• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ಧಾರ್ಥ್ ಪ್ರಕರಣದ ತನಿಖೆ 4 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ

|

ಮಂಗಳೂರು, ಆಗಸ್ಟ್ 2: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿನ ಪ್ರಕರಣವನ್ನು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುವಂತೆ ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

 ಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕ ಸಿದ್ಧಾರ್ಥ ಸಾವು: 'ತೆರಿಗೆ ಭಯೋತ್ಪಾದನೆ' ಬಗ್ಗೆ ಉದ್ಯಮಿಗಳ ಆತಂಕ

ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬೆಂಗಳೂರಲ್ಲಿ ಸಿದ್ಧಾರ್ಥ ಕುಟುಂಬ ಸದಸ್ಯರು, ಅವರ ಮಾಲೀಕತ್ವದ ಸಂಸ್ಥೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದು ತಂಡ ತಂತ್ರಜ್ಞಾನ ಬಳಸಿ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದೆ. ಈಗಾಗಲೇ ಸಿದ್ಧಾರ್ಥ ಅವರ ಕಾರು ಚಾಲಕನನ್ನು ವಿಚಾರಣೆ ನಡೆಸಲಾಗಿದೆ. ಅವರಿಂದ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿಕೊಡಲಾಗಿದೆ. ಇದಲ್ಲದೆ, ಬ್ರಹ್ಮರಕೂಟ್ಲು ಟೋಲ್ ‌ಗೇಟ್‌ನಿಂದ ಪಂಪ್ ‌ವೆಲ್ ‌ಗೆ ಬಂದ ಬಳಿಕ ಹಾಗೂ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾದವರೆಗೂ ಎಲ್ಲ ಸಿಸಿಟಿವಿ ವಿಡಿಯೋ ಗಳನ್ನು ಪಡೆದುಕೊಂಡು ಮಾಹಿತಿ ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ" ಎಂದು ಅವರು ಹೇಳಿದರು.

"ಸಿದ್ಧಾರ್ಥ ಬರೆದಿದ್ದಾರೆನ್ನುವ ಪತ್ರದಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಈಗ ಪತ್ರವನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಪತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಐಟಿ ಅಧಿಕಾರಿಗಳಿಗೆ ಯಾವುದೇ ತನಿಖಾ ನೋಟಿಸ್ ನೀಡಿಲ್ಲ" ಎಂದು ಹೇಳಿದ ಅವರು, ಸಿದ್ಧಾರ್ಥ ಅವರ ಹಣಕಾಸು ಸಲಹೆಗಾರರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡು 4 ದಿನಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ತನಿಖಾ ತಂಡಕ್ಕೆ ಸೂಚಿಸಿರುವುದಾಗಿ ತಿಳಿಸಿದರು.

ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?

ಮಂಗಳೂರಿನಲ್ಲಿ ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ ಅಲ್ಲಿಯೂ ತನಿಖೆ ನಡೆಸಲಿದೆ. ಉದ್ಯಮಿ ಸಿದ್ಧಾರ್ಥ ದೇಹದ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಫೋರೆನ್ಸಿಕ್ ತಜ್ಞರಿಬ್ಬರು ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಇದರ ವರದಿಯನ್ನು 30 ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ಸಲ್ಲಿಸಲಾಗುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

English summary
Mangaluru Police commissioner Sandeeep Patil instructed the investigation team to complete the case of Cafe Coffee Day owner Siddharth's death within four days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X