ಮಂಗಳೂರು; ಸಮುದ್ರದಲ್ಲಿ ಸಿಲುಕಿದ ಹಡಗು; 15 ಸಿಬ್ಬಂದಿ ರಕ್ಷಣೆ
ಮಂಗಳೂರು, ಜೂನ್ 22: ತಾಂತ್ರಿಕ ದೋಷದಿಂದ ಸರಕು ಸಾಗಾಟದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗುವ ಭೀತಿ ಎದುರಿಸುತ್ತಿರುವ ಘಟನೆ ಮಂಗಳೂರಿನ 5.6 ನಾಟೆಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಮಲೇಷ್ಯಾದಿಂದ ಲೆಬನಾಲ್‌ಗೆ ಸಾಗುತ್ತಿದ್ದ ಪ್ರಿನ್ಸೆಸ್ ಮಿರಾಲ್ ಎಂಬ ಹೆಸರಿನ ಹಡಗು ಇದಾಗಿದ್ದು, ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವಘಢ ಸಂಭವಿಸಿದೆ. ಹಡಗಿನಲ್ಲಿದ್ದ 15 ಮಂದಿ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
ಈ ನೌಕೆ ಲೆಬನಾಲ್ ದೇಶದಿಂದ ಮಲೇಶ್ಯಾದಿಂದ ಉಕ್ಕಿನ ಕಾಯಿಲ್ ಗಳನ್ನು ಸಾಗಿಸುತಿತ್ತು. ಉಳ್ಳಾಲ ಕಡಲಕಿನಾರೆಯಿಂದ ಐದು ನಾಟಿಕಲ್ ಮೈಲ್ ದೂರದಲ್ಲಿ ಸಂಚಾರ ಮಾಡುತ್ತಿದ್ದ ಸಂಧರ್ಭದಲ್ಲಿ ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡು ತಳಸ್ಪರ್ಶ ಮಾಡಿ ಮುಳುಗುವ ಭೀತಿ ಎದುರಿಸಿದೆ.
ಕೂಡಲೇ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ ಮೊರೆ ಹೋಗಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋಸ್ಟ್ ಗಾರ್ಡ್ ನೌಕೆಗಳಾದ ಅಮರ್ತ್ಯ ಮತ್ತು ವಿಕ್ರಂ ನೌಕೆಗಳನ್ನು ಸ್ಥಳಕ್ಕೆ ಕಳುಹಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಬ್ಬರದ ಕಡಲ ನಡುವೆ ಕೋಸ್ಟ್ ಗಾರ್ಡ್ ಸಾಹಸಮಯ ಕಾರ್ಯಾಚರಣೆ ನಡೆಸಿ 15 ಮಂದಿ ಸಿರಿಯನ್ ನಾವಿಕರನ್ನು ರಕ್ಷಣೆ ಮಾಡಿದೆ.
ಪ್ರಿನ್ಸೆನ್ ಮಿರಾಲ್ ಹಡಗು 32 ವರ್ಷದ ಹಳೆಯ ಹಡುಗು ಆಗಿದ್ದು, 1990 ಸೆಪ್ಟೆಂಬರ್ 20 ರಂದು ಸರಕು ಸಾಗಾಟದ ಸೇವೆಗೆ ತಯಾರು ಮಾಡಲಾಗಿತ್ತು. ಜಪಾನ್ ಮೂಲದ ಸೆವೆನ್ ಓಷಿಯನ್ ಸಂಸ್ಥೆ ಈ ಹಡಗನ್ನು ನಿರ್ಮಾಣ ಮಾಡಿದ್ದು ಫೈವ್ ಒಷಿಯನ್ ಅಡ್ಮಿನಿಸ್ಟ್ರೇಶನ್ ಕಂಪೆನಿ ಮಾಲೀಕತ್ವದಲ್ಲಿದೆ. ಅರಬ್ಬೀ ಸಮುದ್ರದಲ್ಲಿ ಅವಘಡ ಸಂಧರ್ಭದಲ್ಲಿ ಈ ನೌಕೆ ನವಮಂಗಳೂರು ಬಂದರಿಗೆ ಆಂಕರೇಜ್ ಗೆ ಬರಲು ಅನುಮತಿ ಯನ್ನು ಕೇಳಿದೆ. ಆದರೆ ನವಮಂಗಳೂರು ಬಂದರಿನ ನಿಯಮದ ಪ್ರಕಾರ ಹಳೆಯ ಹಡಗುಗಳಿಗೆ ಬಂದರು ಪ್ರವೇಶಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಅವಕಾಶ ನಿರಾಕರಿಸಲಾಗಿದೆ..
|
ಜಲಸಮಾಧಿಯಾಗುವ ಆತಂಕ
ಕೊನೆಗೆ ಕೋಸ್ಟ್ ಗಾರ್ಡ್ ಮೂಲಕ ನಾವಿಕರು ಸಹಾಯ ಕೇಳಿದ್ದಾರೆ. ಪ್ರಸ್ತುತ ಹಡಗಿನಲ್ಲಿದ್ದ ಎಲ್ಲಾ ನಾವಿಕರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಸದ್ಯ ಹಡಗಿನಲ್ಲಿ ಮೂರು ರಂಧ್ರಗಳು ಕಾಣಿಸಿಕೊಂಡಿದ್ದು ಆ ರಂಧ್ರದ ಮೂಲಕ ನೀರು ಒಳಹೊಕ್ಕುತ್ತಿದೆ. ಹಡಗು ಜಲಸಮಾಧಿಯಾದರೆ ಜಲಮಾಲಿನ್ಯವಾಗುವ ಆತಂಕ ಕೂಡಾ ಎದುರಾಗಿದೆ. ದಕ್ಷಿಣ ಕನ್ನಡ, ಉಡುಪಿ ಕಡಲ ತೀರದಲ್ಲಿ ಹಲವು ನೌಕೆಗಳು ಜಲಸಮಾಧಿಯಾಗಿದೆ. ಕಡಲ ಅಬ್ಬರ ಜಾಸ್ತಿ ಇರೋದರಿಂದ ಪ್ರಿನ್ಸಸ್ ಮಿರಾಲ್ ನೌಕೆ ಕೂಡಾ ಈ ಪಟ್ಟಿಗೆ ಸೇರ್ಪಡೆಯಾದಂತೆ ಕಾಣುತ್ತಿದೆ.

