ಕ್ರಿಕೆಟ್ ಆಟದಲ್ಲೂ ಧರ್ಮ ಎಳೆದು ತಂದ ಕೀಚಕ; ಕ್ರೈಸ್ತ ಯುವಕ ಮೈದಾನದಿಂದಲೇ ಔಟ್
ಮಂಗಳೂರು, ಜುಲೈ 14: ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಟವಾಡಿದ ಎಂಬ ಒಂದೇ ಕಾರಣಕ್ಕಾಗಿ, ಒಂದು ಕೋಮಿನ ಯುವಕನನ್ನು ವ್ಯಕ್ತಿಯೋರ್ವ ಮೈದಾನದಿಂದ ಹೊರಗೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಯನಗರ ಎಂಬಲ್ಲಿ ನಡೆದಿದೆ.
ಜಯನಗರದ ಕೊರಗಜ್ಜ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದದಲ್ಲಿ ಸ್ಥಳೀಯ ಯುವಕ ಲೋಕೇಶ್ ಮತ್ತು ಆತನ ಕ್ರೈಸ್ತ ಗೆಳೆಯ ಸೇರಿದಂತೆ ಇತರರು ಕ್ರಿಕೆಟ್ ಆಡುತ್ತಿದ್ದರು. ಆಟದ ತಂಡದಲ್ಲಿ ಕ್ರೈಸ್ತ ಯುವಕ ಇದ್ದ ಒಂದೇ ಕಾರಣಕ್ಕೆ ಸ್ಥಳೀಯ ವ್ಯಕ್ತಿ ಪ್ರವೀಣ್ ಎಂಬಾತ ಆಟವನ್ನು ತಡೆದಿದ್ದಾನೆ. ಹಿಂದೂವಲ್ಲದವನು ಆಟ ಆಡಬಾರದು ಎಂದು ತಾಕೀತು ಮಾಡಿದ್ದಾನೆ.
ಮಸೀದಿ, ಚರ್ಚ್‌ಗಳ ಪ್ರದೇಶಗಳಲ್ಲಿ ಹಿಂದೂಗಳು ಆಡಿದರೆ, ಅವರು ಬಿಡುವುದಿಲ್ಲ. ಹಾಗಾಗಿ ಹಿಂದೂ ಜಾಗದಲ್ಲಿ ಕ್ರೈಸ್ತ ಕೂಡಾ ಆಡಬಾರದು ಎಂದು ಗದರಿಸಿದ್ದಾನೆ. ಇದಕ್ಕೆ ಜೊತೆಗಿದ್ದ ಆಟಗಾರರು ಕ್ರೈಸ್ತ ಯುವಕನ ಪರ ನಿಂತು ಆಟದಲ್ಲಿ ಧರ್ಮ ಯಾವುದಯ್ಯಾ ಅಂತಾ ಜೊತೆಗೆ ನಿಂತಿದ್ದಾರೆ.

ಈ ವೇಳೆ ಕ್ರೈಸ್ತ ಯುವಕ ತಾನು ಆಡಿರುವ ಬಗ್ಗೆ ಸಮರ್ಥನೆ ನೀಡಲು ಬಂದಾಗ ಪ್ರವೀಣ್, ಕ್ರೈಸ್ತ ಯುವಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ ಮತ್ತು ಬಲವಂತವಾಗಿ ಮೈದಾನದಿಂದ ಹೊರಗೆ ಕಳುಹಿಸಿದ್ದಾನೆ.
ನಾನು ಶಾಸಕರ ಜೊತೆ ಮಾತನಾಡಿಯೇ ಹೊರಗೆ ಕಳುಹಿಸುತ್ತಿದ್ದೇನೆ ಎಂದೂ ಈ ಸಂದರ್ಭದಲ್ಲಿ ಪ್ರವೀಣ್ ಹೇಳಿದ್ದಾನೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆಟದಲ್ಲೂ ಧರ್ಮವನ್ನು ಎಳೆದು ತಂದು, ಅವಮಾನ ಮಾಡಿದ ಪ್ರವೀಣ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications