• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಕ್ಕೆ ಸುಬ್ರಮಣ್ಯ ದೇವಾಲಯದ ದರ್ಶನದ ಸಮಯ ಬದಲು

|

ದಕ್ಷಿಣ ಕನ್ನಡ, ಜೂನ್ 18 : ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದರ್ಶನ ಪಡೆಯುವ ಸಮಯ ಬದಲಾವಣೆ ಮಾಡಲಾಗಿದೆ. ಜೂನ್ 21ರ ಭಾನುವಾರ ಸೂರ್ಯ ಗ್ರಹಣ ಇರುವ ಕಾರಣ ದರ್ಶನದ ಸಮಯ ಬದಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

   ನಮ್ಮ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಚೀನಾಕ್ಕೆ ಎಚ್ಚರಿಕೆ ಕೊಟ್ಟ ಮೋದಿ | Narendra Modi | Oneindia Kannada

   ಸೂರ್ಯ ಗ್ರಹಣದ ಪ್ರಯುಕ್ತ ದೇವಾಲಯದಲ್ಲಿ ದೇವರ ನಿತ್ಯ ಪೂಜಾ ಸಮಯದಲ್ಲಿಯೂ ಬದಲಾವಣೆ ಮಂಆಡಲಾಗಿದೆ. ಭಕ್ತರು ಭಾನುವಾರ ಬೆಳಗ್ಗೆ 6.30ರಿಂದ 10 ಗಂಟೆಯ ತನಕ ದೇವರ ದರ್ಶನ ಪಡೆಯಬಹುದಾಗಿದೆ.

   ಮೂರು ದಿನಗಳ ಕಾಲ ಭಕ್ತರಿಗಿಲ್ಲ ಮಲೆ ಮಹದೇವನ ದರ್ಶನ

   ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರ ತನಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಮಧ್ಯಾಹ್ನ 3.30ರಿಂದ ಸಂಜೆ 5.30ರ ತನಕ ಭಕ್ತಾದಿಗಳು ದರ್ಶನವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

   ಶೃಂಗೇರಿ ದೇವಾಲಯದ ದರ್ಶನ ಸಮಯ ಬದಲಾವಣೆ

   ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲಿಯೂ ವಾರಂತ್ಯ ಮತ್ತು ಸರ್ಕಾರಿ ರಜೆ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಭಾನುವಾರವೇ ಸೂರ್ಯ ಗ್ರಹಣ ಬಂದಿದ್ದು ದರ್ಶನದ ಸಮಯ ಪರಿಷ್ಕರಣೆಯಾಗಿದೆ.

   ಚಂದ್ರಗ್ರಹಣ ಎಫೆಕ್ಟ್; ಎಮ್ಮೆಗಳಿಗೂ ಹಿಡಿದ ಗ್ರಹಣ!

   2020ನೇ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 21ರ ಭಾನುವಾರ ನಡೆಯಲಿದೆ. ಪ್ರಪಂಚದಾದ್ಯಂತ ಜನರು ಗ್ರಹಣ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಭಾನುವಾರ ಬೆಳಗ್ಗೆ 10.31ಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು 12.18ಕ್ಕೆ ಪೂರ್ಣ ಪ್ರಮಾಣದಲ್ಲಿ ಕಾಣಲಿದೆ. ಗೋಚರವಾಗಲಿದೆ.

   English summary
   Due to solar eclipse on June 21, 2020 darshan timings in Kukke Subramanya temple changed. Thousands of devotees will come to temple on Sunday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X