• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೂರಿಲ್ಲದ ಮಂಗಳೂರಿನ ಕಿತ್ತಳೆ ವ್ಯಾಪಾರಿ 'ಹಾಜಬ್ಬ' ಅಕ್ಷರ ಸ್ನೇಹಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಆ ವ್ಯಕ್ತಿ ಕೋಟ್ಯಾಧಿಪತಿಯಲ್ಲ. ಸ್ವಂತ ಮನೆಯೂ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು. ಇವರ ಮಹಾಮನಸ್ಸಿಗೆ ದೇಶ ವಿದೇಶದಲ್ಲೂ ಇವರ ಕಿತ್ತಳೆ ಹಣ್ಣು ವ್ಯಾಪಾರ ಬಹಳ ಜೋರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಇವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

ಹಾಜಬ್ಬ ಪ್ರಯತ್ನದಿಂದ ಎಷ್ಟರಲ್ಲಿ ಶಾಲೆ ಮಂಜೂರಾಯಿತು?

ಹಾಜಬ್ಬ ತನ್ನೂರಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಬೇಕಾದರೆ ಸರಕಾರಿ ಶಾಲೆ ಆಗಬೇಕು ಎಂದು 1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಹಾಜಬ್ಬರ ಪ್ರಯತ್ನದ ಫಲವಾಗಿ 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಯಿತು. ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು.

ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಟ್ಟರು. ಇಷ್ಟೆಲ್ಲಾ ಶ್ರಮಿಸಿದ ಇವರಿಗೆ ಲಕ್ಷಗಟ್ಟಲೆ ಪ್ರಶಸ್ತಿಗಳ ಹೊಳೆಯೇ ಹರಿದಿದೆ. ಇವರ ಸಂಕೀರ್ಣ ಸಾಧನೆಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.[ಮೃತ ಪ್ರಾಣಿಗಳ ಆತ್ಮಕ್ಕೆ ಮುಕ್ತಿ ಕಾಣಿಸುವ ಬಂಧುವೇ ಉದಯಗಟ್ಟಿ]

Mangaluru

ಪ್ರಶಸ್ತಿ ಜೊತೆ ಬಂದ ಹಣವನ್ನು ಏನು ಮಾಡಿದರು?

ಹಾಜಬ್ಬರ ಶೈಕ್ಷಣಿಕ ಕಾಳಜಿಯನ್ನು ಮಾಧ್ಯಮಗಳು ಹೊರ ಜಗತ್ತಿಗೆ ತೆರೆದಿಟ್ಟಾಗ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವ, ಸಹಾಯಧನ ನೀಡಿದರು. ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ನೀಡಿದ ಪ್ರಶಸ್ತಿ ಮತ್ತು 5 ಲಕ್ಷ ರೂ. ಮೊತ್ತದ ಪ್ರಶಸ್ತಿ ಹಾಗೂ ನಗದನ್ನು ಶಾಲೆಯ ಅಭಿವೃದ್ಧಿಗೆ ತೊಡಗಿಸಿದರು. ಹಾಜಬ್ಬ ಕಳೆದ 9 ವರ್ಷಗಳಲ್ಲಿ ತನಗೆ ದೊರೆತ ಪ್ರಶಸ್ತಿ ಹಣ ಮತ್ತು ವಿವಿಧ ಸಂಸ್ಥೆಗಳು ನೀಡಿದ ಸಹಾಯಧನವನ್ನು ಶಾಲೆಗೆ ವಿನಿಯೋಗಿಸುತ್ತಾ ಬಂದಿದ್ದಾರೆ.

ದಾನಿಗಳು ಹಣ ನೀಡುವಾಗ ಆ ಹಣದ ಚೆಕ್ಕನ್ನು ಶಾಲಾಭಿವೃದ್ಧಿ ಸಮಿತಿಯ ಹೆಸರಲ್ಲೇ ತೆಗೆದುಕೊಳ್ಳುವ ಹಾಜಬ್ಬ ಕಳೆದ 9 ವರ್ಷಗಳ ಅವಧಿಯಲ್ಲಿ 50 ಲಕ್ಷಕ್ಕೂ ಅಧಿಕ ಹಣ ಹಾಜಬ್ಬರ ಮೂಲಕ ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿನಿಯೋಗವಾಗಿದೆ. ಆದರೂ ತನಗಿರಲು ಒಂದು ಒಳ್ಳೆಯ ಮನೆ ನಿರ್ಮಿಸಿಕೊಂಡಿಲ್ಲ ಈ ಅಕ್ಷರ ಸ್ನೇಹಿ. ಹಾಜಬ್ಬ ಅವರ ಸಮಾಜಕಾರ್ಯ ಅರಿತ ಸಂಘಟನೆ ಇವರಿಗೊಂದು ಮನೆ ನಿರ್ಮಿಸಿಕೊಟ್ಟಿದೆ.['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]

ಹಾಜಬ್ಬ ಅವರ ಬದುಕು ಸರಳತೆಗೆ ಹೆಸರು:

ಬೆಳಗಾಗುತ್ತಲೇ ಬಿಳಿ ಆಂಗಿ ಬಿಳಿ ಪಂಚೆ ಧರಿಸಿ ಮಂಗಳೂರಿನ ಬಸ್‌ ನಿಲ್ದಾಣಗಳಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಹಣ್ಣು ಮಾರುವ ಕಾಯಕ ಮುಂದುವರಿಸಿದ್ದಾರೆ. ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕಿತ್ತಳೆ ಹಣ್ಣು ಮಾರುವುದರೊಂದಿಗೆ ಶಾಲೆಯ ಅಭಿವೃದ್ಧಿಯ ಬಗ್ಗೆ ನಿತ್ಯ ಚಿಂತನೆ ನಡೆಸುವ ಹಾಜಬ್ಬ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಕುರಿತು ದಾನಿಗಳನ್ನು, ಶಿಕ್ಷಣ ಪ್ರೇಮಿಗಳನ್ನು ಭೇಟಿ ಮಾಡುವ ಕಾರ್ಯ ಇನ್ನೂ ಬಿಟ್ಟಿಲ್ಲ.[ಮಂಗಳೂರು ಪ್ರಸಾದ್ ಶೆಟ್ಟಿ 'ಸ್ಟ್ರಾಂಗೆಸ್ಟ್ ಮ್ಯಾನ್ ಆಫ್ ಇಂಡಿಯಾ']

ಹಾಜಬ್ಬ ಹೇಳುವುದೇನು?

ರಾಜ್ಯೋತ್ಸವ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಪತ್ರಿಕೆ ಅವರನ್ನು ಸಂಪರ್ಕಿಸಿದಾಗ ಒಂದು ಪೈಸೆ ಇಲ್ಲದವ ನನ್ನನ್ನು ಎಲ್ಲರೂ ಗೌರವಿಸುವಾಗ ಯಾವ ರೀತಿಯ ಕೃತಜ್ಞತೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ಇಂದು ನನ್ನ ಯಾವುದೇ ಸಾಧನೆಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು ಎಂದು ಅವರು ಇಂದಿಗೂ ಸಂತೋಷ ವ್ಯಕ್ತಪಡಿಸಿದರು.

English summary
Harekala Hajabba is Fruit vendor. He have no House. But he build a School in Newpadpu Village, about 350 KM (217 miles) from Bengaluru city. He earns about 150 rupees a day from selling oranges in the near city of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X