ಮಂಗಳೂರಿನಲ್ಲಿ ಕೋವಿಡ್ ನಿಯಮ ಮೀರಿ ರಾಜಕೀಯ ಸಭೆ ನಡೆಸಿದ ಡಿಕೆಶಿ

ಮಂಗಳೂರು, ಜುಲೈ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರು ಪ್ರವಾಸದ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ, ರಾಜಕೀಯ ಸಭೆ ಮಾಡಿದ್ದಾರೆ.

ಮಂಗಳೂರಿನ ಬೋಳೂರು ಮೊಗವೀರ ಸಭಾಭವನದಲ್ಲಿ ಸಭೆ ನಡೆದಿದ್ದು, ಸುಮಾರು 200ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ರಾಜಕೀಯ ಸಭೆ ಮಾಡಲಾಗಿದೆ.

Covid Guidelines Violation: KPCC President DK Shivakumar held A Political Meeting In Mangaluru

ಮೀನುಗಾರರ ಕುಂದುಕೊರತೆಗಳನ್ನು ಆಲಿಸುವ ನೆಪದಲ್ಲಿ ನಡೆದ ಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ. ಸಾಮಾಜಿಕ ಅಂತರ ಮರೆತು ಸಭೆಯಲ್ಲಿ ಮೀನುಗಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೀನುಗಾರರ ಕುಂದು ಕೊರತೆ ಆಲಿಸಿದ್ದಾರೆ.

Covid Guidelines Violation: KPCC President DK Shivakumar held A Political Meeting In Mangaluru

ಜಿಲ್ಲೆಯಲ್ಲಿ ರಾಜಕೀಯ ಸಭೆಗಳು ನಡೆಸಲು ನಿಷೇಧವಿದ್ದರೂ, ರಾಜಕೀಯ ಸಭೆ ನಡೆಸಿದ್ದು, ಅನ್‌ಲಾಕ್ ಆಗುತ್ತಿದ್ದಂತೆ ಮಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿದೆ. ಡಿ.ಕೆ ಶಿವಕುಮಾರ್ ರಾಜಕೀಯ ಸಭೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೀನುಗಾರರ ಮತಕ್ಕಾಗಿ ಈಗಲೇ ಡಿ.ಕೆ. ಶಿವಕುಮಾರ್ ಗಾಳ ಹಾಕಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಟೀಕೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+