ಕೈ ಸೇರಲಿದೆ ಸಕಲ ಮಾಹಿತಿಯ ಬೈಂದೂರು ಡೈರೆಕ್ಟರಿ
ಮಂಗಳೂರು, ಸೆ. 19 : ಕುಂದಾಪ್ರ ಡಾಟ್ ಕಾಂ ಅರ್ಪಿಸುವ 'ಬೈಂದೂರು ಡೈರೆಕ್ಟರಿ' ಪುಸ್ತಕ ಬಿಡುಗಡೆ ಸಮಾರಂಭ ಸೆ.21 ರ ಭಾನುವಾರ ಸಂಜೆ 6 ಗಂಟೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ಹಲವು ವಿಶೇಷತೆಗಳಿಂದ ತುಂಬಿರುವ ಬೈಂದೂರನ್ನು ಮರು ವ್ಯಾಖ್ಯಾನಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿರುವ 'ಬೈಂದೂರು ಡೈರೆಕ್ಟರಿ'ಯನ್ನು ಖ್ಯಾತ ಸಾಹಿತಿ ನಾ. ಡಿಸೋಜ ಬಿಡುಗಡೆ ಮಾಡಲಿದ್ದಾರೆ.(ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ)

ಹಿರಿಯ ಸಾಹಿತಿ ಚಂದ್ರಶೇಖರ ಹೊಳ್ಳ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಶತಾಬ್ಧಿ ಗವರ್ನರ್, ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಆಶಯ ಭಾಷಣ ಮಾಡಲಿದ್ದಾರೆ. ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು, ಯುಸ್ಕೋರ್ಡ್ ಟ್ರಸ್ಟ್‌ನ ನಾಗರಾಜ ಪಿ. ಯಡ್ತರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.(ಹಳೆಯ ಪುಸ್ತಕಗಳನ್ನು ರದ್ದಿಯಂಗಡಿಗೆ ಮಾರುವಿರೇತಕೆ?)
ಸಭಾ ಕಾರ್ಯಕ್ರಮದ ಬಳಿಕ ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9738877358 ಸಂಪರ್ಕಿಸಬಹುದು.












Click it and Unblock the Notifications