ಕುದ್ರೋಳಿ ದೇವಾಲಯದ ವಿರುದ್ಧ ಇದೆಂಥ ಅಪಪ್ರಚಾರ

ಮಂಗಳೂರು, ಆ.5 : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ಸಂದೇಶವೊಂದು ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ದೇವಾಲಯದ ಆಡಳಿತ ಮಂಡಳಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದೆ.

ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಜೊತೆಗೂಡಿ ಮುಸ್ಲಿಂಮರ ಓಲೈಕೆಗಾಗಿ ದೇವಸ್ಥಾನದ ಆವರಣದಲ್ಲಿ ಮಾಂಸಹಾರಿ ಭೋಜನ ಬಡಿಸಿ ದೇವಸ್ಥಾನದ ಪಾವಿತ್ರ್ಯತೆ ಹಾಳುಗೆಡವಿದೆ, ದೇವಾಲಯದಲ್ಲಿ ಇಫ್ತಾರ್ ಕೂಟ ಆಯೋಜಿಸಿದೆ. [ಕುದ್ರೋಳಿ ದೇವಾಲಯದ ಅರ್ಚಕರಾಗಿ ವಿಧವೆಯರು]

ಮುಸ್ಲಿಂಮರ ಓಲೈಕೆಗಾಗಿ ಪುರಾಣ ಪ್ರಸಿದ್ಧ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಕೂಟದ ಹೆಸರಿನಲ್ಲಿ ಮಾಂಸಹಾರದ ಅಡುಗೆ ಮಾಡಿ ಬಡಿಸುವ ಅವಶ್ಯಕತೆ ಏನಿತ್ತು? ಎಂಬ ವಿಡಿಯೋ ತುಣುಕು ವಾಟ್ಸ್ ಆಪ್ ಮೂಲಕ ಹರಿದಾಡುತ್ತಿದ್ದು, ದೇವಾಲಯದ ಭಕ್ತರು ಸೇರಿದಂತೆ ಹಲವರ ಮೊಬೈಲ್ ಗಳಿಗೆ ರವಾನೆಯಾಗಿದೆ.

ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ಸಂದೇಶವಿದಾಗಿದ್ದು, ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ದೇವಾಲಯದ ಆಡಳಿತ ಮಂಡಳಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದೆ. ಪ್ರಕರಣ ವಿವರ ಇಲ್ಲಿದೆ.

ಹರಿದಾಡುತ್ತಿರುವ ಸಂದೇಶವೇನು?

ಹರಿದಾಡುತ್ತಿರುವ ಸಂದೇಶವೇನು?

ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಜೊತೆಗೂಡಿ ಮುಸ್ಲಿಂಮರ ಓಲೈಕೆಗಾಗಿ ದೇವಸ್ಥಾನದ ಆವರಣದಲ್ಲಿ ಮಾಂಸಹಾರ ಭೋಜನ ಬಡಿಸಿ ದೇವಸ್ಥಾನದ ಪಾವಿತ್ರ್ಯತೆ ಹಾಳುಗೆಡವಿದೆ. ದೇವಾಲಯದಲ್ಲಿ ಇಫ್ತಾರ್ ಕೂಟ ಆಯೋಜಿಸಿದೆ ಎಂಬ ಸಂದೇಶ ವಾಟ್ಸ್ ಅಪ್ ನಲ್ಲಿ ಹಡಿದಾಡುತ್ತಿದೆ.

ಸಸ್ಯಹಾರಿ ಊಟ ಬಡಿಸಲಾಗಿತ್ತು

ಸಸ್ಯಹಾರಿ ಊಟ ಬಡಿಸಲಾಗಿತ್ತು

2012ನೇ ಸಾಲಿನ ರಂಜಾನ್ ತಿಂಗಳಿನಲ್ಲಿ ಕುದ್ರೋಳಿ ದೇವಾಲಯದ ಆಡಳಿತ ಮಂಡಳಿ ಕೋಮು ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಕೂಟದಲ್ಲಿ ಸರ್ವ ಧರ್ಮದವರೂ ಭಾಗವಹಿಸಿದ್ದರು. ರಂಜಾನ್ ತಿಂಗಳ ಕೂಟವಾದರೂ ದೇವಸ್ಥಾನದ ಆವರಣವಾದ ಕಾರಣ ಸಸ್ಯಹಾರಿ ಉಪಹಾರವನ್ನು ಎಲ್ಲರೂ ಸ್ವೀಕರಿಸಿದ್ದರು.

ಎಲ್ಲಿ ಕೂಟ ಆಯೋಜನೆ

ಎಲ್ಲಿ ಕೂಟ ಆಯೋಜನೆ

ಇಫ್ತಾರ್ ಕೂಟದವನ್ನು ದೇವಸ್ಥಾನದ ಆವರಣದ ಪಕ್ಕದಲ್ಲಿರುವ ಗ್ಲಾಸ್‌ ಹೌಸ್ ಸಮೀಪ ಏರ್ಪಡಿಸಲಾಗಿತ್ತು. ಅಲ್ಲದೆ ದೇವಸ್ಥಾನದ ಆಡಳಿತ ಮಂಡಳಿ ಏರ್ಪಡಿಸಿದ್ದ ಸೌಹಾರ್ದ ಕೂಟ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ದೇವಸ್ಥಾನವಾದ ಕಾರಣ ಮಾಂಸಹಾರವನ್ನು ಬಳಕೆ ಮಾಡಿರಲಿಲ್ಲ.

ಆಡಳಿತ ಮಂಡಳಿ ಹೇಳುವುದೇನು?

ಆಡಳಿತ ಮಂಡಳಿ ಹೇಳುವುದೇನು?

ಘಟನೆಗೆ ಸಂಬಂಧಿಸಿದಂತೆ ಒನ್ ಇಂಡಿಯಾ ಜೊತೆ ಮಾತನಾಡಿರುವ ದೇವಾಲಯದ ಆಡಳಿತ ಮಂಡಳಿ ವ್ಯವಸ್ಥಾಪಕ ವಿನೀತ್ ಕುಮಾರ್ 2010, 11 ಮತ್ತು 12ರಲ್ಲಿ ದೇವಾಲಯದ ಆಡಳಿತ ಮಂಡಳಿ ಜಿಲ್ಲೆಯ ಜನತೆಯಲ್ಲಿ ಕೋಮು ಸೌಹಾರ್ದವನ್ನು ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಂಮರ ಪವಿತ್ರ ತಿಂಗಳಾದ ರಂಜಾನ್‌ ಸಂದರ್ಭದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು ಎಂದು ಹೇಳಿದ್ದಾರೆ.

ಎಲ್ಲಾ ಧರ್ಮೀಯರು ಭಾಗವಹಿಸಿದ್ದರು

ಎಲ್ಲಾ ಧರ್ಮೀಯರು ಭಾಗವಹಿಸಿದ್ದರು

ಈ ಕೂಟದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಿದ್ದರು. ದೇವಾಲಯದ ಆವರಣವಾದ ಕಾರಣ ಸಸ್ಯಹಾರಿ ಭೋಜನವನ್ನು ಏರ್ಪಡಿಸಲಾಗಿತ್ತು. ಆದರೆ, ಕೋಮು ಸಾಮರಸ್ಯ ಕದಡಲು ಕಿಡಿಗೇಡಿಗಳ ಗುಂಪೊಂದು ದೇವಸ್ಥಾನದ ವಿರುದ್ಧ ಅವಹೇಳನಕಾರಿಯಾದ ಸಂದೇಶವನ್ನು ಕಳುಹಿಸುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+