ತಾಯಿ ಕಾಲುಂಗುರ ತರಲು ಹೋದ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

ಮಂಗಳೂರು, ಆಗಸ್ಟ್ 2: ತಾಯಿಯ ಕಾಲುಂಗುರ ತರಲು ಹೋದ ಬಾಲಕಿ ಮೇಲೆ ಆಭರಣ ಮಳಿಗೆಯ ಮಾಲೀಕ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ಬಂಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಜುಲೈ 31ರಂದು ಸಂಜೆ ಬಂಟ್ವಾಳ ತಾಲ್ಲೂಕು ಉಳಿ ಗ್ರಾಮದ ಕಕ್ಕೆಪದವು ಧನಲಕ್ಷ್ಮಿ ಜ್ಯುವೆಲ್ಲರ್ಸ್ ಗೆ 10 ವರ್ಷ ಪ್ರಾಯದ ಬಾಲಕಿ ರಿಪೇರಿಗೆಂದು ಕೊಟ್ಟಿದ್ದ, ತನ್ನ ತಾಯಿಯ ಕಾಲುಂಗುರವನ್ನು ತರಲು ಅಂಗಡಿಗೆ ಹೋಗಿದ್ದಾಳೆ. ಯಾರೂ ಇಲ್ಲದ ಆ ಸಂದರ್ಭವನ್ನು ಬಳಸಿಕೊಂಡ ಧನಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕ ಯೋಗೀಶ, ಬಾಲಕಿಯನ್ನು ಅಂಗಡಿಯ ಒಳಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

Jewellery Shop Owner Arrested In Sexual Harassment In Bantwal

ಬಾಲಕಿಯು ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದು, ಆಗಸ್ಟ್ 1 ರಂದು ಸಂತ್ರಸ್ಥ ಬಾಲಕಿಯ ತಾಯಿ ಪೂಂಜಲ್ ಕಟ್ಟೆ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ಸೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಯೋಗೀಶ ಆರ್ಚಾಯ (37) ನನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+