ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ತಪ್ಪಿನ ಅರಿವಾಗಿ ಕಟೀಲು ದೇವಿಯ ಕ್ಷಮೆ ಕೇಳಿದ ವ್ಯಕ್ತಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 15; ಕೋಟ್ಯಾಂತರ ಭಕ್ತರ ಆರಾಧ್ಯ ದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ. ದೇವರ ಬಗ್ಗೆ ಅವಹೇಳನವಾಗಿ ಸಂದೇಶ ಕಳಿಸಿದ್ದ ವ್ಯಕ್ತಿ, ತನ್ನ ತಪ್ಪಿನ ಅರಿವಾಗಿ ದೇವಿಯ ಸನ್ನಿಧಾನಕ್ಕೆ ಬಂದು ಕ್ಷಮೆಯಾಚಿಸಿದ ಘಟನೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಮಂಗಳೂರಿನ ಬಜ್ಪೆ ನಿವಾಸಿ ಅಲ್ಬರ್ಟ್ ಫರ್ನಾಂಡೀಸ್ ಕ್ಷಮೆ ಕೇಳಿದ ವ್ಯಕ್ತಿ. ಕಟೀಲು ದೇವತೆಗೆ ಅವಹೇಳನ ಮಾಡಿದ್ದ ಈತ ಕಳೆದ ಕೆಲ ದಿನಗಳ ಹಿಂದೆ ದಿನೇಶ್ ಎಂಬುವವರಿಗೆ ಅಶ್ಲೀಲವಾಗಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು.

ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ

ಮೂಲತಃ ಬಜ್ಪೆ ನಿವಾಸಿಯಾಗಿದ್ದರೂ, ಮುಂಬೈ ನಲ್ಲಿ ಕೆಲಸ ಮಾಡುತ್ತಿದ್ದ ಅಲ್ಬರ್ಟ್ ವಿರುದ್ಧ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಜ್ಪೆ ಠಾಣೆಯಲ್ಲಿ ದೂರನ್ನು ಕೂಡಾ ನೀಡಲಾಗಿತ್ತು.

ಮಂಗಳೂರು-ಕೇರಳ ನಡುವೆ ಒಂದು ವಾರ ಸರ್ಕಾರಿ ಬಸ್ ಸಂಚಾರವಿಲ್ಲಮಂಗಳೂರು-ಕೇರಳ ನಡುವೆ ಒಂದು ವಾರ ಸರ್ಕಾರಿ ಬಸ್ ಸಂಚಾರವಿಲ್ಲ

 Man Come To Kateel Temple And Asked Forgiveness For Insulting God

ಆದರೆ ಇದೀಗ ಅಲ್ಬರ್ಟ್ ಫರ್ನಾಂಡೀಸ್ ತನ್ನ ತಪ್ಪಿನ ಅರಿವಾಗಿ, ಕಟೀಲಿಗೆ ಬಂದು ದುರ್ಗಾಪರಮೇಶ್ವರಿಯ ಎದುರು ಕ್ಷಮೆಯಾಚಿಸಿದ್ದಾರೆ. ಕಣ್ಣೀರಿಟ್ಟು ದೇವಿಗೆ ತಪ್ಪು ಕಾಣಿಕೆ ಹಾಕಿದ್ದಾರೆ. ಅಲ್ಲದೇ ದೂರುದಾರರ ಬಳಿ ತನ್ನನ್ನು ಜೈಲಿಗೆ ಹಾಕಬೇಡಿ ಅಂತಾ ಗೋಗರೆದಿದ್ದಾರೆ.

ಮೈಕ್‌ ನಿರ್ಬಂಧ ದೇವಾಲಯ, ಚರ್ಚ್‌ಗೂ ಅನ್ವಯಿಸಬೇಕು; ಮುತಾಲಿಕ್ಮೈಕ್‌ ನಿರ್ಬಂಧ ದೇವಾಲಯ, ಚರ್ಚ್‌ಗೂ ಅನ್ವಯಿಸಬೇಕು; ಮುತಾಲಿಕ್

ಅಲ್ವರ್ಟ್ ವಯಸ್ಸಿಗೆ ಗೌರವ ನೀಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆಲ್ಬರ್ಟ್ ವಿರುದ್ದ ನೀಡಿದ ದೂರನ್ನು ಹಿಂಪಡೆದು ರಾಜಿ ಪಂಚಾಯಿತಿ ಮೂಲಕ ಪ್ರಕರಣಕ್ಕೆ ಇತೀಶ್ರೀ ಹಾಡಿದ್ದಾರೆ.‌‌

English summary
Christian man come to shri Durga Parameshwari Temple, Kateel Mangaluru and asked forgiveness for sending SMS and insulting god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X