ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಡ್ರಾಯ್ಡ್ ಗೆ 1,000, ಐಫೋನಿಗೆ 2,000; ಕಾಲೇಜಲ್ಲಿ ಹೀಗೊಂದು ದಂಡ!

|
Google Oneindia Kannada News

ಮಂಗಳೂರು, ಮಾರ್ಚ್ 17: ಒಂದೊಂದು ಮೊಬೈಲ್ ಬಳಸಿದರೆ ಒಂದೊಂದು ರೀತಿ ದಂಡ. ಇದೆಂಥಾ ತಾರತಮ್ಯ? ಎಂದು ಕೇಳುತ್ತಿದ್ದಾರೆ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಗಳಿಲ್ಲದೇ ಜೀವನವೇ ಮುಂದೆ ಸಾಗಲ್ಲ ಅನ್ನೋ ಪರಿಸ್ಥಿತಿ ಇದೆ. ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತಿದೆ .ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ಮೊಬೈಲ್ ತರುವಂತಿಲ್ಲ ಅನ್ನೋ ನಿಯಮ ಹಲವವು ಕಾಲೇಜುಗಳಲ್ಲಿ ಜಾರಿಯಲ್ಲಿದೆ.

If students carry mobile phone in class then pay huge fine as per model in Mangaluru

ಬೆಂಗಳೂರು: ಕಾಲೇಜುಗಳ ಬಳಿ ಗುಲಾಬಿ ಪೊಲೀಸ್ ಚೌಕಿಬೆಂಗಳೂರು: ಕಾಲೇಜುಗಳ ಬಳಿ ಗುಲಾಬಿ ಪೊಲೀಸ್ ಚೌಕಿ

ಆದರೆ ಕಾಲೇಜು ಕ್ಯಾಂಪಸ್ ಗಳಲ್ಲಿ ಮೊಬೈಲ್ ಬಳಕೆ ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಲೇಜಿಗೆ ಮೊಬೈಲ್ ತರುವ ವಿದ್ಯಾರ್ಥಿಗಳಿಗೆ ಭಾರೀ ದಂಡ ವಿಧಿಸುವ ನಿಯಮವನ್ನು ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜು ಜಾರಿಗೆ ತಂದಿದೆ.

ಆದರೆ ವಿಷಯ ಅದಲ್ಲ. ಇಲ್ಲಿ ದಂಡದ ನಿಯಮ ಹೇಗಿದೆ ಅಂದರೆ, ಮೊಬೈಲ್ ಫೋನ್ ನ ಮಾಡೆಲ್ ಮೇಲೆ ದಂಡದ ಮೊತ್ತ ನಿರ್ಧಾರವಾಗುತ್ತದೆ. ಆಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಗಳಿಗೆ ಬೇರೆ ಬೇರೆ ಫೈನ್ ರೇಟ್ ನಿರ್ಧಾರ ಮಾಡಲಾಗಿದೆ. ಇದು ಕಾಲೇಜಿನ ವಿದ್ಯಾರ್ಥಿಗಳನ್ನು ಕೆರಳಿಸಿದೆ.

'ಮೂರೇ ಮೂರು ಪೆಗ್'ಗೆ ಕುಣಿದಾಡಿದ ಪುತ್ತೂರು ಫಿಲೋಮಿನಾ ವಿದ್ಯಾರ್ಥಿಗಳು'ಮೂರೇ ಮೂರು ಪೆಗ್'ಗೆ ಕುಣಿದಾಡಿದ ಪುತ್ತೂರು ಫಿಲೋಮಿನಾ ವಿದ್ಯಾರ್ಥಿಗಳು

ಆಂಡ್ರಾಯ್ಡ್ ಫೋನ್ ಗೆ 1 ಸಾವಿರ ರೂಪಾಯಿ ದಂಡ , ಐಫೋನ್ ಗೆ 2 ಸಾವಿರ ರೂಪಾಯಿ ದಂಡವನ್ನು ಕಾಲೇಜು ಆಡಳಿತ ಮಂಡಳಿ ನಿಗದಿ ಮಾಡಿದೆ.

