ಕರುವಿನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಯುವಕನಿಗೆ ಥಳಿತ
ಮಂಗಳೂರು, ಜುಲೈ 17: ಕರುವಿನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಟ್ಲದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಮೂವರ ಬಂಧನ
ಜಾರ್ಖಂಡ್ ಮೂಲದ ಮಹಮ್ಮದ್ ಅಜರ್ ಅನ್ಸಾರಿ ಎಂಬ ಯುವಕ ನಗರ ಹೊರವಲಯದ ಕುಂಜತ್ ಬೈಲಿನಲ್ಲಿನ ಬಯಲಿನಲ್ಲಿ ಮೇಯಲು ಕಟ್ಟಿದ್ದ ಕರುವಿನ ಜೊತೆ ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಕರುವಿನ ಮೇಲೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಈತ ಕಾರ್ಮಿಕನಾಗಿದ್ದು ಕೂಲಿ ಕೆಲಸಕ್ಕೆ ಮಂಗಳೂರಿನಲ್ಲಿ ಬಂದು ಇತರ ಉತ್ತರ ಭಾರತದ ಕಾರ್ಮಿಕರೊಂದಿಗೆ ಉಳಿದುಕೊಂಡಿದ್ದಾನೆ. ಕೃತ್ಯ ಎಸಗಿದ ಯುವಕನನ್ನು ಸಾರ್ವಜನಿಕರು ಥಳಿಸಿದ್ದಾರೆ.