ಕರ್ನಾಟಕ ಬಂದ್ : ದಕ್ಷಿಣ ಕನ್ನಡದಲ್ಲಿ ಬಂದ್‌ಗೆ ಬೆಂಬಲವಿಲ್ಲ
ಮಂಗಳೂರು, ಜವನರಿ 24 : ಕನ್ನಡ ಒಕ್ಕೂಟ ಕರೆ ನೀಡಿರುವ ಜ.25ರ ಕರ್ನಾಟಕ ಬಂದ್‌ಗೆ ಮಂಗಳೂರಿನಲ್ಲಿ ಬೆಂಬಲ ಸಿಕ್ಕಿಲ್ಲ. ಮಂಗಳೂರಿನ ಸಾಮಾನ್ಯ ಜನರು ಬಂದ್ ಕರೆಗೆ ನೋ ಎಂದಿದ್ದಾರೆ.
ಗುರುವಾರದ ಕರ್ನಾಟಕ ಬಂದ್‌ಗೆ ಮಂಗಳೂರಿನ ಯಾವೊಂದು ಸಂಘಟನೆ ಬೆಂಬಲ ಘೋಷಿಸಿಲ್ಲ. ಆದರೆ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಮಂಗಳೂರು ಶಾಖೆಯ ಕಾರ್ಯಕರ್ತರು ರೈಲು ತಡೆದು ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಬಂದ್ ಕರೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಂದು ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ಆದ್ದರಿಂದ, ಬಂದ್ ಬಿಸಿ ಮಂಗಳೂರು ನಗರಕ್ಕೆ ತಟ್ಟುವುದಿಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಜೀವನ ಸಾಮಾನ್ಯ ವಾಗಿರಲಿದೆ.

ಗುರುವಾರ ಎಂದಿನಂತೆ ಸರಕಾರಿ ಕಚೇರಿ, ಬ್ಯಾಂಕ್, ಆಸ್ಪತ್ರೆ, ಶಾಲಾ ಕಾಲೇಜು ತೆರೆದಿರಲಿವೆ. ಬಸ್ ಮತ್ತು ಆಟೋಗಳ ಸಂಚಾರ ಎಂದಿನಂತೆ ಸಾಮಾನ್ಯವಾಗಿ ಇರಲಿದೆ.
ಮಹದಾಯಿ ಮತ್ತು ಮೇಕೆದಾಟು ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಪದೇ ಪದೇ ಬಂದ್ ನಡೆಸಲಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಬೇಸತ್ತಿದ್ದಾರೆ.

ದಕ್ಷಿಣ ಕನ್ನಡ ಜನರ ಎತ್ತಿನ ಹೊಳೆ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಗೆ ವಾಟಾಳ್ ನಾಗರಾಜ್ ಅವರು ಈವರೆಗೂ ಬೆಂಬಲ ನೀಡಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ತುಳು ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ, ಬಂದ್‌ಗೆ ಬೆಂಬಲ ನೀಡಿಲ್ಲ.
ಬಂದ್ ಮಾಡುವುದರಿಂದ ಪ್ರಮುಖವಾಗಿ ಮಧ್ಯಮ ವರ್ಗ ಹಾಗೂ ಬಡವರ ಹೊಟ್ಟೆಗೆ ಪೆಟ್ಟು ಬೀಳುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಂಗಡಿಗಳ ಹೊರಗೆ, ಹೋಟೆಲ್ ಮುಂದೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಂದ್‌ಗೆ ಬೆಂಬಲವಿಲ್ಲ ಎಂಬ ಭಿತ್ತಿಪತ್ರ ಅಂಟಿಸಲಾಗಿದೆ.












Click it and Unblock the Notifications