ಮಹೇಂದ್ರ ಕುಮಾರ್ ಸಂಘ ಪರಿವಾರದಿಂದ ದೂರ ಉಳಿಯಲು ಇದೇ ಕಾರಣವಂತೆ!
Recommended Video

ಮಂಗಳೂರು, ಡಿಸೆಂಬರ್ 03: ಮುಸ್ಲಿಂ ಹುಡುಗ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದರೆ ಸಂಘ ಪರಿವಾರಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ ಎಂದು ಬಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ (ಡಿ.02) ಆಯೋಜಿಸಲಾಗಿದ್ದ ಜನನುಡಿ ಸಮ್ಮೇಳನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆರ್‌ಎಸ್‌ಎಸ್, ವಿಎಚ್ ಪಿ, ಬಜರಂಗದಳ ಸೇರಿದಂತೆ ಇನ್ನಿತರ ಸಂಘಟನೆಗಳು ಹಿಂದೂ ಸಂಘಟನೆಗಳೇ ಹೊರತು ಅವು ಅಖಂಡ ಹಿಂದೂ ಸಮಾಜವಲ್ಲ. ಈ ಸಂಘಟನೆಗಳು ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುವುದಾದರೆ ಅದು ನಿಜವಾದ ದೇಶದ್ರೋಹ.
ಮುಸ್ಲಿಂ ಯುವಕರಿಂದ ಆಗುವ ತಪ್ಪನ್ನು ಎತ್ತಿ ಹಿಡಿದು ಅದರಿಂದ ಈ ಸಂಘಟನೆಗಳು ಲಾಭ ಪಡೆಯುತ್ತಿವೆ. ದಯವಿಟ್ಟು ಜಾಗರೂಕರಾಗಿ. ಸಂಘಕ್ಕೆ ಯಾವುದೇ ದೇಣಿಗೆ, ಭೂಮಿ ನೀಡಬೇಡಿ ಎಂದು ಅವರು ಕರೆ ನೀಡಿದರು.

ಸಂಘ ಪರಿವಾರದವರು ಸಾವಿನಲ್ಲಿಯೂ ಲಾಭ ಪಡೆಯುವ ಯೋಚನೆ ಮಾಡುತ್ತಾರೆ. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುಂದಿಡುತ್ತದೆ. ಸಂಘ ಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆಯಿಂದಾಗಿ ಸಂಘ ಸಿದ್ಧಾಂತದಿಂದ ನಾನು ದೂರ ಉಳಿಯಲು ಕಾರಣ ಎಂದು ಮಹೇಂದ್ರ ಕುಮಾರ್ ಸ್ಪಷ್ಟಪಡಿಸಿದರು.












Click it and Unblock the Notifications