ಐಟಿ ದಾಳಿ: ಡಿಕೆಶಿ ಬೆಂಬಲಿಗರಿಂದ ಮಂಗ್ಳೂರು ಆದಾಯ ಕಚೇರಿಗೆ ಕಲ್ಲು
ಮಂಗಳೂರು, ಆಗಸ್ಟ್ 02 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ಆದಾಯ ಕಚೇರಿ ಮೇಲೆ ಕಲ್ಲು ತೂರಿದ್ದಾರೆ.
ಡಿಕೆಶಿ ಅವರ ಮೇಲೆ ದಾಳಿಗೆ ಬಿಜೆಪಿಯ ಪಿತೂರಿ ಎಂದು ಆಕ್ರೋಶಗೊಂಡ ಯೂತ್ ಕಾಂಗ್ರೆಸ್, ನಗರದ ಅತ್ತಾವರದಲ್ಲಿರುವ ಆದಾಯ ಕಚೇರಿ ಮೇಲೆ ಕಲ್ಲು ತೂರಿ ಕಿಟಕಿ ಗ್ಲಾಸ್ ಗಳನ್ನು ಪುಡಿ-ಪುಡಿ ಮಾಡಿದರು.
ಬಳಿಕ ಕಚೇರಿ ಒಳಕ್ಕೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ಹೊರಕ್ಕೆ ಕಳುಹಿಸಿದರು. ನಂತರ ಅಲ್ಲಿಂದ ತೆರಳಿದ ಪ್ರತಿಭಟನಾಕಾರರು, ಎದುರಿನ ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.












Click it and Unblock the Notifications