ಅಲೋಶಿಯಸ್ ಪಿಯು ಕಾಲೇಜಿನಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹೆಚ್ಚಿನವರು ತುಸು ಶ್ರೀಮಂತ ಮನೆತನದ ವಿದ್ಯಾರ್ಥಿಗಳಾಗಿದ್ದಾರೆ. ಈ ಕಾರಣದಿಂದ ವಿದ್ಯಾರ್ಥಿಗಳು ತರಗತಿ ಮೊಬೈಲ್ ತಂರುತ್ತಿದ್ದಾರೆ. ಕಾಲೇಜಿನಲ್ಲಿ ಮೊಬೈಲ್ ಬಳಕೆಗೆ ನಿಷೇಧ ಇದ್ದರೂ, ವಿದ್ಯಾರ್ಥಿಗಳು ನಿಯಮಗಳಿಗೆ ಕ್ಯಾರೆ ಎನ್ನದೆ ಮೊಬೈಲ್ ಫೋನ್ ಗಳನ್ನು ತರುತ್ತಿರುವುದು ಬೆಳಕಿಗೆ ಬಂದಿತ್ತು.

ಕಾಲೇಜಿನಲ್ಲಿ ಮೊಬೈಲ್ ಫೋನ್ ಹಾವಳಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಲೇಜಿನ ಸಿಬ್ಬಂದಿಗಳೇ ತರಗತಿಗಳಿಗೆ ಹಠಾತ್ ರೈಡ್ ಮಾಡಿದ್ದ ವೇಳೆ 400ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ವಿದ್ಯಾರ್ಥಿಗಳ ಬಳಿ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಮೊಬೈಲ್ ಫೋನ್ ಹಾವಳಿಗೆ ಕಡಿವಾಣ ಹಾಕಲು ಮೊಬೈಲ್ ಫೋನ್ ಮೊಡೆಲ್ ಗಳ ಮೇಲೆ ದಂಡ ನಿಗದಿ ಮಾಡಲಾಗಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಳಕೆಗೆಂದೇ 10ಕ್ಕೂ ಹೆಚ್ಚು ಕಾಯಿನ್ ಬಾಕ್ಸ್ ಫೋನ್ ಗಳನ್ನು ಅಳವಡಿಸಲಾಗಿದೆ. ಅನಿವಾರ್ಯ ಕಾರಣಗಳಿಗೆ ಮೊಬೈಲ್ ಫೋನ್ ಕಾಲೇಜಿಗೆ ತಂದರೂ ತರಗತಿಗೆ ತೆರಳುವುದಕ್ಕೂ ಮುನ್ನ ಹೊರಗೆ ಕಾಲೇಜಿನ ಸಿಬ್ಬಂದಿ ಬಳಿ ಮೊಬೈಲ್ ತೆಗೆದಿಡಲು ಅವಕಾಶ ನೀಡಲಾಗಿದೆ.
ಆದರೆ ವಿದ್ಯಾರ್ಥಿಗಳು ತರಗತಿ ಒಳಗೆಯೇ ಮೊಬೈಲ್ ಫೋನ್ ಬಚ್ಚಿಟ್ಟುಕೊಂಡು ದುರ್ಬಳಕೆ ಮಾಡ್ತಾರೆಂಬುದು ಕಾಲೇಜಿನ ಕೆಲ ವಿದ್ಯಾರ್ಥಿಗಳ ಅಭಿಪ್ರಾಯ. ಹೀಗಾಗಿ ಈ ದಂಡ ಹಾಕುವ ನಿಯಮವನ್ನು ಜಾರಿಗೆ ತಂದಿದೆ.

ಅಲೋಶಿಯಸ್ ಕಾಲೇಜು ಆಡಳಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರೂ, ದೊಡ್ಡ ಮೊತ್ತದ ದಂಡ ವಸೂಲಿ ಸುಲಿಗೆಗೆ ಸಮಾನವೆಂಬ ಆರೋಪವೂ ಕೇಳಿಬಂದಿದೆ.

English summary
The St Aloysius PU College of Mangaluru has decided to fix a fine to students for mobile phone use in the college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X