ದಕ್ಷಿಣ ಕನ್ನಡ : ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ

ಮಂಗಳೂರು, ಮೇ 10 : ಮತದಾನದ ದಿನ ಜನರಿಗೆ ಅನುಕೂಲವಾಗಲು ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಸ್ಸುಗಳು ಸಂಚಾರ ನಡೆಸಲಿವೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದಾರೆ. 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಸಂಚಾರ ನಡೆಸಲಿವೆ. ಮತದಾನ ಮಾಡಲು ಆಗಮಿಸುವ ಜನರು ಉಚಿತವಾಗಿ ಇವುಗಳಲ್ಲಿ ಪ್ರಯಾಣಿಸಬಹುದಾಗಿದೆ.

'ಎಲೆಕ್ಷನ್ ಸ್ಪೆಷಲ್' ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಮೇ 12ರ ಮತದಾನದ ದಿನ ಬೆಳಗ್ಗೆಯಿಂದ ಸಂಜೆ ತನಕ ಈ ಬಸ್ಸುಗಳು ಮೂರು ಟ್ರಿಪ್‌ಗಳಲ್ಲಿ ಸಂಚಾರವನ್ನು ನಡೆಸಲಿವೆ.

 Karnataka elections : KSRTC to operate 160 additional buses for rural voters

ದಕ್ಷಿಣದಲ್ಲಿ ಕನ್ನಡದಲ್ಲಿ 517 ಬೂತ್‌ಗಳಯ ಅತಿ ಸೂಕ್ಷ್ಮವಾಗಿವೆ. ಇವುಗಳಲ್ಲಿ 97ರಲ್ಲಿ ವೆಬ್ ಕ್ಯಾಮರಾಗಳನ್ನು ಆಳವಡಿಸಲಾಗಿದೆ. 221 ಬೂತ್‌ಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ವೋಟರ್ ಸ್ಲಿಪ್ : ಜಿಲ್ಲಾಡಳಿತ ಮತದಾನ ಕೇಂದ್ರದ ಹೊರಗೆ ವೋಟರ್ ಸ್ಲಿಪ್‌ಗಳನ್ನು ನೀಡುವ ವ್ಯವಸ್ಥೆ ಮಾಡಿದೆ. ಅಗತ್ಯವಿರುವವರು ವೋಟರ್ ಸ್ಲಿಪ್ ಪಡೆಯಬಹುದಾಗಿದೆ. ಆದರೆ, ಮತದಾನ ಮಾಡಲು ವೋಟರ್ ಸ್ಲಿಪ್ ಕಡ್ಡಾಯವಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಅವರು ವೋಟರ್ ಐಡಿ ತೋರಿಸಿ ಮತದಾನ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+