ಅಂಗನವಾಡಿ ಕಾರ್ಯಕರ್ತೆ ಕೈ ಕಡಿದು ಆತ್ಮಹತ್ಯೆಗೆ ಶರಣಾದ

ಮಂಗಳೂರು, ಡಿಸೆಂಬರ್ 03 : ಅಂಗನವಾಡಿ ಕಾರ್ಯಕರ್ತೆಯನ್ನು ಕೊಲೆ ಮಾಡಲು ಯತ್ನಿಸಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಕಾರ್ಯಕರ್ತೆಯ ಎಡಗೈಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳ್ತಗಂಡಿ ತಾಲೂಕಿನ ಮುನಿಕಾರ್‌ ಮಲೆಕುಡಿಯ ಕಾಲೋನಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ ಗೌಡ (37) ಅವರ ಕೈ ಕತ್ತರಿಸಿ, ಉಮೇಶ್‌ ಗೌಡ (41) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಗನವಾಡಿಯಲ್ಲಿ ಮಕ್ಕಳ ಮುಂದೆಯೇ ಈ ಘಟನೆ ನಡೆದಿದೆ. [ಆಪ್ತ ಗೆಳತಿಯನ್ನು ಕೊಂದಿದ್ದ ಅನುಷಾ ಆತ್ಮಹತ್ಯೆಗೆ ಶರಣು]

anganwadi

ಗುರುವಾರ ಅಂಗನವಾಡಿಗೆ ನುಗ್ಗಿದ ಉಮೇಶ್ ಗೌಡ ಹೊನ್ನಮ್ಮ ಅವರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಆದರೆ, ಅವರು ತಪ್ಪಿಸಿಕೊಂಡಿದ್ದಾರೆ. ಆಗ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಹೊನ್ನಮ್ಮ ಅವರು ಎಡಗೈ ಅಡ್ಡ ಹಿಡಿದಿದ್ದು, ಕೈಗೆ ಗಂಭೀರವಾದ ಗಾಯಗಳಾಗಿವೆ. [ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯ ಬದಲಾವಣೆ]

ಹಲ್ಲೆಯಿಂದಾಗಿ ಹೊನ್ನಮ್ಮ ಅವರು ಗಾಯಗೊಂಡಾಗ ಗಾಬರಿಗೊಂಡ ಉಮೇಶ್ ಗೌಡ, ಅಂಗನವಾಡಿಯಲ್ಲಿಯೇ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಯಗೊಂಡ ಹೊನ್ನಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಲಾಟೆ ನಡೆದಿತ್ತು : ಕೆಲವು ತಿಂಗಳ ಹಿಂದೆ ಉಮೇಶ್ ಮತ್ತು ಹೊನ್ನಮ್ಮ ಮದುವೆ ನಿಶ್ಚಯವಾಗಿತ್ತು. ಉಮೇಶ್‌ ಗೌಡನಿಗೆ ಕುಡಿತದ ಚಟವಿದೆ ಎಂಬ ಕಾರಣಕ್ಕೆ ಹೊನ್ನಮ್ಮ ಮದುವೆಯಾಗಲು ನಿರಾಕರಿಸಿದ್ದರು. ಉಮೇಶ್ ನಡವಳಿಕೆ ಸರಿಇಲ್ಲ ಎಂದು ಹೇಳಿಕೆ ನೀಡಿದ್ದರು.

dharmasthala

ಇದರಿಂದ ಕೋಪಗೊಂಡ ಉಮೇಶ್ ಹಿಂದೆಯೂ ಹೊನ್ನಮ್ಮ ಮೇಲೆ ಹಲ್ಲೆ ನಡೆಸಿದ್ದ. ಗುರುವಾರ ಏಕಾಏಕಿ ಅಂಗನವಾಡಿಗೆ ನುಗ್ಗಿ ಹೊನ್ನಮ್ಮ ಕೈ ಕಡಿದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+