' ಕಲ್ಲಡ್ಕ ಭಟ್ ವಿವೇಕಾನಂದರಿಗೆ ಹೋಲಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ'

ಮಂಗಳೂರು, ಜೂನ್ 21 : ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್ ಮುಖಂಡ, ಧಾರ್ಮಿಕ ಮುಖಂಡ ಆಗಲಾರರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪ್ರಭಾಕರ ಭಟ್ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಲ್ಲಡ್ಕ ಭಟ್ ಧಾರ್ಮಿಕ ಮುಖಂಡ ಆಗಲಾರರು, ತನ್ನನ್ನು ವಿವೇಕಾನಂದರಿಗೆ ಹೋಲಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ, ಅವರ ದ್ವೇಷ ಕಾರುವ ಭಾಷಣಗಳನ್ನು ಯೂಟ್ಯೂಬ್ ನಲ್ಲಿ ಕಾಣಬಹುದು" ಎಂದರು.

Kalladka Prabhakar Bhat is RSS leader and not hindu leader: Mithun rai

ಸಚಿವ ರಮಾನಾಥ ರೈ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎರಡೂ ಮತೀಯವಾದವನ್ನು ವಿರೋಧಿಸಿಕೊಂಡು ಬಂದಿದ್ದು, ಇದರಿಂದಲೇ ಕೆಲವರು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸ್ಥಳೀಯ ಮಾದ್ಯಮಕ್ಕೊಂದು, ರಾಜ್ಯದ ಮಾದ್ಯಮಕ್ಕೊಂದು ಹೇಳಿಕೆ ಕೊಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ ಭಟ್ ವಿರುದ್ಧ ಹರಿಹಾಯ್ದರು.

ತಾವು ಹಿಂದು ಧರ್ಮ ಎನ್ನುವ ಇವರು, ವಿನಾಯಕ ಬಾಳಿಗಾ, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಮೊದಲಾವರನ್ನು ಹಿಂದೂಗಳೇ ಹತ್ಯೆ ಮಾಡಿದಾಗ ಏಕೆ ಮಾತನಾಡಿಲ್ಲ.

ಕಾರ್ತಿಕ್ ರಾಜ್ ಹತ್ಯೆ ವಿರೋಧಿಸಿ ಜಿಲ್ಲೆಗೆ ಬೆಂಕಿ ಹಾಕುತ್ತೇನೆಂದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದಾಗ ಇವರ ಶಾಸಕರೇಕೆ ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲ.

ಚುನಾವಣೆ ಬಂದಾಗ ಓಟಿಗಾಗಿ ಗಲಭೆ ಎಬ್ಬಿಸುವುದು ಇವರ ಜಾಯಮಾನ. ಇದಕ್ಕೆ ಉಸ್ತುವಾರಿ ಸಚಿವರು ಅವಕಾಶ ಕೊಡುವುದಿಲ್ಲ ಎಂದು ಮಿಥುನ್ ರೈ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+