ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ, ಮೈಕ್ ಅಲ್ಲ; ಮಸೂದ್

By Loudspeaker Row Muslim Central Committee Press Conference
|
Google Oneindia Kannada News

ಮಂಗಳೂರು ಮೇ,11: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಮಸೀದಿಗಳಲ್ಲಿ ಧ್ವನಿ ನಿಯಂತ್ರಣಕ್ಕೆ‌ ಮುಸ್ಲಿಂ ಸೆಂಟ್ರಲ್ ಕಮಿಟಿ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಸೂಚನೆ ಬಳಿಕ ಈ ಕುರಿತು ಸೂಚನೆ ನೀಡಿದೆ.

ಬುಧವಾರ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಹಮ್ಮದ್ ಮಸೂದ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಲೌಡ್ ಸ್ಫೀಕರ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಆದೇಶಕ್ಕೆ ದಕ್ಷಿಣ ಕನ್ನಡ-ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಸಮ್ಮತಿ ಸೂಚಿಸಿದೆ.

"ಎರಡೂ ಜಿಲ್ಲೆಗಳ ಮಸೀದಿಗಳಿಗೆ ಈಗಾಗಲೇ ಕಠಿಣವಾಗಿ ಸೂಚನೆ ನೀಡಲಾಗಿದೆ. ಮಸೀದಿಗಳು ಕೋರ್ಟ್ ಮತ್ತು ಸರ್ಕಾರದ ಆದೇಶವನ್ನು ಕಡ್ಡಾಯ ವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಪೊಲೀಸರು ತೆಗೆದುಕೊಳ್ಳುವ ಕ್ರಮಕ್ಕೆ ಗುರಿಯಾಗಬೇಕು" ಎಂದರು.

Loudspeaker Row Muslim Central Committee Press Conference

"ಆಜಾನ್ ವಿರೋಧಿಸಿ ಅದನ್ನು ಬಂದ್ ಮಾಡಲು ಬಂದವರನ್ನು ದನದ ಹಾಲು‌ ನೀಡಿ ಸ್ವಾಗತಿಸಲು ತಿಳಿಸಿದ್ದೇವೆ. ಸರಕಾರದ ಸುತ್ತೋಲೆ ಬರುವ ಮೊದಲೇ ಈಗಿನಿಂದಲೇ ನಗರದ ಕುದ್ರೋಳಿ ಜಾಮಿಯಾ ಮಸೀದಿಯ ಮೈಕ್ ಬಂದ್ ಮಾಡಲಾಗಿದೆ. ಐದು ಹೊತ್ತಿನ ಆಜಾನ್‌ಗೂ ಧ್ವನಿವರ್ಧಕವನ್ನು ಬಂದ್ ಮಾಡಿದ್ದೇವೆ" ಎಂದು ಮಾಹಿತಿ ನೀಡಿದರು.
"ಇಂದಿನ ಪ್ರಾತಃಕಾಲದ ಆಜಾನ್‌ಗೆ ಮೈಕ್ ಸ್ಥಗಿತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ ಹೊರತು ಮೈಕ್ ಅಲ್ಲ" ಎಂದು ಸ್ಪಷ್ಟಪಡಿಸಿದರು.

ಅದು ರಾವಣಸೇನೆ; "ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಸ್ತಾನದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ. ಅವರನ್ನು ಅಪಘಾನಿಸ್ತಾನ, ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಹೇಳಿದ್ದರು. ಆದರೆ ಆ ಕೋಮುವಾದಿ, ಭಯೋತ್ಪಾದಕ ಪ್ರಮೋದ್ ಮುತಾಲಿಕ್ ಅವರನ್ನೇ ಅಲ್ಲಿಗೆ ಒದ್ದು ಓಡಿಸಬೇಕು. ರಾಮಸೇನೆ ಹನುಮಂತನ ಸೇನೆ. ಪ್ರಮೋದ್ ಮುತಾಲಿಕ್ ನದ್ದು, ರಾಮಸೇನೆ ಆಗಲು ಸಾಧ್ಯವಿಲ್ಲ" ಎಂದರು.

Loudspeaker Row Muslim Central Committee Press Conference

"ಉಡುಪಿಗೆ ಪ್ರಮೋದ್ ಮುತಾಲಿಕ್ ಬರದಂತೆ ಬ್ಯಾನ್ ಮಾಡಲಾಯಿತು. ಆದರೆ ಈ ಭಯೋತ್ಪಾದಕ, ಕ್ರಿಮಿನಲ್, ಕೋಮುವಾದಿ ಬರುವಾಗ ಮಂಗಳೂರು ಪೊಲೀಸ್ ಕಮಿಷನರ್ ಕುರ್ಚಿ ಬಿಟ್ಟು ಎದ್ದು ಎದ್ದು ನಿಂತು ಮಾತನಾಡುತ್ತಾರೆ‌. ಅದನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದರು.

"ನಾವು ನಾಲ್ಕು ಸಲ ಕಮೀಷನರ್ ಕಛೇರಿಗೆ ಹೋದಾಗ ಎರಡು ಸಲ ನಮಗೆ ಸಮಯವೇ ನೀಡಿಲ್ಲ. ಮತ್ತೆರಡು ಸಲ ತುಂಬಾ ಹೊತ್ತು ಕಾಯಿಸಿ ಮಾತನಾಡಿದ್ದಾರೆ. ಕಮೀಷನರ್ ಈ ವರ್ತನೆ ಸರಿಯಲ್ಲ" ಎಂದು ಮಸೂದ್ ಆಕ್ರೋಶ ವ್ಯಕ್ತಪಡಿಸಿದರು.

Recommended Video

Pollard ಹೊಡೆತ ತಿಂದ ಅಂಪೈರ್ ಸುಸ್ತ್,ರೋಹಿತ್ ಶರ್ಮಾ‌ ಶಾಕ್!! | Oneindia Kannada

"ಈಗ ಅಜಾನ್ ಇಲ್ಲ, ಸುಪ್ರಭಾತ ವೂ ಇಲ್ಲ. ಮುತಾಲಿಕ್ ಈ ದೇಶದಲ್ಲಿ ಇರೋಕೆ ಲಾಯಕ್ ಇಲ್ಲ. ಅವರನ್ನು ಓಡಿಸಬೇಕು. ಹನುಮಂತ ಇರುವ ಸೇನೆ ರಾಮ ಸೇನೆ. ಆ‌ ರಾಮ ಸೇನೆ ಮುತಾಲಿಕ್‌ನದ್ದು ಆಗಲು ಸಾಧ್ಯವಿಲ್ಲ" ಎಂದರು.

English summary
Loudspeakers row in Karnataka. Muslim central committee press conference in Mangaluru. commitee issuesd instructions to mouques on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X