ್ದಿ. ವೈದ್ಯರು ನಿರ್ಲಕ್ಷ್ಯ ಮಾಡಿಲ್ಲ, ಮಗು ಸಾವನ್ನಪ್ಪಿದೆ ಹೇಳಿಲ್ಲ. ಡೆತ್ ಸರ್ಟಿಫಿಕೇಟ್ ನೀಡಿಲ್ಲ. ಮಗುವನ್ನು ವೆಂಟಿಲೇಟರ್ ನಿಂದ ಬೇರ್ಪಡಿಸಲು ಪುಷ್ಪರಾಜ್ ಅವರೇ ಒಪ್ಪಿ ಸಹಿ ಹಾಕಿದ್ದಾರೆ. ಡೆತ್ ಸರ್ಟಿಫಿಕೇಟ್ ಪಡೆಯದೆ ಅವರು ಸ್ಮಶಾನಕ್ಕೆ ಹೇಗೆ ಹೋದರು.

ಮಗು ಸಾಯುವ ಸಾಧ್ಯತೆ ಬಗ್ಗೆ ವಿವರಿಸಲಾಗಿತ್ತೇ ಹೊರತೂ ಮಗು ಸತ್ತಿದೆ ಎಂದು ಹೇಳಿಲ್ಲ ದಯವಿಟ್ಟು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಬೇಡಿ ಎಂದು ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆ ಈ ಘಟನೆಯಿಂದ ಮಾನಸಿಕವಾಗಿ ಜರ್ಝರಿತರಾಗಿರುವ ಗೌರಿ- ಪುಷ್ಟರಾಜ್ ದಂಪತಿ ಮಗುವನ್ನು ಉಳಿಸಿಕೊಟ್ಟಪ್ಪ ತಂದೆ ಎಂದು ದೇವರ ಮೊರೆ ಹೊಕ್ಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+