ಕಾಂಗ್ರೆಸ್ ವಿರುದ್ಧ ಜೆಡಿಎಸ್‌ನ ಬೋಜೇಗೌಡ ಹೇಳಿಕೆ: ಖಾದರ್ ಆಕ್ಷೇಪ
ಮಂಗಳೂರು, ಆಗಸ್ಟ್ 04: ಕಾಂಗ್ರೆಸ್ ವಿರುದ್ಧ ಜೆ.ಡಿ.ಎಸ್ ಮುಖಂಡ ಬೋಜೆಗೌಡ ನೀಡಿರುವ ಹೇಳಿಕೆ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ. ಬೋಜೆ ಗೌಡರ ಹೇಳಿಕೆ ವಿರುದ್ಧ ಕಿಡಿಕಾರಿರುವ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೋಜೆಗೌಡ ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ . ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಕುಟುಕಿದರು.
ಕಾಂಗ್ರೆಸ್ ಎಲ್ಲಾ ಜಾತಿ,ಧರ್ಮ,ಮತ ಗಳನ್ನು ಒಗ್ಗುಡಿಸಿದ ಪಕ್ಷ. ಕಾಂಗ್ರೆಸ್ ಎಂದಿಗೂ ಜಾತಿ,ಧರ್ಮ , ಆಧಾರದ ಮೇಲೆ ಭೇದಭಾವ ಮಾಡಿಲ್ಲ. ಬೋಜೇಗೌಡರು ಈ ರೀತಿ ಹೇಳಿರುವುದು ಸರಿಯಲ್ಲ ಎಂದಿದ್ದಾರೆ.

ಇಂತಹ ಹೇಳಿಕೆ ಬೋಜೇಗೌಡ ಅವರಿಗೆ ಶೋಭೆ ತರುವಂತಹದ್ದಲ್ಲ. ಈ ಹೇಳಿಕೆ ಅವರ ಗೌರವಕ್ಕೆ ಧಕ್ಕೆ ತರಲಿದೆ, ಇಂತಹ ಹೇಳಿಕೆಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications