ಹಿಂದು ಸಮಾಜೋತ್ಸವಕ್ಕೆ ಹರಿದು ಬಂದ ಜನಸಾಗರ
ಮಂಗಳೂರು, ಮಾ.1 : ವಿಶ್ವ ಹಿಂದು ಪರಿಷತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಗಳಲ್ಲಿ ಬೃಹತ್ ಹಿಂದು ಸಮಾಜೋತ್ಸವ ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಕೇಂದ್ರ ಮೈದಾನದವರೆಗೆ ಆಕರ್ಷಕ ಶೋಭಾ ಯಾತ್ರೆ ನಡೆಯಿತು. ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯೆ, ಮಧ್ಯ ಪ್ರದೇಶದ ಸಾದ್ವಿ ಬಾಲಿಕಾ ಸರಸ್ವತಿ, ಸಮಾಜೋತ್ಸವ ಸಮಿತಿ ಗೌರವ ಅಧ್ಯಕ್ಷ ಎಸ್.ಗಣೇಶ್ ರಾವ್ ಹಾಗೂ ಅಧ್ಯಕ್ಷ ವಿಜಯ ವಿಠಲನಾಥ ಶೆಟ್ಟಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು.[ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ವಿಡಿಯೋ ಭಾಷಣ]
ಹಿಂದು ಸಮಾಜೋತ್ಸವ ಸಮಿತಿಯ ಪದಾಧಿಕಾರಿಗಳು, ವಿಶ್ವ ಹಿಂದು ಪರಿಷತ್‌ನ ಮುಖಂಡ ಎಂ.ಬಿ ಪುರಾಣಿಕ್, ಬಜರಂಗದಳದ ಸಂಚಾಲಕ ಶರಣ್ ಪಂಪವೆಲ್ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.[ಮಂಗಳೂರು ಹಿಂದೂ ಸಮಾಜೋತ್ಸವದ ಚಿತ್ರಗಳು]
ಬೆಳಗಾವಿಯಲ್ಲೂ ಶಕ್ತಿ ಪ್ರದರ್ಶನ
ಬೆಳಗಾವಿ ಸಮಾವೇಶದಲ್ಲೂ ಲಕ್ಷಾಂತರ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಯೋಗಿ ಆದಿತ್ಯನಾಥ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಹಾಜರಿದ್ದರು.















Click it and Unblock the Notifications