• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಜೇಶ್ವರ : ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ

|
Google Oneindia Kannada News

ಕಾಸರಗೋಡು, ಆ.4: ಮಹಿಳೆ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಮಂಜೇಶ್ವರದ ಬಾಯರ್ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದೇವಕಿ(55), ಸದಾಶಿವ (54), ವಿಟ್ಲ(52) ಹಾಗೂ ಬಾಬು (50) ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧಿಸಿದಂತೆ ಈ ನಾಲ್ವರ ಸಂಬಂಧಿ ಉದಯ್ ಎಂಬಾಂತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಜಾಗಿಂಗ್ ಮಾಡುತ್ತಿದ್ದ ಭಾರತ ಮೂಲದ ಸಂಶೋಧಕಿ ಹತ್ಯೆಅಮೆರಿಕದಲ್ಲಿ ಜಾಗಿಂಗ್ ಮಾಡುತ್ತಿದ್ದ ಭಾರತ ಮೂಲದ ಸಂಶೋಧಕಿ ಹತ್ಯೆ

ಸೋಮವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಮನೆಯಲ್ಲಿ ಉದಯ್ ಅವರ ತಾಯಿ ಲಕ್ಷ್ಮಿ ಸೇರಿದಂತೆ ಮೃತಪಟ್ಟ ನಾಲ್ವರು ಟಿವಿ ನೋಡುತ್ತಾ ಕುಳಿತ್ತಿದ್ದರು. ಮಚ್ಚು ಹಿಡಿದುಕೊಂಡು ಮನೆಗೆ ಬಂದ ಉದಯ್ ಎಲ್ಲರನ್ನು ಕೊಚ್ಚಿ ಹಾಕಿದ್ದಾನೆ. ಲಕ್ಷ್ಮಿ ತಪ್ಪಿಸಿಕೊಂಡಿದ್ದಾರೆ.

ಉದಯ್ ಈ ರೀತಿ ಎಲ್ಲರನ್ನು ಕೊಲ್ಲಲು ಆಸ್ತಿ ಪಾಲು ವಿವಾದವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಉದಯ್, ಇತ್ತೀಚೆಗೆ ಸಾಮಾನ್ಯರಂತೆ ವರ್ತಿಸುತ್ತಿದ್ದ. ಘಟನೆ ನಂತರ ಮಚ್ಚಿನೊಂದಿಗೆ ಹೊರಗೆ ಹೋಗುತ್ತಿದ್ದ ಉದಯ್ ನನ್ನು ಗುರುತಿಸಿದ ಸ್ಥಳೀಯರು ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

English summary
Four members of a family including a woman were hacked to death Bayar village, Manjeshwar, Kasargod.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X