ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರೇಂದ್ರ ಹೆಗ್ಗಡೆ ಧರ್ಮದ ಸಾಕಾರ ಮೂರ್ತಿ: ಸ್ಮೃತಿ ಇರಾನಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 23: ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಡೆಯುತ್ತಿದ್ದು, ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸ್ವಯಂ ಮಹಾದೇವನಂತಿದ್ದಾರೆ ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸೃತಿ ಇರಾನಿ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೈಭವದ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸ್ಮೃತಿ ಇರಾನಿಗೂ ಭಾಷಣಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮಾತನಾಡುವ ವೇಳೆ ಸಚಿವೆ ಸ್ಮೃತಿ ಇರಾನಿ ಪರಿವಾರದಲ್ಲೇ ಸರ್ವಧರ್ಮ ಸಮನ್ವಯತೆಯಿದೆ. ಇವರ ತಂದೆ ಪಂಜಾಬಿ ಮೂಲ, ತಾಯಿ ಬೆಂಗಾಲಿ ಮೂಲ, ಪತಿ ಪಾರ್ಸಿ ಮೂಲದವರು ಭಾಷಣದಲ್ಲಿ ಹೇಳಿದ್ದರು.

Mangaluru blast case: ಆಟೋ ಚಾಲಕನ ಕುಟುಂಬಸ್ಥರಿಗೆ 50 ಸಾವಿರ ರೂ ನೀಡಿದ ಆರಗ ಜ್ಞಾನೇಂದ್ರMangaluru blast case: ಆಟೋ ಚಾಲಕನ ಕುಟುಂಬಸ್ಥರಿಗೆ 50 ಸಾವಿರ ರೂ ನೀಡಿದ ಆರಗ ಜ್ಞಾನೇಂದ್ರ

ಇದನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಹೆಗ್ಗಡೆ ಅವರು ಹೇಳಿದಂತೆ ನಾನು ಪಂಜಾಬಿ, ಬೆಂಗಾಲಿ, ಪಾರ್ಸಿ ಅರಿತವಳು. ಈಗ ಕನ್ನಡತಿಯಾಗುವೆ ಎಂದು ಹೇಳುತ್ತಾ, ಎಲ್ಲರಿಗೂ ನಮಸ್ಕಾರ' ಎಂದು ಕನ್ನಡದಲ್ಲೇ ಹೇಳಿದರು. ಕೇಂದ್ರ ಸಂಪುಟದಲ್ಲೂ ನಾನು ಕಿರಿಯಳು, ಇಲ್ಲಿ ವೇದಿಕೆಯಲ್ಲೂ ಎಲ್ಲರಿಗಿಂತ ಕಿರಿಯಳು. ಯುದ್ಧಭೂಮಿ (ಗುಜರಾತ್ ) ಬಿಟ್ಟು ಪೂಜಾ ಭೂಮಿಗೆ ಬಂದಿದ್ದೇನೆ. ಯಾಕೆಂದರೆ ಇಲ್ಲಿ ಮಹಾದೇವ ಇದ್ದು, ಅವರ ಆಶೀರ್ವಾದವೇ ಎಲ್ಲದಕ್ಕೂ ಶ್ರೀರಕ್ಷೆ ಎಂದು ವೀರೇಂದ್ರ ಹೆಗ್ಗಡೆಯವರನ್ನು ಸ್ಮೃತಿ ಇರಾನಿ ಹಾಡಿ ಹೊಗಳಿದರು.

Lakshadeepotsava: Union Minister Smriti Irani visits Dharmasthala Temple

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿದ್ದು ಇಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದೆ. ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮದ ಸಾಕಾರ ಮೂರ್ತಿಯಾಗಿದ್ದು ಅವರ ಶಿಸ್ತು, ಸಮಯಪಟ್ಟೆ, ವಿನಯ, ಸೌಜನ್ಯ ಸರಳ ಹಾಗೂ ಉದಾತ್ತ ಚಿಂತನೆಗಳು ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಇರಾನಿ ಬಣ್ಣಿಸಿದ್ದಾರೆ.

ಜನತಾ ಸೇವೆಯೇ ಜನಾರ್ದನ ಸೇವೆ ಎಂದು ನಿರಂತರ ಲೋಕಕಲ್ಯಾಣದ ಸೇವಾ ಕಾರ್ಯಗಳಲ್ಲಿ ನಿರತರಾದ ಹೆಗ್ಗಡೆಯವರ ಜೀವನವೇ ಧರ್ಮದ ಪ್ರತಿರೂಪವಾಗಿದೆ. ಜನಹಿತವೇ ರಾಷ್ಟ್ರದ ಹಿತ' ಎಂಬ ನಿಸ್ವಾರ್ಥ ಭಾವನೆಯಿಂದ ಅವರು ಸೇವೆ ಮಾಡುತ್ತಿದ್ದಾರೆ. ದೇವರನ್ನು ನಾವು ಯಾರೂ ನೋಡದಿದ್ದರೂ ಸಹ ದೇವರ ಭಯ ಮತ್ತು ಭಕ್ತಿಯಿಂದ ನಾವು ಧರ್ಮದ ಮರ್ಮವನ್ನರಿತು ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆ ಸಿಗುತ್ತದೆ. ಲಕ್ಷ್ಮಿ ಸದಾ ಚಂಚಲೆಯಾಗಿದ್ದು ನಾವು ಧನದಾಹ ಹಾಗೂ ಲೌಕಿಕ ಸುಖ-ಭೋಗಕ್ಕೆ ಬಲಿಯಾಗಬಾರದು. ಉತ್ತಮ ಸಂಸ್ಕಾರವೇ ನೈಜ ಧರ್ಮವಾಗಿದೆ. ಸರ್ವಧರ್ಮಗಳ ಸಾರವೂ ಒಂದೇ ಆಗಿದ್ದು ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ನೀಡಿದ ಕೊಡುಗೆಯನ್ನು ಸ್ಮೃತಿ ಇರಾನಿ ಶ್ಲಾಘಿಸಿ ಅಭಿನಂದಿಸಿದರು.

English summary
Union Minister for Women and Child Development Smriti Irani on Tuesday visit to the Sri Manjunathaswamy Temple in Dharmasthala to inaugurate the 90th all-religious meet on the occasion of Lakshadeepotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X