ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಂದ್ರ ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ 'ಸ್ವಾಮಿ'

|
Google Oneindia Kannada News

ಮಂಗಳೂರು, ಆಗಸ್ಟ್ 28: ಕಾಶೀ ಮಠದಿಂದ ಉಚ್ಚಾಟಿತರಾಗಿರುವ, 'ರಾಘವೇಂದ್ರ ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಸ್ವಾಮಿ' ಎಂದು ನ್ಯಾಯಾಲಯ ಹೇಳಿದೆ.

ಕಾಶೀ ಮಠಾಧೀಶರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಕೊಚ್ಚಿಯ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಜಿಎಸ್‍ಬಿ ಮುಖಂಡರ ಹತ್ಯೆಗೆ ಸಂಚು ಪರಿತ್ಯಕ್ತ ಸ್ವಾಮೀಜಿಗೆ ನೊಟೀಸ್ ಜಾರಿಜಿಎಸ್‍ಬಿ ಮುಖಂಡರ ಹತ್ಯೆಗೆ ಸಂಚು ಪರಿತ್ಯಕ್ತ ಸ್ವಾಮೀಜಿಗೆ ನೊಟೀಸ್ ಜಾರಿ

ಹಾಲೀ ಪೀಠಾಧಿಪತಿಗಳಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀ ಮಠಾಧೀಶರಾಗಿ ಯಾವುದೇ ಗೌರವದೊಂದಿಗೆ ಕೊಚ್ಚಿನ್ ತಿರುಮಲ ದೇವಳಕ್ಕೆ ಭೇಟಿ ನೀಡದಂತೆ ಅವರನ್ನು ತಡೆಯಬೇಕೆಂದು ಆತ್ಮಾನಂದ ರಾವ್ ಮತ್ತು ಕಾರ್ತಿಕ್ ಭಟ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Kochi Munsiff Court Dismiss The Application Seeking Interim Injection Filed Agaisnt Kashi Seer

" ಈ ಅರ್ಜಿ ಕೇವಲ ಸ್ವಾಮೀಜಿಯವರು ದೇವಾಲಯ ಭೇಟಿಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದ ಹೂಡಲಾಗಿರುವುದು ಮತ್ತು ಇಂತಹ ಅಸಂವಿಧಾನಿಕ ಕಾರ್ಯಗಳಿಗೆ ಕಾನೂನು ಮಾನ್ಯತೆ ನೀಡುವುದಿಲ್ಲ " ಎಂದು ನ್ಯಾಯಾಲಯ ಹೇಳಿದೆ.

ಕೋರ್ಟ್, ನೀಡಿದ ವಿಸ್ಕೃತವಾದ ಆದೇಶದಲ್ಲಿ " ರಾಘವೇಂದ್ರ ತೀರ್ಥ ಪ್ರಾಕ್ಸಿಗಳಾಗಿ ದಾವೆ ಹೂಡಿರುವ ಎಲ್ಲಾ ಲಕ್ಷಣಗಳು ಹೊಂದಿದೆ ಅಲ್ಲದೇ ಕಾಶೀ ಮಠದಿಂದ ಉಚ್ಚಾಟಿತರಾದ ತನ್ನ ಕಾನೂನು ಹೋರಾಟಕ್ಕೆ ಇದರಿಂದ ಬೆಂಬಲ ಸಿಗಬಹುದೆಂದು ತನ್ನ ಕುಂದುಕೊರತೆಗಳನ್ನು ಪರಿಹರಿಸಲು ಅವಲಂಬಿತನಾಗಿ ಇಂತಹ ಒಂದು ದಾವೆಯನ್ನು ಹೂಡಿರುವುದು ನ್ಯಾಯಾಲಯ ಗಮನಿಸಿದೆ" ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಜಿಲ್ಲಾಧಿಕಾರಿಗಳಿಗೆ ಮಂಗಳೂರಿನ ನಾಗರಿಕರ ಮಹತ್ವದ ಮನವಿಜಿಲ್ಲಾಧಿಕಾರಿಗಳಿಗೆ ಮಂಗಳೂರಿನ ನಾಗರಿಕರ ಮಹತ್ವದ ಮನವಿ

ಇದಲ್ಲದೇ ಕೊಚ್ಚಿ ಹೈಕೋರ್ಟ್ "ರಾಘವೇಂದ್ರ ಅಲಿಯಾಸ್ ಶಿವಾನಂದ ಪೈರವರು ಕಾನೂನಿನ ಸರಿಯಾದ ಪ್ರಕ್ರಿಯೆಯಿಂದ ತಪ್ಪಿಸಿಕೊಂಡವರು" ಎಂದು ಘೋಷಿಸಿದೆ ಮತ್ತು ಅವರನ್ನು 'ತಪ್ಪಿಸಿಕೊಳ್ಳುವ ಸ್ವಾಮಿ' ಎಂದು ಬಣ್ಣಿಸಿದೆ.

English summary
Kochi Munsiff Court Dismiss The Application Seeking Interim Injection Filed Atmananda Rao and Kartik Bhat against Cochin Thirumala Devaswom and Kashi Mutt Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X