ಕೊಂಕಣ್ ರೈಲ್ವೆ ರೂಟ್ ನಲ್ಲಿ ಮತ್ತೆ ರೈಲು ಸಂಚಾರ ಆರಂಭ
ಮಂಗಳೂರು, ಸಪ್ಟೆಂಬರ್ 01: ಮಂಗಳೂರು-ಮುಂಬಯಿ ಸಂಪರ್ಕಿಸುವ ಕೊಂಕಣ್ ರೇಲ್ವೆ ರೂಟ್ ನಲ್ಲಿ ಮತ್ತೇ ರೈಲು ಸಂಚಾರ ಆರಂಭಗೊಂಡಿದೆ.
ಮಂಗಳೂರು ಹೊರವಲಯದ ಪಡೀಲ್- ಕುಲಶೇಖರ ನಡುವೆ ರೈಲು ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಗೊಳಿಸಲಾಗಿದ್ದು ಪಡೀಲ್- ಕುಲಶೇಖರ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಪರ್ಯಾಯ ಹಳಿಯ ಮೇಲೆ ರೈಲು ಓಡಾಟ್ ಆರಂಭಗೊಂಡಿದೆ.
ಭಾರೀ ಮಳೆಯ ಪರಿಣಾಮ ಪಡೀಲ್ - ಕುಲಶೇಖರ ನಡುವೆ ಗುಡ್ಡ ಕುಸಿದು ಬಿದ್ದ ಪರಿಣಾಮ ಕಳೆದ 8 ದಿನಗಳಿಂದ ಈ ರೂಟ್ ನಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿತ್ತು.
ಗುಡ್ಡ ಕುಸಿತ ಘಟನೆ ಮುಂದುವರೆದ ಪರಿಣಾಮ ಪಡೀಲ್ - ಕುಲಶೇಖರ ನಡುವೆ ಪ್ರಯಾಣಕ್ಕೆ ಹೊಸ ಪರ್ಯಾಯ ಹಳಿ ಅಳವಡಿಸುವ ಕಾಮಗಾರಿ ನಡೆದಿತ್ತು. ಈ ಹಳಿಗಳ ಮೇಲೆ ರೈಲು ಓಡಾಟಕ್ಕೆ ಅರ್ಹವಾಗಿರುವುದನ್ನು ರೈಲ್ವೆ ಇಲಾಖೆ ತಂತ್ರಜ್ಞರು ಖಾತರಿಪಡಿಸಿದ್ದು, ಹೊಸ ಮಾರ್ಗದಲ್ಲಿ ರೈಲು ಸೇವೆ ಪುನರಾರಂಭಗೊಂಡಿದೆ.ಇದರಿಂದ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಕೇರಳ ಭಾಗದ ರೈಲುಗಳಿಗೆ ಎಂಟು ದಿನಗಳ ಬಳಿಕ ಕೊಂಕಣ ಮಾರ್ಗಕ್ಕೆ ಸಂಪರ್ಕ ಸಾಧ್ಯವಾಗಿದೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ 400 ಮೀಟರ್ ಹೊಸ ಹಳಿ ಪ್ರಯಾಣಕ್ಕೆ ಸಿದ್ಧವಾಗಿರುವ ಬಗ್ಗೆ ದಕ್ಷಿಣ ರೈಲ್ವೆ ಅರ್ಹತಾ ಪ್ರಮಾಣಪತ್ರ ಒದಗಿಸಿದೆ. ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್‌ನಿಂದ ಪಣಂಬೂರಿಗೆ ರೈಲ್ವೆ ಸರಕು ಬೋಗಿಗಳನ್ನುನಿನ್ನೆ ಓಡಿಸಲಾಗಿತ್ತು.
ಬಳಿಕ ಇದೇ ಮಾರ್ಗದಲ್ಲಿ ಸರಕು ತುಂಬಿದ ಬೋಗಿಗಳಿರುವ ಗೂಡ್ಸ್ ರೈಲು ವಾಪಸ್ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಂದಿದೆ. ಬಳಿಕ ಪ್ರಯಾಣಿಕರ ರೈಲು ಓಡಾಟಕ್ಕೆ ಹಳಿ ಸಜ್ಜುಗೊಂಡಿರುವುದನ್ನು ಹಿರಿಯ ಅಧಿಕಾರಿಗಳು ಖಚಿತಪಡಿಸಿದರು.
-
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ? -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications