ಉಡುಪಿಯಲ್ಲಿ ಮತ್ತೊಂದು ಲವ್ ಜಿಹಾದ್ ಬೆಳಕಿಗೆ!

ಮಂಗಳೂರು, ಮೇ 26: ಹಿಜಾಬ್ ವಿವಾದದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಉಡುಪಿಯಲ್ಲಿ ಈಗ ಲವ್ ಜಿಹಾದ್ ಸದ್ದು ಕೇಳಿ ಬರುತ್ತಿದೆ. ಕುಂದಾಪುರ ಸಮೀಪದ ಹುಡುಗಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಲವ್, ಸೆಕ್ಸ್ ಜಿಹಾದ್ ಕಾರಣ ಅಂತ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸುಂದರ ಬದುಕಿನ ಕನಸು ಕಂಡ ಸಾಮಾನ್ಯ ಕುಟುಂಬದ ಹುಡುಗಿ ಹೆಸರು ಶಿಲ್ಪಾ ದೇವಾಡಿಗ. ಆದರೆ ಬದುಕು ಆರಂಭವಾಗುವ ಮೊದಲೇ ಶಿಲ್ಪಾ ಸಾವಿಗೆ ಶರಣಾಗಿದ್ದಾಳೆ. ಸಾವಿನ ಹಿಂದೆ ಲವ್ ಜಿಹಾದ್ ಆರೋಪ ಬಲವಾಗಿ ಕೇಳಿ ಬಂದಿದೆ.

ಕುಂದಾಪುರ ಸಮೀಪದ ಉಪ್ಪಿನಕುದ್ರು ನಿವಾಸಿಯಾಗಿದ್ದ ಶಿಲ್ಪಾ ಮನೆಯ ಹತ್ತಿರದ ತಲ್ಲೂರುನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಕಳೆದ ನಾಲ್ಕು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ ಅಜೀಜ್ (32) ಎಂಬಾತ ಶಿಲ್ಪಾ ಸ್ನೇಹ ಸಂಪಾದಿಸಿದ್ದ. ಚಾಲಾಕಿಯಾದ್ದ ಅಜೀಜ್, ಶಿಲ್ಪಾಳ ಸ್ನೇಹ ಸಲುಗೆಯನ್ನೆ ಪ್ರೀತಿಯನ್ನಾಗಿಸಿ ಪುಸಲಾಯಿಸಿ, ನಿರಂತರವಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಿಸಿಕೊಳ್ಳುತ್ತಿದ್ದನಂತೆ.. ಆಗಾಗ ಕೋಟೇಶ್ವರದಲ್ಲಿ ತನ್ನ ಫ್ಲಾಟ್‌ಗೆ ಶಿಲ್ಪಾಳನ್ನು ಕರೆಯಿಸಿಕೊಂಡು ಮೋಜು ಮಾಡುತ್ತಿದ್ದ ಎನ್ನಲಾಗಿದೆ.

Love Jihad Allegation in Mangaluru as a Girl Commits Suicide

ಆತ್ಮಹತ್ಯೆಗೆ ಅಜೀಜ್ ನೇರ ಕಾರಣ

ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಆಗಾಗ ಆಕೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ, ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ, ಮಂಚಕ್ಕೆ ಬರುವಂತೆ ಒತ್ತಾಯಿಸುತ್ತಿರುತ್ತಾನೆ. ಕಳೆದ ಕೆಲವು ದಿನಗಳ ಹಿಂದೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಅಜೀಜ್ ಗೆ ಕೇಳಿದಾಗ ಮತಾಂತರವಾಗುವಂತೆ ಒತ್ತಾಯ ಮಾಡಿರುತ್ತಾನೆ. ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆ ಬೆತ್ತಲೆ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ವೈರಲ್ ಮಾಡುವ ಬೆದರಿಕೆ ಹಾಕುತ್ತಾನೆ. ಬೆನ್ನಲ್ಲೆ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ಅಜೀಜ್ ನೇರ ಕಾರಣ ಎನ್ನುವ ಆರೋಪವನ್ನು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುರೇಂದ್ರ ಮಾರ್ಕೋಡು ಮಾಡಿದ್ದಾರೆ.

Love Jihad Allegation in Mangaluru as a Girl Commits Suicide

ಲವ್ ಜಿಹಾದ್‌ಗೆ ಹಿಂದು ಸಂಘಟನೆಗಳ ಆಕ್ರೋಶ

ನಿರಂತರವಾಗಿ ಶಿಲ್ಪಾಳನ್ನು ದೈಹಿಕವಾಗಿ ಬಳಸಿಕೊಂಡಿದ್ದ ಅಜೀಜ್‌ಗೆ ಶಿಲ್ಪಾಳ ಪರಿಚಯಕ್ಕೂ ಮೊದಲೇ ಮದುವೆಯಾಗಿರುತ್ತದೆ. ಅಲ್ಲದೇ ಶಿಲ್ಪಾಳನ್ನು ಧರ್ಮ ಪರಿವರ್ತನೆ ಮಾಡಿಕೊಳ್ಳುವಂತೆ ತನ್ನ ಹೆಂಡತಿಯಿಂದಲೂ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಅಜೀಜ್‌ನ ಕಪಟ ಪ್ರೀತಿಯ, ಲವ್ ಸೆಕ್ಸ್ ಜಿಹಾದ್ ಕರಾಳ ಮುಖದ ಅರಿವಾದಾಗ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಇತ್ತ ಮನೆಯ ಮಗಳನ್ನು ಕಳೆದುಕೊಂಡ, ಮರ್ಯಾದೆಗೆ ಅಂಜಿ ದುಃಖದಲ್ಲಿರುವ ಮನೆಯವರು ಕಣ್ಣೀರು ಸುರಿಸುತ್ತಿದ್ದರೆ, ಅತ್ತ ಮನೆಯವರ ನೈತಿಕ ಬೆಂಬಲಕ್ಕೆ ನಿಂತ ಹಿಂದು ಸಂಘಟನೆ ಮುಖಂಡರು ಆತನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಿ ಲವ್ ಜಿಹಾದ್ ಗೆ ಬಲಿಯಾದ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಸ್ಥಳೀಯ ಹಿಂದೂ ಮುಖಂಡ ಶಂಕರ್ ಅಂಕದಕಟ್ಟೆ ಒತ್ತಾಯಿಸಿದ್ದಾರೆ..

Love Jihad Allegation in Mangaluru as a Girl Commits Suicide

ಯುವತಿ ಶಿಲ್ಪಾ ಆತ್ಮಹತ್ಯೆಯಿಂದಾಗಿ ಕುಂದಾಪುರ ಪರಿಸರದಲ್ಲಿ ಮತ್ತೆ ಧರ್ಮ ದಂಗಲ್ ಸಾಧ್ಯತೆ ದಟ್ಟವಾಗುತ್ತಿದೆ. ಹಿಜಾಬ್ ವಿವಾದ ನೆರಳಿನಿಂದ ಹೊರ ಬಂದಿದ್ದ ಕುಂದಾಪುರ ಪರಿಸರದಲ್ಲಿ ಮತ್ತೆ ಧರ್ಮದ ಕಾವು ಏರಿಸಲು ಅಜೀಜ್ ಕೃತ್ಯ ಮೂಲವಾಗುತ್ತಾ ಕಾದು ನೋಡಬೇಕಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+