ಮಂಗಳೂರು ಪಾಲಿಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಡಿಶುಂ ಡಿಶುಂ
ಮಂಗಳೂರು, ಅಕ್ಟೋಬರ್ 30: ಮಂಗಳೂರು ಮಹಾನಗರ ಪಾಲಿಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಮಂಗಳೂರು ಮಹಾನಗರ ಪಾಲಿಕೆ ಟಿಕೆಟ್ ಹಂಚಿಕೆ ನಡೆದ ಬೆನ್ನಿಗೆ ಆಕಾಂಕ್ಷಿ ಅಭ್ಯರ್ಥಿಗಳಿಂದ ಬುಧವಾರ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿದ್ದಕ್ಕೆ ಗುಲ್ಝಾರ್ ಬಾನು ಹಾಗೂ ಶಾಸಕ ಮೊಯಿದ್ದೀನ್ ಬಾವ ಅವರ ಬೆಂಬಲಿಗರ ನಡುವೆ ಹೊಯ್ ಕೈ ನಡೆದಿದೆ. ಸುರತ್ಕಲ್ ವಾರ್ಡ್ ನಲ್ಲಿ ಈ ಹಿಂದೆ ಸೋತಿದ್ದ ಗುಲ್ಝಾರ್ ಬಾನು ಅವರಿಗೆ ಮತ್ತೆ ಟಿಕೆಟ್ ನೀಡುವುದಾಗಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ ಕೊಟ್ಟಿದ್ದರು.

ಅದರೆ, ಟಿಕೆಟ್ ನೀಡದಿದ್ದಕ್ಕೆ ಗುಲ್ಝಾರ್ ಬಾನು ಪುತ್ರ ಹಾಗೂ ಮೊಯಿದ್ದೀನ್ ಬಾವ ನಡುವೆ ಹೊಯ್ ಕೈ ನಡೆದಿದೆ. ಕಾಂಗ್ರೆಸ್ ಮುಖಂಡರು ಪಾಲಿಕೆ ಟಿಕೆಟ್ ಪಡೆದವರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಿಗೆ ಈ ಗಲಾಟೆಯು ವರದಿ ಆಗಿದೆ. ನವೆಂಬರ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ.












Click it and Unblock the Notifications