ತಣ್ಣೀರುಭಾವಿಯಲ್ಲಿ 2 ಹಡಗುಗಳು ಮುಳುಗಡೆ
29 ವರ್ಷದ ಹಿಂದೆ ತಣೀರುಬಾವಿ ಬಳಿ ಸಮುದ್ರದಲ್ಲಿ ಮುಳುಗಿದ್ದ ಸಿಂಗಪುರ ಮೂಲದ ಓಷನ್ ಬ್ರೌಸಿಂಗ್ ಹಡಗಿನ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ, ಎರಿಟ್ರಿಯಾದ ಎಂ.ವಿ. ಡೆನ್ ಡೆನ್ ಹಡಗು 2007ರಲ್ಲಿ ಮಂಗಳೂರಿನ ತಣ್ಣೀರುಬಾವಿ ಬಳಿ ಅಪಘಾತಕ್ಕೊಳಗಾಗಿ ಮುಳುಗಿತ್ತು. ನೌಕೆಯಲ್ಲಿದ್ದ 24 ಸಿಬಂದಿಗಳ ಪೈಕಿ ಮೂವರು ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು. ಇನ್ನೂ ಇದು ಪೂರ್ಣ ವಿಲೇವಾರಿಯಾಗಿಲ್ಲ.
ಮ್ಯಾಂಗನೀಸ್ ಅದಿರನ್ನು ಸಾಗಿಸುತ್ತಿದ್ದ ಹಡಗು ಮುಳುಗಡೆ
ಆ ಬಳಿಕ 2008ರಲ್ಲಿ ಚೈನೀಸ್ ಹಡಗು 'ಚಾಂಗ್ ಲಿ ಮನ್' ಪ್ರತಿಕೂಲ ಹವಾಮಾನದಿಂದ ಗಾಳಿಯ ರಭಸಕ್ಕೆ ತಣ್ಣೀರು ಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿತ್ತು. ಆದರೆ ಈ ಹಡಗು ಮುಳುಗಡೆ ಆಗಿರಲಿಲ್ಲ. 2008 ಜು.17ರಂದು ನವಮಂಗಳೂರು ಬಂದರಿನಿಂದ 13,000 ಟನ್ ಮ್ಯಾಂಗನೀಸ್ ಅದಿರನ್ನು ಹೊತ್ತು ಚೀನಾಕ್ಕೆ ಹೊರಟಿದ್ದ ಇಥಿಯೋಪಿಯಾದ 'ಏಶಿಯನ್ ಫಾರೆಸ್ಟ್' ಹಡಗು ಪ್ರತಿಕೂಲ ಹವಾಮಾನದಿಂದ ಮುಂದಕ್ಕೆ ಚಲಿಸಲಾಗದೆ ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿತ್ತು. ಈ ಹಡಗಿನ ಅವಶೇಷವನ್ನು ಕೂಡ ಪೂರ್ಣವಾಗಿ ತೆಗೆಯಲು ಕೆಲವು ವರ್ಷಗಳೇ ಬೇಕಾಯಿತು.

2019ರಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಜ್ಜರ್ ನೌಕೆ ಜಲಸಮಾಧಿ
2021ರಲ್ಲಿ ಎಂಆರ್‌ಪಿಎಲ್ ತೇಲು ಜೆಟ್ಟಿಯ ನಿರ್ವಹಣೆಗೆ ಹೋಗುತ್ತಿದ್ದ ಅಲಯನ್ಸ್ ಎಂಬ ಟಗ್ ತೌಖ್ತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ನೀರುಪಾಲಾಗಿ ಇಬ್ಬರು ಮೃತಪಟ್ಟಿದ್ದರು. ಇದೇ ದಿನ ಕೋರ ಮಂಡಲ್ ಎನ್ನುವ ಟಗ್ ಕಾಪು ಬಳಿಯ ಮೂಲ್ಕಿರಾಕ್ಸ್ ಎಂಬಲ್ಲಿ ತಳಸ್ಪರ್ಶಗೊಂಡಿತ್ತು. ಬಳಿಕ ಅದರ ನಾವಿಕರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿತ್ತು. ಈ ನೌಕೆ ಈಗಲೂ ಅಲ್ಲೇ ಉಳಿದುಕೊಂಡಿದೆ. ಇನ್ನು 2019ರಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಜ್ಜರ್ ನೌಕೆ ನವಮಂಗಳೂರು ಬಂದರು ಬಳಿ ಜಲ ಸಮಾಧಿಯಾಗಿತ್ತು. ಅದೇ ಕಂಪನಿಗೆ ಸೇರಿದ ಭಗವತಿ ಪ್ರೇಮ್ ಎಂಬ ಡ್ರೆಜ್ಜರನ್ನು ಸುರತ್ಕಲ್ ಬಳಿಯ ಹೊಸಬೆಟ್ಟು ಕಡಲ ಕಿನಾರೆಯಲ್ಲಿ ನಿಲ್ಲಿಸಲಾಗಿದ್ದು ಈಗಲೂ ತೆರವಾಗದೆ ಬಾಕಿಯಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications